
ಸಿದ್ದಾಪುರ:- ರಾಹುಲ್ ಗಾಂಧಿ ಟೀಮ್ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಘೋಷಣೆ ಮಾಡಿದ ಕಾರಣ ಅನಾಥಾಶ್ರಮಕ್ಕೆ ಪಂಚಾಯತದಿಂದ ಬರುವ ನೀರಿನ ಸಂಪರ್ಕ ಕಡಿತ ಗೊಳಿಸಿರುವ ಘಟನೆ ಸಿದ್ದಾಪುರದ ಮುಗದೂರಿನಲ್ಲಿ ನಡೆದಿದೆ.
ಸಿದ್ದಾಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಾಗರಾಜ ನಾಯ್ಕ ಮುಗದೂರಿನಲ್ಲಿ ಗುತ್ಯ ಕನ್ನ ಮಡಿವಾಳರವರ ಜಾಗದಲ್ಲಿರುವ ಮನೆಯನ್ನು ಮೂರು ವರ್ಷದ ಅವಧಿಗೆ ಲೀಸ್ ಮೇಲೆ ಪಡೆದು ಅನಾಥಾಶ್ರಮವನ್ನು ಸ್ಥಳಿಯರ ಸಹಕಾರದೊಂದಿಗೆ ನಡೆಸುತಿದ್ದೇನೆ. ಈ ಕುರಿತು ಶಿರಳಗಿ ಗ್ರಾಮ ಪಂಚಾಯತಿಗೆ ನಿರಪೇಕ್ಷಣಾ ಪತ್ರಕೋರಿ ಎಲ್ಲಾ ಧಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ಈ ವರೆಗೂ ಪಂಚಾಯತಿಯಿಂದ ಉತ್ತರ ಬಂದಿಲ್ಲ ಅಲ್ಲದೆ ಫೇ 21ರಂದು ಗ್ರಾಮ ಪಂಚಾಯತಿಯವರು 400 ರೂಪಾಯಿ ನೀರಿನ ಕರವನ್ನ ಆಶ್ರಮದ ಹೆಸರಿನಲ್ಲಿ ತುಂಬಿಸಿಕೊಂಡಿದ್ದಾರೆ.
ಆದರೆ ಇವತ್ತು ಬೆಳಿಗ್ಗೆ ಏಕಾ ಏಕಿ ಪಂಚಾಯತ ಸಿಬ್ಬಂಧಿ ಬಂದು ನೀರಿನ ಸಂಪರ್ಕ ಕಡಿತಗೊಳಿಸಿದ್ದಾರೆ.
ಈ ಕುರಿತು ಗ್ರಾ ಪಂ ಅಧ್ಯಕ್ಷರನ್ನು ಪೋನ್ ಮೂಲಕ ಸಂಪರ್ಕಿಸಿದಾಗ ನಿಮ್ಮ ಆಶ್ರಮಕ್ಕೆ ನಿರಪೇಕ್ಷಣಾ ಪತ್ರನೀಡಲು ಆ ಭಾಗದ ಪಂಚಾಯತ ಸದಸ್ಯರ ವಿರೋಧವಿದೆ ಹಾಗಾಗಿ ನೀರು ಕೊಡಲು ಆಗುವದಿಲ್ಲವೆಂದು ತಿಳಿಸಿದ್ದಾರೆ ಎಂದರು.
ನಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಗೋಷಣೆ ಮಾಡಿದ ಮೇಲೆ ನನ್ನನ್ನು ಬೇದರಿಸುವುದಕ್ಕಾಗಿ ರಾಜಕೀಯ ಪ್ರೇರಿತರಾಗಿ ಈ ರೀತಿ ಮಾಡಿದ್ಧಾರೆ.
ನಿರಂತರವಾಗಿ ನನ್ನ ಮೇಲೆ ಕೆಲವು ರಾಜಕೀಯ ವ್ಯಕ್ತಿಗಳು ಅನಾವಶ್ಯಕ ಕಿರುಕುಳ ನೀಡುತಿದ್ದಾರೆ ಇದು ಮುಂದುವರಿದರೆ ಅನಾಥರನ್ನು ಬೇರೆ ಆಶ್ರಮಗಳಿಗೆ ಸೇರಿಸಿ ನಾನು ವಿಧಾನಸೌಧದ ಎದುರು ಆತ್ಮಹತ್ಯೆ ಮಾಡಿಕೊಳ್ಳುವದಾಗಿ ನಾಗರಾಜ ನಾಯ್ಕ ತಿಳಿಸಿದರು.
Leave a Comment