• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜಿಲ್ಲೆಯ ಎಲ್ಲ‌ ಎಪಿಎಮ್ ಸಿಗಳ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು- ರಾಜ್ಯ ಕೃಷಿ ಮಾರಾಟ ಮಂಡಳಿ ನೂತನ ಸದಸ್ಯ ಶ್ರೀನಿವಾಸ ಘೊಟ್ನೇಕರ ಭರವಸೆ

March 20, 2019 by Yogaraj SK Leave a Comment

APMC president Shrinivas ghotnekar

ಹಳಿಯಾಳ : ಉತ್ತರ ಕನ್ನಡ ಜಿಲ್ಲೆಯಿಂದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಸದಸ್ಯನಾಗಿ ಪಕ್ಷಾತೀತವಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಅಭಿವೃದ್ದಿ ಪಡಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ನೂತನ ಸದಸ್ಯ ಹಾಗೂ ಹಳಿಯಾಳ ಎಪಿಎಮ್‍ಸಿ ಅಧ್ಯಕ್ಷರು ಆಗಿರುವ ಶ್ರೀನಿವಾಸ ಘೋಟ್ನೆಕರ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಅಧ್ಯಕ್ಷರುಗಳಾದ ಶಿರಶಿಯ ಸುನೀಲ್ ನಾಯ್ಕ, ಮುಂಡಗೋಡದ ದೇವು ಪಾಟೀಲ್, ಯಲ್ಲಾಪೂರದ ಮಹಾಬಳೇಶ್ವರ ಭಟ್, ಸಿದ್ದಾಪುರದ ಕೆ.ಜಿ.ನಾಗರಾಜ್, ಕುಮಟಾದ ರಾಮನಾಥ್ ಶಾನಭಾಗ್, ಹೊನ್ನಾವರದ ಗೋಪಾಲ್ ನಾಯಕ್, ಕಾರವಾರದ ಗಣಪತಿ ನಾಯ್ಕ ಸೇರಿದಂತೆ ಜಿಲ್ಲೆಯ ಎಲ್ಲಾ ಎಪಿಎಂಸಿ ಸದಸ್ಯರು ಪಕ್ಷಾತೀತವಾಗಿ ಬೆಂಬಲ ನೀಡುವುದರ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆಗಳ ಉನ್ನತಿಗಾಗಿ ಕೈ ಜೋಡಿಸಿದ್ದು ಮುಂದಿನ ದಿನಗಳಲ್ಲಿ ಮಂಡಳಿಯ ಪರವಾಗಿ ಎಲ್ಲಾ ರೀತಿಯ ಅನುದಾನ ಮತ್ತು ಸೌಕರ್ಯಗಳನ್ನು ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು.
ಹಳಿಯಾಳ ಎಪಿಎಂಸಿಯ ಅಭಿವೃದ್ದಿಗಾಗಿ ಇಗಾಗಲೇ 5 ಕೋಟಿ ರೂಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಪಟ್ಟಣದ ಅಂಚಿನಲ್ಲಿರುವ ಬಾಣಸಗೇರಿ ಗ್ರಾಮದ ಸಮೀಪ 25 ಎಕರೆ ಜಮೀನು ಪಡೆಯುವ ಪ್ರಸ್ತಾವಣೆಯು ರಾಜ್ಯ ಸರ್ಕಾರದ ಮಂತ್ರಿ ಮಂಡಳದ ಮುಂದಿದ್ದು ಚುನಾವಣೆಯ ನಂತರ ಆದೇಶ ಹೊರಬಿಳಲಿದೆ. ಅಲ್ಲದೇ ವಿವಿಧ ಕಾಮಗಾರಿಗಳಿಗಾಗಿ 2 ಕೋಟಿ ಹೆಚ್ಚುವರಿ ಅನುದಾನವು ಮಂಜೂರಾಗಿದ್ದು ಶೀಘ್ರದಲ್ಲಿಯೇ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ಸೃಷ್ಟ ಪಡಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಎರಡು ಕೋಲಿಂಗ್ ಟಾವರ್‍ಗಳನ್ನು ನಿರ್ಮಿಸುವ ಚಿಂತನೆ ನಡೆದಿದ್ದು ಇದಕ್ಕಾಗಿ ಒಟ್ಟೂ 10 ಕೋಟಿ ರೂ ಅನುದಾನವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸುವ ಪ್ರಯತ್ನ ಮುಂದುವರೆದಿದ್ದು ಇದರಿಂದ ಇಡೀ ಜಿಲ್ಲೆಯ ಮೀನು, ತರಕಾರಿ, ಹೂ ಮತ್ತು ಹಣ್ಣೂ ಸೇರಿದಂತೆ ಇನ್ನಿತರ ಉದ್ಯಮಿಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆವಣಿಗೆ ಕಾಣಲಿದ್ದು, ಇದರ ಜೊತೆಗೆ ಹೈಟೆಕ್ ಹರಾಜು ಕಟ್ಟೆಯನ್ನು ನಿರ್ಮಿಸಲಾಗುವುದು. ಜಿಲ್ಲೆಯ ಎಪಿಎಂಸಿಗಳ ಸಮಗ್ರ ಅಭಿವೃದ್ದಿಗೆ ತಾವು ಸಿದ್ದರಾಗಿದ್ದು ಎಲ್ಲಾ ಸಮಿತಿಗಳ ಸಹಕಾರ ಮತ್ತು ಸಹಭಾಗಿತ್ವ ಅಗತ್ಯವಾಗಿದೆ ಎಂದರು.
ಹಳಿಯಾಳದಲ್ಲಿ ಎಪಿಎಂಸಿ ಪ್ರಾಗಂಣದಲ್ಲಿ ಪಾದಚಾರಿಗಳ ಮಾರ್ಗ ಮತ್ತು 6 ಅಂಗಡಿಗಳ ಬೃಹತ್ ಸಂಕೀರ್ಣ ನಿರ್ಮಿಸಲಾಗುವುದು, ರೈತಭವನದ ನವೀಕರಣ, ಫೇವರ್ಸ್ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿಗಳು ನಡೆಯಲಿದ್ದು, ಭವಿಷ್ಯದಲ್ಲಿ ಉತ್ತಮ ಸೇವೆಗಳನ್ನು ನೀಡಲು ಇವುಗಳು ಸಹಾಯಕಾರಿಯಾಗಲಿವೆ. ಸುಮಾರು 800 ಮೆಟ್ರಿಕ್ ಟನ್ ಸಾಮಥ್ರ್ಯದ ಎರಡು ದೊಡ್ಡ ಗಾತ್ರದ ಗೋಡಾನ್‍ಗಳನ್ನು ಸಹ ನಿರ್ಮಿಸುವ ಗುರಿ ಹೊಂದಲಾಗಿದ್ದು ರೈತರ ಉತ್ಪನ್ನ ಮತ್ತು ಮಾರುಕಟ್ಟೆ ಒದಗಿಸಲು ತಾವು ಸಿದ್ದರಾಗಿದ್ದೇವೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಯಶವಂತ್ ಪಟ್ಟೇಕರ, ಸಂತೋಷ ಮಿರಾಶಿ ಮತ್ತು ಉಮೇಶ್ ಬೋಳಶೆಟ್ಟಿ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: - rājya kr̥ṣi mārāṭa maṇḍaḷi nūtana sadasya, - State Agriculture Marketing Board New Member, - ರಾಜ್ಯ ಕೃಷಿ ಮಾರಾಟ ಮಂಡಳಿ ನೂತನ ಸದಸ್ಯ, Agriculture Rata Board, APMC president Shrinivas ghotnekar, Development of all APMCs in the district, epi'ensiya abhivr̥ddigāgi igāgalē 5 kōṭi rūgaḷa kāmagārigaḷu pragati, fish, flower and fruit, Ganapathy Naik of Karwar All APMC members are supportive parties, Gopal Nayak of Honnavar, Haḷiyāḷadalli epi'ensi prāgaṇṇa, honnāvarada gōpāl nāyak, hū mattu haṇṇū sēridante, in the district, including the APMC Pragana, jilleya ella‌ epi'em sigaḷa abhivr̥d'dhi, kāravārada gaṇapati nāyka sēridante jilleya ellā epi'ensi sadasyaru pakṣātītavāgi bembala, karnāṭaka rājya, Karnataka State, KG Nagaraj of Siddapura, kr̥ṣi mārāṭa maṇḍaḷi, kumaṭāda rāmanāth śānabhāg, Mahabaleshwar Bhat of Yalapoor, mīnu, muṇḍagōḍada dēvu pāṭīl, Patil of Mundagoda, Product Market Committee, Ramnath Shanbhag of Kumta, Rs.5 crore has already been spent for development of APMC, siddāpurada ke.Ji.Nāgarāj, śramisalāguvudu, Srinivas Ghotner's Guarantee, śrīnivāsa ghoṭnēkara bharavase, tarakāri, utpanna mārukaṭṭe samiti, vegetables, will be working, yallāpūrada mahābaḷēśvara bhaṭ, ಉತ್ಪನ್ನ ಮಾರುಕಟ್ಟೆ ಸಮಿತಿ, ಎಪಿಎಂಸಿಯ ಅಭಿವೃದ್ದಿಗಾಗಿ ಇಗಾಗಲೇ 5 ಕೋಟಿ ರೂಗಳ ಕಾಮಗಾರಿಗಳು ಪ್ರಗತಿ, ಕರ್ನಾಟಕ ರಾಜ್ಯ, ಕಾರವಾರದ ಗಣಪತಿ ನಾಯ್ಕ ಸೇರಿದಂತೆ ಜಿಲ್ಲೆಯ ಎಲ್ಲಾ ಎಪಿಎಂಸಿ ಸದಸ್ಯರು ಪಕ್ಷಾತೀತವಾಗಿ ಬೆಂಬಲ, ಕುಮಟಾದ ರಾಮನಾಥ್ ಶಾನಭಾಗ್, ಕೃಷಿ ಮಾರಾಟ ಮಂಡಳಿ, ಜಿಲ್ಲೆಯ ಎಲ್ಲ‌ ಎಪಿಎಮ್ ಸಿಗಳ ಅಭಿವೃದ್ಧಿ, ತರಕಾರಿ, ಮೀನು, ಮುಂಡಗೋಡದ ದೇವು ಪಾಟೀಲ್, ಯಲ್ಲಾಪೂರದ ಮಹಾಬಳೇಶ್ವರ ಭಟ್, ಶ್ರಮಿಸಲಾಗುವುದು, ಶ್ರೀನಿವಾಸ ಘೊಟ್ನೇಕರ ಭರವಸೆ, ಸಿದ್ದಾಪುರದ ಕೆ.ಜಿ.ನಾಗರಾಜ್, ಹಳಿಯಾಳದಲ್ಲಿ ಎಪಿಎಂಸಿ ಪ್ರಾಗಂಣ, ಹೂ ಮತ್ತು ಹಣ್ಣೂ ಸೇರಿದಂತೆ, ಹೊನ್ನಾವರದ ಗೋಪಾಲ್ ನಾಯಕ್

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...