• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನೀರಿನ ಕರವನ್ನು ಹೆಚ್ಚಿಸಿದ್ದಕ್ಕೆ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮೀತಿಯಿಂದ ತೀವೃ ಆಕ್ಷೇಪ

March 23, 2019 by Yogaraj SK Leave a Comment

ದಾಂಡೇಲಿ: ದಾಂಡೇಲಿ ನಗರ ಸಭೆಯವರು ನೀರಿನ ಕರವನ್ನು ಹೆಚ್ಚಿಸಿದರ ಕುರಿತು ಅಕ್ಷೇಪಣೆಯನ್ನು ಸಲ್ಲಿಸುತ್ತಾ ಬಂದರು ಚುನಾಯಿತ ಪ್ರತಿನಿಧಿಗಳಾಗಲಿ ಸರರ್ಕಾರಿ ಅಧಿಕಾರಿಗಳಾಗಲಿ ಆಕ್ಷೇಪಣೆಗೆ ಕ್ಯಾರೆ ಎನ್ನದೇ ಹಾರಿಕೆಯ ಉತ್ತರಗಳನ್ನು ನೀಡುತ್ತಾ ದಿನ ಕಳೆಯುತ್ತಿದ್ದಾರೆಂದು ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮೀತಿಯ ಅಧ್ಯಕ್ಷ ಅಕ್ರಂಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಬೇಕೆಂಬುದು ದಾಂಡೇಲಿ ಸಾರ್ವಜನಿಕರ ಬೇಡಿಕೆಯಾಗಿದೆ ಅಲ್ಲದೇ ಕಳೇದ ಮೂರು ವರ್ಷದಿಂದ ದಾಂಡೇಲಿ ನಗರದ ಹೀರಿಯ ನಾಗರಿಕರ ಸಮಿತಿ ಮತ್ತು ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿಯವರು ಉಚಿತ ನೀರು ಒದಗಿಸುವಂತೆ ಆಗ್ರಹಿಸುತ್ತಾ ಬಂದಿದ್ದಾರೆ ಆದರೇ ನಗರಸಭೆಯವರು ಮಾತ್ರ ನೀರಿನ ಕರವನ್ನು ಹೆಚ್ಚಿಸುತ್ತಾ ಮನವಿಗೆ ಸ್ಪಂದಿಸದೆ ಸಾರ್ವಜನೀಕರಿಗೆ ಅವಮಾನ ಮಾಡುತ್ತಿದ್ದಾರೆಂದು ಅಕ್ರಂಖಾನ್ ಆರೋಪಿಸಿದ್ದಾರೆ.
ಸರಕಾರವು ನೀರಿನ ಸರಬರಾಜು ಯೋಜನೆ ಮತ್ತು ಒಳ ಚರಂಡಿಗಳ ಆರ್ಥಿಕ ಮಾದರಿ ಮತ್ತು ಕುಡಿಯುವ ನೀರಿನ ದರಗಳನ್ನು ಪರಿಷ್ಕರಿಸಲು ನೀಡಿರುವ ಆದೇಶವನ್ನು ಅಧಿಕಾರಿಗಳೆ ಉಲಂಘಿಸಿದ್ದಾರೆ. ಕಾರಣ ಸದರಿ ಆದೇಶದಲ್ಲಿರುವ ಎಲ್ಲಾ ಆದೇಶಗಳನ್ನು ಜಾರಿ ಮಾಡದೆ ಈ ಹಿಂದೆ ಇದ್ದ ನೀರಿನ ಕರ 120 ಇದ್ದದನ್ನು 180 ನ್ನು ಸಾರ್ವಜನಿಕರಿಂದ ವತ್ತಾಯ ಪೂರಕವಾಗಿ ತುಂಬಿಸಿಕೊಳ್ಳುತ್ತಿದ್ದಾರೆ.
ಸದರಿ ಆದೇಶದ ಪ್ರಕಾರ ಸರಕಾರದ ಆದೇಶವನ್ನು ಪತ್ರಿಕೆಯಲ್ಲಿ ಮತ್ತು ಕರ ಪತ್ರಗಳಲ್ಲಿ ಮುದ್ರಿಸಿ ಪ್ರಚಾರ ಮಾಡಿ ಆರು ತಿಂಗಳ ಸಮಯಕೊಟ್ಟು ಆ ಆರು ತಿಂಗಳಲ್ಲಿ ಮೀಟರನ್ನು ಕೂಡಿಸುವ ವ್ಯವಸ್ಥೆಯು ಸಹ ನಗರಸಭೆಯೆ ಮಾಡುವ ಆದೇಶ ಸರಕಾರವೇ ನೀಡಿದೆ ಅಲ್ಲದೆ ಮೀಟರ ಅಳವಡಿಸಲು ಅದಕ್ಕೆ ತಗಲುವ ವೆಚ್ಚವನ್ನು ಬಡತನ ರೇಖೆಗಿಂತ ಕೇಳಗಿರುವ ಕುಟುಂಬಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದ ಮತ್ತು ಅಲ್ಪಸಂಖ್ಯಾತ ಕುಟುಂಬಗಳಿಗೆ ನಗರಸಭೆಯಿಂದ ಉಚಿತವಾಗಿ ಮೀಟರ ಅಳವಡಿಸುವ ವ್ಯವಸ್ಥೆಯನ್ನು ಮಾಡಿಕೊಡಬೇಕು ಉಳಿದ ಕುಟುಂಬಗಳಿಗೆ ಹಂತ ಹಂತವಾಗಿ ಹಣ ಸಂಗ್ರಹಿಸಬೇಕು ಎಂದು ಆದೇಶದಲ್ಲಿ ಇದ್ದರು ಸಹ ನಗರಸಭೆ ಜಾರಿಮಾಡಲು ವಿಫಲವಾಗಿದೆ ಎಂದು ಕಿಡಿ ಕಾರಿದ್ದಾರೆ.
ನೀರಿನ ಖರ್ಚು ವೆಚ್ಚದಲ್ಲಿ ಲಾಭ ನಷ್ಟ ಇಲ್ಲದೆ ನೀರಿನ ಕರವನ್ನು ಸಂಗ್ರಹಿಸಬೇಕು. ಎನ್ನುವ ಆದೇಶ ಇದ್ದರು ಇದನ್ನು ಗಾಳಿಗೆ ತೂರಿರುವ ನಗರಸಭೆಯವರು ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ನೀರಿನ ತೆರಿಗೆ ಸಮಗ್ರಹಿಸುತ್ತಿರುವ ಬಗ್ಗೆ ನಗರದ ಎಲ್ಲಾ ರಾಜಕೀಯ ಪಕ್ಷಗಳು ಸಭೆ ಸೇರಿ ಈ ವಿಷಯದ ಬಗ್ಗೆ ಸುದೀಘರ್Àವಾಗಿ ಚರ್ಚಿಸಿದ್ದು ದಾಂಡೇಲಿ ನಾಗರಿಕರ ನೀರಿನ ಕರ ಸಮಸ್ಯೆಯನ್ನು ಪರಿಹರಿಸಲು ಸರಕಾರ ಯಾವುದೇ ಕ್ರಮ ಇದುವರೆಗೆ ವಹಿಸುತ್ತಿಲ್ಲ. ಈ ಬಗ್ಗೆ ಸದನದಲ್ಲಿ ಚರ್ಚಿಸಿ ಇತÀ್ಯರ್ಥ ಮಾಡಬೇಕೆಂದು ಆಗ್ರಹಿಸಲಾಗಿಯಿತು ಎಂದು ಅಕ್ರಂಖಾನ್ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಮಂತ್ರಿಯಾದ ದೇಶಪಾಂಡೆಯವರಿಗೆ , ಜಿಲ್ಲಾಧಿಕಾರಿಗಳಿಗೆ, ನಗರಸಭೆ ಅಧ್ಯಕ್ಷರಿಗೆ ಹಲವಾರು ಭಾರಿ ಮನವಿ ಸಲ್ಲಿಸಿ ವತ್ತಾಯಿಸಿದರು ದಾಂಡೇಲಿಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಈ ಕುರಿತು ಪಕ್ಷಾತೀತವಾಗಿ ದಾಂಡೇಲಿ ಸಾರ್ವಜನಿಕ ನೀರಿನ ಬಗ್ಗೆ ಸಭೆ ಕರೆದು ಮುಂದಿನ ಹೋರಾಟದ ರೂಪರೇಶಗಳನ್ನು ರೂಪಿಸಲು ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಗಿದೆ. ಮುಖ್ಯವಾಗಿ ದಾಂಡೇಲಿಗೆ ಉಚಿತ ಶುದ್ಧ ನೀರು ಸರಭರಾಜು ಮಾಡಬೇಕು ದಾಂಡೇಲಿ ವೆಸ್ಟ್ ಕೋಸ್ಟ್ ಪೇಪರ್ ಮೀಲ್ ಇವರು ಸಾಮಾಜಿಕ ಹೋಣೆಗಾರಿಕೆಯಲ್ಲಿ ನೀರು ಸರಭರಾಜು ಮಾಡಲು ಆಗುವ ಖರ್ಚನ್ನು ಅವರು ವಹಿಸಿಕೊಂಡು ಸಾರ್ವಜನಿಕರಿಗೆ ಉಚಿತ ನೀರು ಸರಭರಾಜು ಯೋಜನೆಯನ್ನು ಪ್ರಾರಂಭಿಸಲು ಸಹಾಯ ಮಾಡಬೇಕೆಂದು ಆಗ್ರಹಿಸಲಾಗಿದೆ.
ಸಭೆಯ ಅಧ್ಯಕ್ಷತೆ ಹಿರಿಯ ನಾಗರಿಕ ಸಮಿತಿಯ ಅಧ್ಯಕ್ಷರಾದ ವಿ.ಎ.ಕೊನಾಪುರಿ ವಹಿಸಿದ್ದರು. ಸೈಯದ ತಂಗಳ ಅಧ್ಯಕ್ಷರು ಬ್ಲಾಕ ಕಾಂಗ್ರೇಸ, ಅಶೋಕ ಪಾಟೀಲ ಭಾರತಿಯ ಜನತಾ ಪಕ್ಷ ಜಿಲ್ಲಾ ಸದಸ್ಯರು, ಹರೀಶ ನಾಯ್ಕ ಅಧ್ಯಕ್ಷರು ಸಿ.ಪಿ.ಆಯ್.(ಎಂ) ಪಕ್ಷ ಹಳಿಯಾಳ ತಾಲೂಕ, ಟಿ.ಎಸ್.ನಾಯ್ಕ ಮಾಜಿ ನಗರಸಭೆ ಅಧ್ಯಕ್ಷರು ದಾಂಡೇಲಿ, ಅಕ್ರಮ್ ಖಾನ್ ಅಧ್ಯಕ್ಷರು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ, ಸಿ.ಎ.ಲೋಬೊ ಪ್ರಧಾನ ಕಾರ್ಯದರ್ಶಿ, ಸತೀಶ ನಾಯ್ಕ, ಅಬ್ದುಲ ವಹಾಬ ಬಾನ್ಸುರಿ, ಮುಜಿಬಾ ಚಬ್ಬಿ, ಮೀನಾಕ್ಷಿ ಬಡಿಗೇರ, ಲೀಲಾ ಮಾದರ, ರವಿ ಚೌವ್ಹಾಣ, ರಮೇಶ ಚಂದಾವರ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Canara News Tagged With: dandeli integrated development, dandeli integrated development campaign, Dandeli West Coast Paper Meal, elected representative, fight agitation, increase, inner sewers economy model, water supply, water supply plan, water supply without loss of water at cost of water

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar