ಹಳಿಯಾಳ:- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಸಂಬಂಧೀಸಿದಂತೆ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಎನ್ನಲಾದ ಓರ್ವ ವ್ಯಕ್ತಿಯನ್ನು ಹಳಿಯಾಳ ಪೋಲಿಸರು ಬಂಧೀಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಟ್ಟಣದ ಖಾಜಿ ಗಲ್ಲಿ ನಿವಾಸಿ ಮಹಮ್ಮದಆರೀಪ್ ಅದ್ಬುಲರಶೀದ ಮುಗದ(38) ಎಂಬ ವೃತ್ತಿಯಲ್ಲಿ ಪಿಗ್ಮಿ ಎಜೆಂಟ್ ಆಗಿರುವ ಈತನನ್ನು ಕಾರ್ಯಾಚರಣೆ ನಡೆಸುವ ಮೂಲಕ ಬಂಧೀಸಲಾಗಿದೆ. ಪಟ್ಟಣದ ಯಲ್ಲಾಪೂರ ನಾಕಾ ಬಳಿ ಸಾರ್ವಜನೀಕ ಸ್ಥಳದಲ್ಲಿ ಐಪಿಎಲ್ ಕ್ರೀಕೆಟ್ಗೆ ಸಂಬಂಧಿಸಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ರಾಜಸ್ಥಾನ ರಾಯಲ್ಸ್ ಪಂದ್ಯಾವಳಿಯ ಮೇಲೆ ತನ್ನ ಅಕ್ರಮ ಲಾಭದ ಸಲುವಾಗಿ ಸಾರ್ವಜನೀಕರಿಂದ ಹಣ ಪಡೆದು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿರುವಾಗ ಇತನನ್ನು ಬಂಧಿಸಲಾಗಿದೆ ಎಂದು ಹಳಿಯಾಳ ಪೋಲಿಸರು ತಿಳಿಸಿದ್ದಾರೆ.
ಕಾರ್ಯಾಚರಣೆಯ ವೇಳೆ ಆರೋಪಿಯಿಂದ 99,150/- ನಗದು ಹಣ, 2 ಮೊಬೈಲ್ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು ಆರೋಪಿಯನ್ನು ಹಳಿಯಾಲ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಹೇಳಿದ್ದಾರೆ.
ಪಿಎಸ್ಐ ಆನಂದಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು. ಎಎಸ್ಐ ಆನಂದ ಪಾವಸ್ಕರ ತನಿಖೆ ನಡೆಸುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಬಂದ ಸಾಕಷ್ಟು ದೂರುಗಳ ಬಳಿಕ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.
Leave a Comment