ಹೊನ್ನಾವರ: ಪಟ್ಟಣದ ಸೇಂಟ್ ಥಾಮಸ್ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಗುಣವಂತೆ ಶಾಲೆಯ ಹೆಣ್ಣು ಮಕ್ಕಳು 5ನೇ ಬಾರಿಗೆ ಜಿಲ್ಲಾ ಚಾಂಪಿಯನ್ ಆಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೀಯಾಂಕ ಗೌಡ(ನಾಯಕಿ) ರಕ್ಷಿತಾ ಗೌಡ,ರಮ್ಯಾ ಗೌಡ, ವೈಶಾಲಿ ಗೌಡ,ರಕ್ಷಿತಾ ಗೌಡ ಸಿಂಚನಾ ಗೌಡ, ಸಂಜನಾ ಗೌಡ, ತೇಜಸ್ವಿನಿ ಗೌಡ, ನಮನಾ ಗೌಡ, ಎಂ.ವಿ.ಕವನಾ, ಕವನಾ ನಾಯ್ಕ, ಶಾಶ್ವತಿ ಶಾಸ್ತ್ರಿ, ದೀಪಿಕಾ ನಾಯ್ಕ, ಸಹನಾ ಗೌಡ, ಚಿತ್ರಾ ಗೌಡ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಹಾಗೂ ಇವರಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ರಾಮಚಂದ್ರ ನಾಯಕ ಇವರಿಗೆ ಶಾಲೆಯ ಶಿಕ್ಷಕರು, ಎಸ್.ಡಿ.ಎಮ್.ಸಿ ಯವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಊರ ನಾಗರಿಕರು ಅಭಿನಂದಿಸಿದ್ದಾರೆ
Leave a Comment