• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಾಂಗ್ರೇಸ್ ನಂಬಿ ಉದ್ದಾರ ಆದವರಿಲ್ಲ, ದೇವೆಗೌಡರ ನಂಬಿ ಬದುಕಿದವರಿಲ್ಲ- ಸಚಿವ ಅನಂತಕುಮಾರ ಹೆಗಡೆ

April 12, 2019 by Yogaraj SK Leave a Comment

watermarked 11 hly 1

ಹಳಿಯಾಳ:- “ಕಾಂಗ್ರೇಸ್ ನಂಬಿ ಉದ್ದಾರ ಆದವರಿಲ್ಲಾ, ದೇವೆಗೌಡರ ಕುಟುಂಬ ನಂಬಿ ಬದುಕಿದವರು ಇಲ್ಲಾ” ಈಗ ರಾಜ್ಯದಲ್ಲಿ ಈ ಕಳ್ಳ-ಕುಳ್ಳರು ಇಬ್ಬರು ಜೋಡಿಯಾಗಿದ್ದು ಅವರಲ್ಲೇ ಕಚ್ಚಾಟ-ಗುದ್ದಾಟಗಳು, ಆಂತರಿಕ ಕಲಹಗಳು ಜೋರಾಗಿದ್ದು ಸದ್ಯದಲ್ಲೇ ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು ಜುಲೈ ಅಥವಾ ಆಗಸ್ಟ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ, ಕೆನರಾ ಲೋಕಸಭಾ ಅಭ್ಯರ್ಥಿ ಅನಂತಕುಮಾರ ಹೆಗಡೆ ಭವಿಷ್ಯ ನುಡಿದರು.
ಚುನಾವಣಾ ಪ್ರಚಾರಾರ್ಥ ಗುರುವಾರ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಆಯೋಜಿಸಿದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಕಳ್ಳ-ಕುಳ್ಳರು ಒಟ್ಟಾಗಿ ಸೇರಿದ್ದು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಒಳ್ಳೆಯ ದಿನಗಳು-ಒಳ್ಳೆಯ ಭವಿಷ್ಯವಿದೆ. ಇವರಿಬ್ಬರ ಕಚ್ಚಾಟದಿಂದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಮುಂದೆ ಜನರ ಪ್ರೀತಿ ವಿಶ್ವಾಸದಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದ ಅನಂತಕುಮಾರ ಹಳಿಯಾಳ ಕ್ಷೇತ್ರದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರನ್ನು ಗೆಲ್ಲಿಸುವಂತೆ ಈಗಲೇ ಕರೆ ನೀಡಿದರು.
ಸ್ವಾತಂತ್ರ್ಯಾ ನಂತರ ಜನರ ಅನುಭವಕ್ಕೆ ಸರ್ಕಾರ ಬಂದಿದ್ದು. ನಮಗಾಗಿ ಯೋಚನೆ ಮಾಡೋ ಸರ್ಕಾರ ಬಂದಿದೆ ಎಂದು ಜನ ಅರಿತಿದ್ದು ಈಗಾಗಲೇ ಜನರು ಮತ್ತೋಮ್ಮೆ ಮೋದಿಜಿಯವರನ್ನು ಪ್ರಧಾನಮಂತ್ರಿಯಾಗಿ ನೋಡಲು ತೀರ್ಮಾನಿಸಿದ್ದಾರೆ ಎಂದ ಅವರು ಜಗತ್ತಿಗೆ ಮೋದಿ ಇನ್ನೊಮ್ಮೆ ಪ್ರಧಾನಿ ಆಗುವುದು ಬೇಕಾಗಿದೆ ಆದರೇ ದೇಶವನ್ನು ಲೂಟಿ ಹೋಡೆಯಲು ಭ್ರಷ್ಟಾಚಾರಿಗಳು ಒಂದಾಗಿದ್ದು ಪ್ರಾಮಾಣಿಕ ಆಡಳಿತಗಾರ ಮೋದಿಜಿಯವರನ್ನು ಸೋಲಿಸಲು ಎಲ್ಲಿಲ್ಲದ ಕಸರತ್ತು ಮಾಡುತ್ತಿದ್ದು ಇದು ಸಫಲವಾಗುವುದಿಲ್ಲ ಜನ ಮೋದಿಯವರ ಪರವಾಗಿದ್ದಾರೆಂದು ವಿಶ್ವಾಸದಿಂದ ನುಡಿದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಕಾಂಗ್ರೇಸ್-ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಾ ದೇಶದ ಸಂಪತ್ತು ಲೂಟಿ ಮಾಡಿದ್ದಾರೆ. ದೇಶದ ಅಧೋಗತಿಗೆ ಕಾಂಗ್ರೇಸ್ ಕಾರಣ. ರಾಹುಲ್-ಸೋನಿಯಾ ಗಾಂಧಿಯವರ ಈಡಿ ಕುಟುಂಬಕ್ಕೆ ಝಡ್ ಪ್ಲಸ್ ಸೆಕ್ಯೂರಿಸಿ ನೀಡಿ ಜನರ ಕೊಟ್ಯಂತರ ರೂ. ತೆರಿಗೆ ಹಣವನ್ನು ಪೋಲು ಮಾಡಲಾಗಿದೆ. ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡದ ಕಾಂಗ್ರೇಸ್ ತನ್ನ ಸರ್ಕಾರದ ಅವಧಿಯಲ್ಲಿ ಹಲವಾರು ಹಗರಣಗಳನ್ನು ನಡೆಸಿ ಸಾವಿರಾರು ಕೋಟಿ ರೂ. ಹಣವನ್ನು ಹಗಲು ದರೊಡೆ ಮಾಡಿದ್ದಾರೆಂದು ಆರೋಪಗಳ ಸುರಿಮಳೆಗೈದರು.
ಕೇಂದ್ರ ಸರ್ಕಾರ ಪಿಎಮ್‍ಜಿಎಸ್‍ವೈ, ಗ್ಯಾಸ್ ಸಿಲಿಂಡರ್, ಬಲ್ಬ್, ವಿದ್ಯುತ್ ಸಂಪರ್ಕ, ರಸ್ತೆ, ಮೂಲಭೂತ ಸೌಕರ್ಯಗಳು, ವಸತಿ ಯೋಜನೆ ಸೇರಿದಂತೆ ನೂರಾರು ಯೋಜನೆಗಳನ್ನು ಯಾವುದೇ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡದೆ ಪ್ರಾಮಾಣಿಕ ಹಾಗೂ ಪರಿಣಾಮಕಾರಿಯಾಗಿ ಜನರ ಮನೆಬಾಗಿಲಿಗೆ ತಲುಪಿಸಿದ್ದು ಜನ ಮೋದಿ ಸರ್ಕಾರದ ಮೇಲೆ ನಂಬಿಕೆ-ವಿಶ್ವಾಸ ಹೊಂದಿದ್ದು ಬಿಜೆಪಿ ಅಭ್ಯರ್ಥಿಗಳನ್ನು ಸಂಪೂರ್ಣ ಬಹುಮತದೊಂದಿಗೆ ಆಯ್ಕೆ ಮಾಡುವಂತೆ ಕರೆ ನೀಡಿದರು.
ಆನಂದ ಎಲ್ಲಿದಿಯಪ್ಪಾ ? :-ಇನ್ನೂ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೇಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಪಕ್ಷಾಂತರ ಮಾಡುತ್ತಲೇ ಇರುವ ವ್ತಕ್ತಿಯಾಗಿದ್ದಾರೆ. ಚುನಾವಣೆ ಬಳಿಕ ನಾಪತ್ತೆಯಾಗುವ ಅಸ್ನೋಟಿಕರ ಅವರು ಮತ್ತೇ ಚುನಾವಣೆ ಸಮಯಕ್ಕೆ ಪ್ರತ್ಯಕ್ಷರಾಗುತ್ತಾರೆ. ಹೀಗಾಗಿ ನಿಖಿಲ್ ಎಲ್ಲಿದಿಯಪ್ಪಾ ಎಂದು ಕೆಳೋ ಹಾಗೆ ಕಾರವಾರ-ಅಂಕೋಲಾ ಕ್ಷೇತ್ರದ ಜನತೆ ಆನಂದ ಎಲ್ಲಿದಿಯಪ್ಪಾ ?? ಎಂದು ಕೆಳೋ ಪರಿಸ್ಥಿತಿ ಇದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದು ಸಭೆ ನಗೆ ಗಡಲಿನಲ್ಲಿ ತೆಲಿದ ವಿದ್ಯಮಾನ ನಡೆಯಿತು.
ಪಕ್ಷದ ಹಿರಿಯ ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿ ಹೋರಾಟಗಾರ ಅನಂತಕುಮಾರ ಹೆಗಡೆ ಭಟ್ಕಳದಲ್ಲಿ ಹಿಂದೂಗಳ ರಕ್ಷಣೆ ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು ಅಲ್ಲದೇ ಈದ್ಗಾ ಮೈದಾನದಲ್ಲಿ ದೇಶದ ತ್ರಿವರ್ಣ ಧ್ವಜ ಹಾರಿಸಿ ದೇಶಾಭಿಮಾನ ಮೆರೆದಿದ್ದರು. ಆ ಸಂದರ್ಭದಲ್ಲೇ ಅವರ ಮೇಲೆ 30ಕ್ಕೂ ಅಧಿಕ ಪ್ರಕರಣಗಳನ್ನು ಹಾಕಲಾಗಿತ್ತು ಅದನ್ನೆಲ್ಲ ಮೆಟ್ಟಿ ನಿಂತ ಹೆಗಡೆ ಅವರು ಮತ್ತೊಮ್ಮೆ 6ನೇ ಬಾರಿ ಸಂಸದರಾಗಿ ದೇಶಕ್ಕಾಗಿ ಸೇವೆ ಸಲ್ಲಿಸಬೇಕಿದೆ ಎಂದರು.
ವೇದಿಕೆಯ ಮೇಲೆ ಬಿಜೆಪಿ ತಾಲೂಕಾಧ್ಯಕ್ಷ ಶೀವಾಜಿ ನರಸಾನಿ, ಮುಖಂಡರಾದ ಶ್ರೀಕಾಂತ ಸೋನಾರ, ಬಸಣ್ಣ ಕುರುಬಗಟ್ಟಿ, ಕೃಷ್ಣಾ ಪಾಟೀಲ್, ಗಣಪತಿ ಕರಂಜೆಕರ, ಮೋಹನ ಪಾಟೀಲ್, ಬಾಬುನಿ, ಅನಿಲ ಮುತ್ನಾಳ್, ವಿಎಮ್ ಪಾಟೀಲ್ ಮೊದಲಾದವರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: -Guestings, ānanda ellidiyappā, Ananda Elliidepa, āntarika kalaha, balb, bulb, Congrats Trusted Ll, dēvegauḍara nambi badukidavarilla, Gas cylinder, good days for the state, good fortune, gyās siliṇḍar, hāsya caṭāki, housing scheme, Hundreds of projects, including the Karwar-Ankola constituency, infrastructure, Internal Strife, kaccāṭa-guddāṭagaḷu, kāṅgrēs nambi uddāra ādavarilla, kāravāra-aṅkōlā kṣētrada janate, Minister Ananth Kumar Hegde, Modi's prime minister, mōdijiyavarannu pradhānamantri, mūlabhūta saukaryagaḷu, nikhil ellidiyappā endu keḷō hāge, oḷḷeya bhaviṣya, pi'em‍ji'es‍vai, PMGSI, power connection, rājyadalli ī kaḷḷa-kuḷḷaru ibbaru jōḍi, rājyakke oḷḷeya dinagaḷu, raste, Road, saciva anantakumāra hegaḍe, trust me devegaudara survival, Two Couples, Two Thieves In The State, vasati yōjane sēridante nūrāru yōjane, vidyut samparka, ಆಂತರಿಕ ಕಲಹ, ಆನಂದ ಎಲ್ಲಿದಿಯಪ್ಪಾ, ಒಳ್ಳೆಯ ಭವಿಷ್ಯ, ಕಚ್ಚಾಟ-ಗುದ್ದಾಟಗಳು, ಕಾಂಗ್ರೇಸ್ ನಂಬಿ ಉದ್ದಾರ ಆದವರಿಲ್ಲ, ಕಾರವಾರ-ಅಂಕೋಲಾ ಕ್ಷೇತ್ರದ ಜನತೆ, ಗ್ಯಾಸ್ ಸಿಲಿಂಡರ್, ದೇವೆಗೌಡರ ನಂಬಿ ಬದುಕಿದವರಿಲ್ಲ, ನಿಖಿಲ್ ಎಲ್ಲಿದಿಯಪ್ಪಾ ಎಂದು ಕೆಳೋ ಹಾಗೆ, ಪಿಎಮ್‍ಜಿಎಸ್‍ವೈ, ಬಲ್ಬ್, ಮೂಲಭೂತ ಸೌಕರ್ಯಗಳು, ಮೋದಿಜಿಯವರನ್ನು ಪ್ರಧಾನಮಂತ್ರಿ, ರಸ್ತೆ, ರಾಜ್ಯಕ್ಕೆ ಒಳ್ಳೆಯ ದಿನಗಳು, ರಾಜ್ಯದಲ್ಲಿ ಈ ಕಳ್ಳ-ಕುಳ್ಳರು ಇಬ್ಬರು ಜೋಡಿ, ವಸತಿ ಯೋಜನೆ ಸೇರಿದಂತೆ ನೂರಾರು ಯೋಜನೆ, ವಿದ್ಯುತ್ ಸಂಪರ್ಕ, ಸಚಿವ ಅನಂತಕುಮಾರ ಹೆಗಡೆ, ಹಾಸ್ಯ ಚಟಾಕಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...