• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ವಿರೋಧಿಗೆ ಟಾಂಗ್ ನೀಡಿ ಕಲೆದ ಒಂದು ವರ್ಷದಲ್ಲಿ ಆರು ಸಾವಿರ ಕೋಟಿಗೂ ಅಧಿಕ ಅನುದಾನ ಬಂದಿದೆ ಎಂದ ಕೇಂದ್ರ ಸಚಿವ ಅನಂತಕುಮಾರ್

April 4, 2019 by Vishwanath Shetty Leave a Comment

ಹೊನ್ನಾವರ; ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ತಮ್ಮ ಉಮೇದುವಾರಿಕೆ ಸಲ್ಲಿಸಿದ ಬಳಿಕ ಪ್ರಥಮ ಬಾರಿಗೆ ಹೊನ್ನಾವರಕ್ಕೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದರು. ನಗಬಸ್ತಿಕೇರಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಸಂಶಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯದಿನ. ಈ ಬಾರಿ ಕಾಂಗ್ರೇಸ್ ಜಿಲ್ಲೆಯಲ್ಲಿ ಕಣದಲ್ಲಿ ಇಲ್ಲ. ಮೈತ್ರಿ ಮಾಡಿಕೊಂಡು ಜನತಾದಳ ನಾಮಿನೇಷನ್ ಕೊಡಲು ಮೀನಾಮೇಷದ ಮೇರೆಗೆ ಅಂತಿಮ ದಿನ ಸಲ್ಲಿಸಲು ಮುಂದಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಿದರೆ ಬೇರೆ ಯಾರು ಸ್ಪರ್ಧೆ ಮಾಡುತ್ತಿರಲಿಲ್ಲ ಈಗ ಯಾವ ಮಟ್ಟದ ಸ್ಥಿತಿ ಆ ಪಕ್ಷಕ್ಕೆ ಬಂದಿದೆ ಎಂದು ನಿಮಗೆ ತಿಳಿದಿದೆ.
ಎಷ್ಟೊ ಜನ ಹೇಳುತ್ತಾರೆ ಅನಂತಕುಮಾರ ಹೆಗಡೆ ಭಾಷಣ ಸೀಮೀತ ಅಭಿವೃದ್ದಿ ಎಲ್ಲಿ ಆಗಿದೆ ಎಂದು ಪ್ರಶ್ನಿಸುತ್ತಾರೆ. ಪೂರ್ವಾಗ್ರಹ ಪೀಡಿತ ಮನಸ್ಸುಗಳಿಗೆ ಅಭಿವೃದ್ದಿ ಕಾಣುವುಸಿಲ್ಲ. ಅಂತವರಿಗೆ ಉತ್ತರ ಕೊಡುವ ಅವಶ್ಯಕತೆಯು ಇಲ್ಲಾ. ನಾನು ಮೊದಲೂ ಸಂಸದನಾದಗ ಜಿಲ್ಲೆಯ ಸ್ಥಿತಿ ಈಗಿನ ಸ್ಥಿತಿ ನೋಡಿದರೆ ಅಭಿವೃದ್ದಿ ತಿಳಿಯುತ್ತದೆ. ಕಳೆದ ಒಂದು ವರ್ಷದಲ್ಲಿ ಆರು ಸಾವಿರ ಕೋಟಿಗೂ ಅಧಿಕ ಅನುದಾನ ಜಿಲ್ಲೆಗೆ ಬಂದಿದೆ. ದಕ್ಷಿಣ ಭಾರತದ ಮೊಟ್ಟಮೊದಲ ಡಿಜಿಟಲ್ ವಿಲೇಜ ಪ್ರಾರಂಭವಾಗಿದ್ದು ಹೊನ್ನಾವರದಲ್ಲಿ ಅದಕ್ಕೆ ಹೇಳಿದ್ದು ನೋಡುವ ಕಣ್ಣುಗಳಿಗೆ ಎಲ್ಲವು ಕಾಣುತ್ತೆ ಪೂರ್ವಾಗ್ರಹ ಪೀಡಿತ ಮನಸ್ಸುಗಳಿಗೆ ಯಾವುದು ಕಾಣುವುದಿಲ್ಲಾ. ಜಿಲ್ಲೆಯಲ್ಲಿ ಒಂದು ಲಕ್ಷದ ಎಂಬತ್ತು ಸಾವಿರಕ್ಕೂ ಅಧಿಕ ಫಲಾನುಭವಿಗೆ ಉಜ್ವಲ ಗ್ಯಾಸ ನೀಡಿದ್ದೇವೆ ಇದರ ದಾಖಲೆ ಕೋಡುತ್ತೇವೆ. ಆಷಾಡಭೂತಿ ಮಾತುಗಳನ್ನು ಆಡುವವರು ಇದನ್ನು ಓದಿ ನೋಡಿದರೆ ಸಾಕು ಅರ್ಥಮಾಡಿಕೊಳ್ಳುವ ಯೋಗ್ಯತೆ ಇದ್ದರೆ ಅರ್ಥಮಾಡಿಕೊಳ್ಳಲಿ ಎಂದರು. ರಾಜಕೀಯ ಜೀವನದಲ್ಲಿ ಯಾವಗಲೂ ಜಾತಿ ಹೆಸರಿನಲ್ಲಿ ಹಣ ಕೊಟ್ಟು ಮತ ಪಡೆದಿಲ್ಲ ಮುಂದೆಯು ಆ ಪ್ರವೃತ್ತಿಗೆ ಇಳಿಯುವುದಿಲ್ಲ.
ಕೆಲವರು ಹೇಳುತ್ತಾರೆ ಅನಂತಕುಮಾರ ಹೆಗಡೆ ಮೋದಿ ಹೆಸರಿನಲ್ಲಿ ಓಟು ಕೇಳತ್ತಾರೆ . ಇವರು ಇವರಪ್ಪನ ಹೆಸರಿನಲ್ಲಿ ಮತ ಕೇಳತ್ತಾರೆ ಎಂದು ನಾನು ನಮ್ಮ ಅಪ್ಪನ ಹೆಸರಿನಲ್ಲಿ ಮತ ಬೇಡುವುದಿಲ್ಲ. ಆ ಸಂಪ್ರದಾಯದಿಂದ ಬಂದವನು ಅಲ್ಲ. ನಮ್ಮ ನಾಯಕರು ಮೋದಿ, ವಾಜಪೇಯಿ, ಅಡ್ವಾನಿ ನಮ್ಮ ಮುಂದಿನ ನಾಯಕರಾದ ಮೋದಿ ಆದರಿಂದ್ದ ಅವರ ಹೆಸರಿನಲ್ಲಿ ಮತ ಕೇಳದೆ ನಿಮ್ಮ ಅಪ್ಪನ ಹೆಸರಿನಲ್ಲಿ ಮತ ಕೇಳಬೇಕೆನೋ ಎಂದು ಪ್ರಶ್ನಿಸಿ ಆ£ ಪರೋಕ್ಷವಾಗಿ ಟಾಂಗ್ ನೀಡಿದರು,

ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಮಾತನಾಡಿ ಮೇರಾ ಭೂತ್ ಸಬಸೆ ಮಜಬೂತ ಎನ್ನುವುದು ನರೇಂದ್ರ ಮೋದಿಯವ ಅಪೆಕ್ಷೆ. ಆ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು. ನರೇಂದ್ರ ಮೋದಿಯವರ ಜನಪರ ಯೋಜನೆಯನ್ನು ಜನರಿಗೆ ತಿಳಿಸುವಂತ ಕೆಲಸ ಮಾಡಬೇಕು. ಭಾರತದ ಭವಿಷ್ಯಕ್ಕೆ ಭಾರತಿಯ ಜನತಾಪಾರ್ಟಿಯ ಅವಶ್ಯವಿದ್ದು ಅನಂತಕುಮಾರ ಹೆಗಡೆಯವರನ್ನು ದಾಖಲೆಯ ಮತದಿಂದ ಗೆಲ್ಲಿಸೋಣ ಎಂದರು.

ವೇದಿಕೆಯಲ್ಲಿ ಬಿಜೆಪಿ ಪಕ್ಷದ ಚುನಾವಣಾ ಉಸ್ತುವಾರಿ ಎಮ್.ಜಿ.ನಾಯ್ಕ, ಪಂಚಾಯತ ಅಧ್ಯಕ್ಷೆ ಅನ್ನಪೂರ್ಣ ಶಾಸ್ತ್ರಿ, ರಾಜ್ಯ ಸಮಿತಿ ಸದಸ್ಯ ಉಮೇಶ ನಾಯ್ಕ, ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ, ಉಪಾದ್ಯಕ್ಷ ಗಣಪತಿ ನಾಯ್ಕ ಬಿಟಿ, ಕಾರ್ಯದರ್ಶಿ ಮಂಜುನಾಥ ನಾಯ್ಕ, ರಾಜೇಶ ಭಂಡಾರಿ, ಮಹಿಳಾ ಅಧ್ಯಕ್ಷೆ ಜಯಂತಿ ನಾಯ್ಕ, ಉಪಸ್ಥಿತರಿದ್ದರು.

ಕುದ್ರಗಿಯಲ್ಲಿರುವ ಕಾಲಭೈರವ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು, ನಂತರ ತಾಲೂಕಿನ ದಿಬ್ಬಣಗಲ್, ಹಡಿನಬಾಳ, ಕವಲಕ್ಕಿ, ಕರ್ಕಿ, ಹಳದೀಪುರ ಭಾಗದಲ್ಲಿ ಪ್ರಚಾರ ನಡೆಸಿದರು.

Related Posts :

ತೆಂಗಿನ ಮರದಿಂದ ಬಿ...
ಗಾಂಜಾ ಇಟ್ಟುಕೊಂಡ...
ಅಪಘಾತದಲ್ಲಿ ಗಾಯಗ...
ಮನೆ ಮೇಲೆ ಮರ ಬಿದ್ದ...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: 000 crore a year Deputy Minister Ananth Kumar, Ananthakumara Hegde Speech, Canara BJP candidate from Lok Sabha constituency, Dibangal, Digital Village, earns over Rs 6, election campaign, Final day by Minamas, Giza Gasa, Haddinbala, Janata Dal nomination, Karkey, Kavalakki, Mera Bhoot Sabaje Majboo, Nagabiskeri District panchayat junction, Nagabiskeri District Panchayat Range, Sanchi, South India's First, Tang to donate art, Yellow River

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,368,450 visitors
SURE Card

Footer

JSW has proposed another port at Honavar

July 26, 2021 By Sachin Hegde

ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ /KPSC Recruitment 2022

May 17, 2022 By Deepika

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

May 17, 2022 By Deepika

ಸಮುದ್ರ ಸುಳಿಗೆ ಸಿಲುಕಿ ಯುವಕ ಸಾವು

May 17, 2022 By Deepika

ಬದುಕಿಗೆ ಮತ್ತು ಬರವಣಿಗೆಗೆ ಸಾಮ್ಯತೆ ಇರಬೇಕು.

May 17, 2022 By Jayaraj Govi

ಪ್ರೇಕ್ಷಕರನ್ನು ರಂಜಿಸಿದ ರಾಜಾ ರುದ್ರಕೋಪ ಯಕ್ಷಗಾನ

May 17, 2022 By Jayaraj Govi

ಲಯನ್ಸ್ ಕಾರ್ಯ ಚುವಟಿಕೆಗಳ ಕುರಿತು ಆನ್ ಲೈನ್ ನಲ್ಲಿ ಮಾಹಿತಿ

May 17, 2022 By Jayaraj Govi

© 2022 Canara Buzz · Contributors · Privacy Policy · Terms & Conditions

 

Loading Comments...
 

    loading Cancel
    Post was not sent - check your email addresses!
    Email check failed, please try again
    Sorry, your blog cannot share posts by email.