ಹೊನ್ನಾವರ; ತಾಲೂಕಿನ ವಿವಿದಢೆ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಚುನಾವಣಾ ಪ್ರಚಾರದ ವೇಳೆ ಮಾತನಾಡಿ ಕೇಂದ್ರ ಸಚೀವ ಅನಂತಕುಮಾರ ಹೆಗಡೆ ಹೊನ್ನಾವರದ ಪರೇಶ ಪ್ರಕರಣ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು ಬಿಟ್ಟರೆ ನ್ಯಾಯ ಬೇಕಿಲ್ಲ. ಪ್ರಕರಣ ಸಂದರ್ಭದಲ್ಲಿ ಹನಿ ಹನಿ ರಕ್ತಕ್ಕು ನ್ಯಾಯ ನಿಡುತ್ತೇವೆ ಎಂದು ಹೇಳಿ ಈ ವರೆಗು ಪ್ರಕರಣದ ಕುರಿತು ಏಕೆ? ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಲಿ ಆತನಿಗೆ ಧರ್ಮ ಇದ್ದರೆ ಗಂಡಸ್ತನ ಇದ್ದರೆ ಪರೇಶ್ ಪ್ರಕರಣ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಹಿರಿಯ ಮುಖಂಡ ಜಿಲ್ಲಾ ಉಸ್ತುವಾರಿ ಸಚೀವರಾದ ಆರ.ವಿ.ಡಿಯವರು ಪ್ರಚಾರದಲ್ಲಿ ಮುಂಚೂಣಿಯಲ್ಲಿವಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರರು ಬಹಿರಂಗ ಬೆಂಬಲ ಸೂಚಿಸುತ್ತಿದ್ದಾರಯೇ? ಎಂದಾಗ ಉತ್ತರಿಸಿ ಇದೇ ತಿಂಗಳಿ 16,17 ರಂದು ಸಚಿವರು ನಮ್ಮೊಂದಿಗೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್ ನಾಯಕರು,ಕಾರ್ಯಕರ್ತರು ಇಗಾಗಲೇ ಮನೆಮನೆಗೆ ತೆರಳಿ ಪ್ರಚಾರ ಆರಂಭಿಸಿದ್ದಾರೆ ಯಾವುದೇ ಗೊಂದಲವಿಲ್ಲ ಎಂದರು. ಚುನಾವಣೆ ಸಮಯದಲ್ಲಿ ಬಿಜೆಪಿಯವರು ಮತದಾರರ ಬೇರೆಡೆಗೆ ಸೆಳೆಯಲು ಪ್ರಯತ್ನ ನಡೆಸುತ್ತಿದ್ದರು ಈ ಬಾರಿ ಅದು ಸಾಧ್ಯವಿಲ್ಲ. ಕೇಂದ್ರ ಸರ್ಕಾರದಿಂದ 6 ಕೋಟಿ ಅನುದಾನ ತಂದರೆ ಜಿಲ್ಲೆಯಲ್ಲಿ ಹೊಸ ಕೈಗಾರಿಕೆ ಆಗಲಿ ಉದ್ಯೋಗ ಕಲ್ಪಿಸುವ ಯೋಜನೆಯಾಗಲಿ ಎಲ್ಲಿ ಎಂದು ಉತ್ತರಿಸಲಿ. ಜೈನ ಸಮುದಾಯ ಮುಸ್ಲಿಂ ಸಮುದಾಯದವರನ್ನು ಕೀಳಾಗಿ ಕಾಣುವ ಇವರು ಇದೇ ಇಸ್ಲಾಂ ದೇಶದಿಂದ ಡಾಂಬರು ವ್ಯವಹಾರ 30 ಕ್ಕೂ ಹೆಚ್ಚು ಪ್ರಕರಣ ಹೊಂದಿರುವ ಫಯಾಜ್ ನೊಂದಿಗೆ ಗುರುತಿಸಿಕೊಳ್ಳೊದು ನೋಡಿದರೆ ತಿಳಿಯುತ್ತದೆ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುವ ಸಂಸದ ಎಂದು ಟೀಕಿಸಿದರು.
Leave a Comment