• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಾಂಗ್ರೇಸ್–ಜೆ.ಡಿ.ಎಸ್. ಮೈತ್ರಿ ಸಭೆಯಲ್ಲಿ ಘೋಷಣೆ ಅನಂತಕುಮಾರ ಸೋಲು ನಮ್ಮ ಗುರಿ;ಜಗದೀಪ ಎನ್.ತೆಂಗೇರಿ

April 8, 2019 by Gaju Gokarna Leave a Comment

watermarked hnr 08 co jds SIR 08 04 2019.

ಹೊನ್ನಾವರ : ಕಳೆದ ಇಪ್ಪತೈದು ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಐದು ಬಾರಿ ಸಂಸತ್ ಸದಸ್ಯರಾಗಿರುವ ಕೆನರಾ ಸಂಸದ ಅನಂತಕುಮಾರ ಹೆಗಡೆಯವರ ಸಾಧನೆ ಶೂನ್ಯವಾಗಿದ್ದು ಈ ಬಾರಿ ಅನಂತಕುಮಾರ ಹೆಗಡೆಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದೇ ನಮ್ಮೇಲ್ಲರ ಗುರಿ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಘೋಷಿಸಿದರು.
ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆದ ಕಾಂಗ್ರೇಸ್ ಜೆ.ಡಿ.ಎಸ್. ಮೈತ್ರಿಕೂಟದ ಜಂಟಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ್ರತಿ ಲೋಕಸಭಾ ಚುನಾವಣೆಗೂ ಒಂದು ತಿಂಗಳ ಮೊದಲು ಕ್ಷೇತ್ರಕ್ಕೆ ಪ್ರತ್ಯಕ್ಷನಾಗುವ ಅನಂತಕುಮಾರ, ಕೇವಲ ಬಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಜನರನ್ನು ಕೆರಳಿಸುವುದರಲ್ಲಿ ನಿಷ್ಲಾತರಾಗಿದ್ದಾರೆ ಎಂದರು. ಪ್ರತಿ ಚುನಾವಣೆಯಲ್ಲಿ ಕೋಮು ಪ್ರಚೋದನೆ ಭಾಷಣದ ಮೂಲಕ ಜನರನ್ನು ಉದ್ವೇಕಿಸುತ್ತಿದ್ದ ಅನಂತಕುಮಾರ ಈ ಭಾರಿ ರಾಷ್ಟ್ರೀಯತೆಗಾಗಿ ಮೋದಿ ಅನ್ನುವ ಹೊಸ ಸ್ಲೋಗನ್ ಕ್ಷೇತ್ರದಲ್ಲಿ ಮೊಳಗಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕಿ ಶಾರದಾ ಶೆಟ್ಟಿಯವರ ನೇತೃತ್ವದಲ್ಲಿ ಕಾಂಗ್ರೇಸ್ ಜೆ.ಡಿ.ಎಸ್. ಮುಖಂಡರಾದ ಪ್ರದೀಪ ನಾಯಕ, ಸೂರಜ್ ಸೋನಿ ಮತ್ತು ಎರಡು ಪಕ್ಷದ ನಾಯಕರುಗಳ ಜೊತೆ 10ನೇ ತಾರೀಖಿನಿಂದ ಹೊನ್ನಾವರ ಬ್ಲಾಕ್ ಕಾಂಗೇಸ್ ವ್ಯಾಪ್ತಿಯ ಪ್ರತಿ ಪಂಚಾಯತ ಮಟ್ಟದಲ್ಲಿ ಸಂಚರಿಸಿ ಲೋಕಸಭಾ ಚುನಾವಣೆಗೆ ಕಾಂಗ್ರೇಸ್ – ಜೆ.ಡಿ.ಎಸ್. ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುವುದು ಎಂದು ಜಗದೀಪ ತೆಂಗೇರಿ ತಿಳಿಸಿದರು.

ಹೊನ್ನಾವರ ತಾಲೂಕಾ ಜೆ.ಡಿ.ಎಸ್. ಅಧ್ಯಕ್ಷ ಸುಬ್ರಾಯ ಗೌಡ ಮಾತನಾಡಿ ಯಾವುದೇ ಭಿನ್ನಾಬಿಪ್ರಾಯಕ್ಕೆ ಅವಕಾಶವಾಗದಂತೆ ಜೆ.ಡಿ.ಎಸ್. ಕಾಂಗ್ರೇಸ್ ಮುಖಂಡರು ಎಚ್ಚರಿಕೆ ವಹಿಸಿ ಮೈತ್ರಿಧರ್ಮ ಪಾಲಿಸಿ ಆನಂದ ಅಸ್ನೋಟಿಕರರವರನ್ನು ಗೆಲ್ಲಿಸೋಣಾ ಎಂದರು.
ಮುಗ್ವಾ ಗಣೇಶ ನಾಯ್ಕ ಮಾತನಾಡಿ ಕಾಂಗ್ರೇಸ್ – ಜೆ.ಡಿ.ಎಸ್.ಗೆ ಕೆಳಹಂತದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲಾ. ತಳಮಟ್ಟದ ಕಾರ್ಯಕರ್ತರಲ್ಲಿ ನಮ್ಮ ಅಭ್ಯರ್ಥಿ ಆನಂದ ಅಸ್ನೋಟಿಕರರವರನ್ನು ಗೆಲ್ಲಿಸೊದೇ ಒಂದಂಶದ ಕಾರ್ಯಕ್ರಮವಾಗಿದೆ ಎಂದರು. ಆದರೆ ಪಕ್ಷದ ದೊಡ್ಡ ನಾಯಕರೆನಿಸಕೊಂಡವರು ಆಗಾಗ ಪಕ್ಷದ ಸಭೆಯಿಂದ ದೂರಸರಿಯುತ್ತಿರುವುದು ಕಾರ್ಯಕರ್ತರ ಮಾನಸಿಕ ಸ್ಥೇೈರ್ಯವನ್ನು ಕುಗ್ಗಿಸಿದೆ ಎಂದರು.
ಕಡತೋಕಾದ ಸುಬ್ರಹ್ಮಣ್ಯ ಹೆಗಡೆ ಮಾತನಾಡಿ ನಮ್ಮಲ್ಲಿ ಗೆಲ್ಲುವ ಛಲವಿದ್ದರೂ ಪಕ್ಷದ ಕಾರ್ಯಚಟುವಟಿಕೆ ಇನ್ನೂ ಆರಂಭಗೊಳ್ಳದಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೇಸ್‍ನಿಂದ ವೀಕ್ಷಕರಾಗಿ ಆಗಮಿಸಿದ ಮಂಕಿಯ ವಾಮನ ನಾಯ್ಕ ಮಾತನಾಡಿ ನಾನು ಒಬ್ಬ ಮಾಜಿ ಸೈನಿಕನಾಗಿ ಹೇಳುವುದೇನೆಂದರೆ ಸರ್ಜಿಕಲ್ ಸ್ಟ್ರೈಕ್ ಅನ್ನುವುದು ನಿರಂತರವಾಗಿ ನಡೆಯುವ ಕ್ರಿಯೆಯಾಗಿದೆ. ದೇಶದ ಎಲ್ಲಾ ಪ್ರಧಾನಿಗಳ ಆಡಳಿದತದಲ್ಲೂ ಸರ್ಜಿಕಲ್ ಸ್ಟ್ರೈಕ್ ನಡೆಯುತ್ತಾ ಬಂದಿದೆ. ಆದರೆ ಸರ್ಜಿಕಲ್ ಸ್ಟ್ರೈಕನ್ನೂ ತನ್ನದೇ ಸಾಧನೆ ಎಂದು ಪ್ರಪಂಚದಾದ್ಯಂತ ಹೇಳಿಕೊಂಡು ಪ್ರಚಾರ ಗಿಟ್ಟಿಸಿಕೊಂಡ ಏಕೈಕ ಪ್ರಧಾನಿ ಎಂದರೆ ನರೇಂದ್ರ ಮೋದಿ ಮಾತ್ರ ಎಂದರು.
ಸಭೆಯಲ್ಲಿ ಕಾಂಗ್ರೇಸ್ ಮುಖಂಡರಾದ ಆಗ್ನೇಲ್ ಡಯಾಸ್, ದಾಮೋದರ ನಾಯ್ಕ, ವಿನಾಯಕ ಶೆಟ್ಟಿ, ಬಾಲಚಂದ್ರ ನಾಯ್ಕ, ನಗರ ಘಟಕದ ಕೇಶವ ಮೇಸ್ತ, ಶ್ರೀಕಾಂತ ಮೇಸ್ತ, ಉಮಾ ಮೇಸ್ತ, ತುಳಸಿ ಗೌಡ, ಜೆ.ಡಿ.ಎಸ್.ನ ತುಕಾರಾಮ ನಾಯ್ಕ, ಕೃಷ್ಣ ಗೌಡ ಹಳಗೇರಿ ಗೋವಿಂದ ಗೌಡ, ಅಶೂರಖಾನಗಲ್ಲಿಯ ಮಹಮ್ಮದ ಅಲಿ, ಹನೀಫ್ ಸಾಬ, ಸಮೀರ್ ಶೇಖ್, ನೆಲ್ಸನ್ ರೊಡ್ರಿಗೀಸ್, ಪ.ಪಂ. ಸದಸ್ಯರಾದ ಸುರೇಶ ಮೇಸ್ತ, ಜೈನಾಭಿ ಸಾಬ್, ಕುಪ್ಪು ಗೌಡ, ರಾಜೇಶ ಗುನಗಾ, ರಮೇಶ ಶೆಟ್ಟಿ, ಶಫಿ ಮುಲ್ಲಾ, ಮತ್ತು ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: anantakumāra hegaḍeyavara sādhane śūn'ya, anantakumāra sōlu nam'ma guri, bāvanātmaka viṣaya, Congress JDS. The Alliance Joint Meeting, cunāvaṇeyalli sōlisuvudē nam'mēllara guri, emotional issues, eraḍu pakṣada nāyakarugaḷa jote, jagadīpa en.Teṅgēri, Jagadipa N.Tengere, JDS. Leader of the Opposition Pradeepa, Je.Ḍi.Es. Mukhaṇḍarāda pradīpa nāyaka, kāṅgrēs je.Ḍi.Es. Maitrikūṭada jaṇṭi sabhe, kāṅgrēs–je.Ḍi.Es. Maitri sabheyalli ghōṣaṇe, our aim to defeat Ananthakumar, Suraj Soni, the Ananthakumar's performance is zero, the Congress-JDS. Announcement at the Alliance meeting, the goal of all of us to defeat the election, with two party leaders, ಅನಂತಕುಮಾರ ಸೋಲು ನಮ್ಮ ಗುರಿ, ಅನಂತಕುಮಾರ ಹೆಗಡೆಯವರ ಸಾಧನೆ ಶೂನ್ಯ, ಎರಡು ಪಕ್ಷದ ನಾಯಕರುಗಳ ಜೊತೆ, ಕಾಂಗ್ರೇಸ್ ಜೆ.ಡಿ.ಎಸ್. ಮೈತ್ರಿಕೂಟದ ಜಂಟಿ ಸಭೆ, ಕಾಂಗ್ರೇಸ್–ಜೆ.ಡಿ.ಎಸ್. ಮೈತ್ರಿ ಸಭೆಯಲ್ಲಿ ಘೋಷಣೆ, ಚುನಾವಣೆಯಲ್ಲಿ ಸೋಲಿಸುವುದೇ ನಮ್ಮೇಲ್ಲರ ಗುರಿ, ಜಗದೀಪ ಎನ್ ತೆಂಗೇರಿ, ಜೆ.ಡಿ.ಎಸ್. ಮುಖಂಡರಾದ ಪ್ರದೀಪ ನಾಯಕ, ಬಾವನಾತ್ಮಕ ವಿಷಯ, ಸೂರಜ್ ಸೋನಿ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...