
ಹೊನ್ನಾವರ ಲಯನ್ಸ್ ಕ್ಲಬ್ ನ ವಾರ್ಷಿಕ ಶುಭಾಶಯ ಕಾರ್ಯಕ್ರಮ ಪ್ರಭಾತನಗರದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ರವಿವಾರ ನಡೆಯಿತು.
ಲಯನ್ಸ್ ಕ್ಲಬ್ ಗೆ ಆಪೀಷಿಯಲ್ ವಿಸಿಟರ್ ಆಗಿ ಪಾಲ್ಗೊಂಡ ಲಯನ್ ಡಿಸ್ಟ್ರಿಕ್ಟ್ ಗವರ್ನರ್ ಮೋನಿಕಾ ಪಿ. ಸಾವಂತ ಮಾತನಾಡಿ, ದೇವರ ಕ್ರಪೆಯಿಂದ ಪಡೆದ ಮನುಷ್ಯ ಜನ್ಮವನ್ನು ಸೇವೆಯಲ್ಲಿ ತೊಡಗುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು. ಲಯನ್ಸ್ ಕ್ಲಬ್ ಸಾಮಾಜಿಕ ಸೇವೆಯಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ಲಯನ್ಸ್ ಕ್ಲಬ್ ಜಗತ್ತಿನಲ್ಲಿ 212 ದೇಶಗಳಲ್ಲಿ ಚಟುವಟಿಕೆಯಲ್ಲಿದೆ. ಲಕ್ಷಾಂತರ ಸದಸ್ಯರು ಕ್ಲಬ್ ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತವು ಅತಿಹೆಚ್ಚು ಸದಸ್ಯರನ್ನು ಹೊಂದಿರುವ ದೇಶಗಳಲ್ಲಿ ಜಗತ್ತಿನಲ್ಲೇ 2ನೇ ಸ್ಥಾನವನ್ನು ಹೊಂದಿದೆ. ಇದು ಹೆಮ್ಮೆಯ ಸಂಗತಿ. ಹೊನ್ನಾವರ ಕ್ಲಬ್ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಅತ್ಯಂತ ಶ್ರದ್ದೆ ಮತ್ತು ಶಿಸ್ತಿನಿಂದ ಮುನ್ನಡೆಯುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಹೊನ್ನಾವರ ಲಯನ್ಸ್ ಕ್ಲಬ್ ಗೆ 7 ಜನ ಹೊಸ ಸದಸ್ಯರು ನೇಮಕಗೊಂಡರು.
ಸನ್ಮಾನ:- ವಿಜ್ಞಾನದಲ್ಲಿ ಸಾದನೆ ಮಾಡಿದ ಆರ್.ಕೆ.ಮೇಸ್ತ, ಶಿಕ್ಷಕ ಭಾಸ್ಕರ್ ವಿ. ನಾಯ್ಕ, ಮಾದರಿ ಕ್ರಷಿಕ ಗಣಪತಿ ರಾಮಕೃಷ್ಣ ಭಟ್, ನಿವೃತ್ತ ಅಂಚೆ ನೌಕರ ನಾಗೇಶ ಮರ್ತು ನಾಯ್ಕ, ಸಾಹಸಿ ಮೀನುಗಾರ ಸುಬ್ರಾಯ ಮೇಸ್ತ, ಪಟ್ಟಣ ಪಂಚಾಯತ ಕಸ ವಿಲೇವಾರಿ ವಾಹನ ಚಾಲಕ ರಾಜು ಮಂಗಳ ಗೊಂಡ ಮತ್ತು ನಾಗರಾಜ ಮಂಗಳ ಗೊಂಡ ಇವರನ್ನು ಸನ್ಮಾನಿಸಲಾಯಿತು.
ಅತಿ ಹೆಚ್ಚು ಅಂಕ ಗಳಿಸಿದ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಹೊನ್ನಾವರದಲ್ಲಿ ಬೀದಿಬದಿಯಲ್ಲಿ ವ್ಯಾಪಾರ ನಡೆಸುವವರಿಗೆ ಲಯನ್ಸ್ ಕ್ಲಬ್ ಲಾಂಛನವಿರುವ ಕೊಡೆಗಳನ್ನು ವಿತರಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ ಸಾಳೇಹಿತ್ತಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಸುರೇಶ ಎಸ್. ವರದಿ ವಾಚಿಸಿದರು. ಖಜಾಂಚಿ ಯೋಗೇಶ ರಾಯ್ಕರ್, ನಿಕಟಪೂರ್ವ ಅಧ್ಯಕ್ಷರಾದ ದೇವಿದಾಸ ಮಡಿವಾಳ, ಗೋಪಾಲಕೃಷ್ಣ ಬಿಂದಗಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಭಾಗಗಳಿಂದ ಆಗಮಿಸಿದ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಅಭಿಪ್ರಾಯ ಹಂಚಿಕೊಂಡರು.
Leave a Comment