
ಹಳಿಯಾಳ:- ಕೆನರಾ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ನೀಡದೆ ಇರುವುದನ್ನು ವಿರೋಧಿಸಿ ಹಳಿಯಾಳದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಟೈರ್ ಸುಟ್ಟು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಗ್ರಾಮೀಣ ಸೇರಿದಂತೆ ಪಟ್ಟಣದ ನೂರಾರು ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಳಿಕ ಪ್ರತಿಭಟನಾ ಮೆರವಣಿಗೆ ಮೂಲಕ ಶೀವಾಜಿ ವೃತಕ್ಕೆ ಆಗಮಿಸಿದ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಬಳಿಕ ಟೈರ್ ಸುಟ್ಟು ಪ್ರತಿಭಟಿಸಿದರು.

ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷ ಬಲಾಢ್ಯವಿದ್ದು ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು ಸರಿಯಾದ ಕ್ರಮವಲ್ಲ ಬಿಜೆಪಿ ಅಭ್ಯರ್ಥಿಗೆ ಪ್ರಭಲ ಸ್ಪರ್ದೆ ಒಡ್ಡುವುದು ಕಾಂಗ್ರೇಸ್ ಮಾತ್ರವಾಗಿದ್ದು ಹೈಕಮಾಂಡ ಇದನ್ನು ಅರಿತುಕೊಂಡು ಟಿಕೆಟ್ ನೀಡಬೇಕಿತ್ತು ಆದರೇ ಜೆಡಿಎಸ್ ಗೆ ನೀಡಿರುವುದಕ್ಕೆ ಜಿಲ್ಲಾದ್ಯಂತ ಬೇಸರ ವ್ಯಕ್ತವಾಗಿದೆ. ಕೂಡಲೇ ಹೈಕಮಾಂಡ ಮಧ್ಯ ಪ್ರವೇಶಿಸಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಘೊಟ್ನೇಕರ ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಕೃಷ್ಣಾ ಪಾಟೀಲ, ಮುಖಂಡರಾದ ಸಂಜು ಮಿಶಾಳೆ, ಸತ್ಯಜಿತ್ ಗಿರಿ, ನವೀನ ಕಾಟಕರ, ಮಾಲಾ ಬ್ರಗಾಂಜಾ, ಗುಲಾಬಷಾ ಲತಿಫನವರ ಮೊದಲಾದವರು ಇದ್ದರು.


Leave a Comment