• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಂಸದ ಅನಂತಕುಮಾರ್ ಹೆಗಡೆಯ ನಾಲಿಗೆಯಲ್ಲಿಯೆ ವಿಷವಿದೆ. ಈ ವ್ಯಕ್ತಿಯ ಸಾಧನೆ ಶೂನ್ಯ. ಪ್ರತಿ ಬಾರಿ ಮತ ಕೇಳುವಾಗ ಬೇರೆಯವರ ಹೆಸರಿನಲ್ಲಿ ಮತ ಕೇಳುವವ ಮಹಾನುಭಾವ ; ಆನಂದ ಅಸ್ನೋಟಿಕರ್

April 14, 2019 by Vishwanath Shetty Leave a Comment

watermarked jds prachar
ಹೊನ್ನಾವರ: ತಾಲೂಕಿನ ಅರೇಅಂಗಡಿಯಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯನ್ನುದ್ದೇಸಿಸಿ ಮಾತನಾಡುತ್ತಿದ್ದರು. ಈ ಬಾರಿ ಬದಲಾವಣೆಗಾಗಿ, ಜಿಲ್ಲೆಗೆ ನ್ಯಾಯ ಒದಗಿಸುವ ಸಲುವಾಗಿ ಈ ಬಾರಿ ನನಗೆ ಅವಕಾಶÀ ನೀಡಿ ಎಂದರು. ಕಳೆದ 25 ವರ್ಷ ಭಾಷಣದಲ್ಲೆ ಮರಳು ಮಾಡಿದ್ದಾರೆ. ಅಭಿವ್ರದ್ದಿ ಶೂನ್ಯ. ಇವರು ಕೆಂದ್ರ ಸಚಿವರಾಗಿದ್ದರು ಕೂಡಾ ಜಿಲ್ಲೆಯ ಅಭಿವ್ರದ್ದಿ ಕುರಿತು ಗಮನ ಹರಿಸಿಲ್ಲ. ಜಾತಿ ಧರ್ಮಗಳ ನಡುವೆ ಬೆಂಕಿಯಿಟ್ಟು ಬೆಳೆಬೆಯಿಸಿಕೊಳ್ಳುತ್ತಿದ್ದಾನೆ. ಜೈನ ಧರ್ಮದ ಕುರಿತು ಕೆಟ್ಟದಾಗಿ ಮಾತನಾಡಿದ್ದಾರೆ. ಧರ್ಮ ರಕ್ಷಣೆ ಎಂದು ಮಾತನಾಡುವ ಇವರು ಹಿಂಧೂಗಳಿಗು ಎನು ಮಾಡಿಲ್ಲ ಎಂದು ಕಾಂಗ್ರೆಸ್ -ಜೆ.ಡಿ.ಎಸ್ ಮೈತ್ರಿ ಲೋಕಸಭಾ ಅಭ್ಯರ್ಥಿ ಆನಂದ ಅಸ್ನೋಟಿಕರ್ ಕಿಡಿಕಾರಿದರು.
ಅನಂತಕುಮಾರ್ ಹೆಗಡೆ ವೈದ್ಯರ ಮೇಲೆ ಹಲ್ಲೆ, ಸಾಹಿತಿಗಳನ್ನು ಕೆಟ್ಟದಾಗಿ ಮಾತನಾಡುವುದು ಸಂವಿಧಾನ ಬದಲಾಯಿಸುವುದಾಗಿ ಪ್ರಚೋದಾನತ್ಮಕ ಭಾಷಣಕ್ಕೆ ಮಾತ್ರ ಸೀಮಿತ. ಅಭಿವೃದ್ದಿ ಅಂದರೆ ತಿಳೀದಿಲ್ಲ. ಜಿಲ್ಲೆಯ ಬಹುವರ್ಷದ ಸರಿಸುಮಾರು 90ಸಾವಿರ ಅತಿಕ್ರಮಣದಾರ ಸಮಸ್ಯೆಗೆ ಸ್ಪಂದಿಸಿಲ್ಲ. ಇವನ ಮೇಲೆ ತಂದೆಗೆ ವಿಶ್ವಾಸವಿಲ್ಲ. ಹಿಂಧೂ ಧರ್ಮ ರಕ್ಷಕನೆನ್ನುವ ಇತ ಇಸ್ಲಾಂ ದೇಶದಿಂದ ರಸ್ತೆ ಡಾಂಬರ್ ವ್ಯವಹಾರದಲ್ಲಿ ತೊಡಗಿ ಹಣ ಮಾಡುತ್ತಿದ್ದಾನೆ. ಇತನಿಂದ ಒಳ್ಳೆಯವನಾಗಿದ್ದಾನೆಂದು ಓರ್ವ ಯುವಕನು ಹೇಳುತ್ತಿಲ್ಲ. ಸಾವಿರಾರು ಯುವಕರ ಮೇಲೆ ಕೆಸ್ ನಡೆಯುತ್ತಿದೆ. ಇವರಿಗೆ ಊದ್ಯೋಗವಿಲ್ಲದೇ ಪರದಾಡುವಂತೆ ಮಾಡಿದ್ದಾರೆ. ಪರೇಶ್ ಮೇಸ್ತ ನಿಗೂಢ ಸಾವಿನ ಪ್ರಕರಣ ಶಾಂತಿಯಿಂದ ಹೋರಾಟ ನಡೆಯುತ್ತಿತ್ತು. ಇತ ಬಂದು ಬೆಂಕಿ ಹಾಕಿದ. ಇತನಿಗೆ ಧೈರ್ಯವಿದ್ದರೆ ಪರೇಶ್ ಮೇಸ್ತ ಸಾವಿನ ಪ್ರಕರಣ ಬಹಿರಂಗ ಪಡಿಸಲಿ. 7 ಮೀನುಗಾರರು ಕಾಣೆಯಾಗಿದ್ದಾರೆ. ಇವರ ಕುಟುಂಬಕ್ಕೆ ಸಾಂತ್ವನ ನೀಡಲು ಸಮಯವಿಲ್ಲ. ಇತನಿಗೆ ಒಂದು ನಯಾಪೈಸೆ ಆಸ್ತಿ ಇರಲಿಲ್ಲ. ಶಿರಸಿಯಲ್ಲಿ 5ಕೋಟಿ ವೆಚ್ಚದ ಮನೆ,ಬೆಂಗಳೂರು ಬಸವನಗುಡಿಯಲ್ಲಿ 8 ಕೋಟಿ ವೆಚ್ಚದ ಮನೆ ಹೇಗೆ ಸಂಪಾದಿಸಿದ ಎಂದು ಸವಾಲಾಕಿದರು. ಇತ ಸಂಸದರ ನಿಧಿಯ 5 ಕೋಟಿ ಅನುದಾನವನ್ನು ವಿನಿಯೋಗಿಸಿಲ್ಲ ಎಂದು ಆರೋಪಿಸಿದರು. ಇವನಂಥ ವಿಚಿತ್ರ ಸಂಸದನನ್ನು ಇಡೀ ರಾಷ್ಟವೇ ಗಮನಿಸುತ್ತಿದೆ. ಬಿಜೆಪಿ ನಾಯಕರಲ್ಲೆ ಇವನ ಬಗ್ಗೆ ವಿರೋಧವಿದೆ. ಸ್ಟಾರ್ ಪ್ರಚಾರಕ ಎಂದು ಹಿಂದೆ ಪಕ್ಷ ಹೇಳುತ್ತಿತ್ತು. ಆದರೆ ಇವರ ಅಸಂಬದ್ದ ಹೇಳಿಕೆಯಿಂದ ಇವರನ್ನು ಇತರೆಕಡೆ ಪ್ರಚಾರದಿಂದ ಪಕ್ಷ ದೂರವಿರಿಸಿದೆ. ಯಡಿಯುರಪ್ಪನವರು ಅಂತರ ಕಾದುಕೊಂಡಿದ್ದಾರೆ. ಕುಮಟಾ ವಿಧಾನಸಭಾ ಕ್ಷೆತ್ರದಲ್ಲಿ ಒಂದೇ ಒಂದು ಜನಸ್ಪಂದನಾ ಕಾರ್ಯಕ್ರಮ ಮಾಡಲಿಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಬೇಜವಬ್ದಾರಿ ಹೇಳಿಕೆ ನೀಡಿ ಸಂಸತ್ತನಲ್ಲಿ ಕ್ಷಮೇ ಕೇಳುವಂತಹ ಪ್ರಮಾದ ಮಾಡಿದ್ದಾನೆ ಎಂದು ಗುಡುಗಿದರು.

ಸೂರಜ್ ನಾಯ್ಕ ಸೋನಿ ಮಾತನಾಡಿ ಕ್ಷೇತ್ರದುದ್ದಕ್ಕೂ ಅನಂತ್ ಕುಮಾರ್ ಬೇಡ ಎಂಬ ಮಾತು ಕೇಳಿ ಬರುತ್ತಿದೆ. ಇತನು ಜಿಲ್ಲೆಗೆ ಅಭಿವೃದ್ದಿ ಮಾಡಿದ್ದು ಶೂನ್ಯ. ಸತ್ಯ,ನ್ಯಾಯ,ಧರ್ಮ ರಕ್ಷಣೆ ಎಂಬ ನಂಬಿಕೆಯಿಟ್ಟ ಕಾರ್ಯಕರ್ತರಿಗೆ ಜೈಲು,ಕೋರ್ಟು,ಬೇಲು ಎಂದು ಅಲೆಯುವಂತಾಗಿದೆ. ತೋರಿಸುವುದು ಒಂದು ಧರ್ಮಕ್ಕೆ ಹೋಡೆಯುವುದು ನಮ್ಮ ಧರ್ಮಕ್ಕೆ ಇತನ ಚಾಳಿಯಾಗಿದೆ. ಇತನಿಂದ ಯಾರಿಗು ನ್ಯಾಯ ಸಿಗುವುದಿಲ್ಲ.ಜಿಲ್ಲೆಯ ಸಮಸ್ಯೆ ಬಗ್ಗೆ ಒಮ್ಮೆಯು ಸಂಸತ್ತನಲ್ಲಿ ಮಾತನಾಡದ ಅನಂತ್ ಹೆಗಡೆ ಜೈನ ಧರ್ಮದವರಿಗೆ ,ದಲಿತರಿಗೆ ಅವಹೇಳನಕಾರಿ ಹೇಳಿಕೆ ನೀಡಿ ಸಂಸದ್‍ನಲ್ಲಿ ಕ್ಷಮೇ ಕೇಳಿದ್ದು ಬಿಟ್ಟರೆ ಇತ ಜಿಲ್ಲೆಗಾಗಿ ಎನು ಮಾತನಾಡಿಲ್ಲ ಎನನ್ನು ಮಾಡಿಲ್ಲ ಎಂದು ಕಿಡಿಕಾರಿದರು.
ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ ಜಿಲ್ಲಗೆ ಸಂಸದರ ಕೊಡುಗೆ ಏನಿಲ್ಲ. ತಾನು 1500 ಕೋಟಿ ರೂ ಅನುದಾನ ಕ್ಷೇತ್ರಕ್ಕೆ ತಂದಿದ್ದೆನೆ. ಸಂಸದ ಅನಂತ್ ಕುಮಾರ್ ಹೆಗಡೆ 1ಕೋಟಿ ಅನುದಾನವು ಕ್ಷೇತ್ರಕ್ಕೆ ತರಲಿಲ್ಲ. ನನ್ನ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ಸಂಸದರ ನಿಧಿಯಿಂದ ಈವರೆಗು ಆಗಿಲ್ಲ. ಕ್ಷೇತ್ರದಲ್ಲಿ ಕುಡಿಯುವ ನೀರು ರಸ್ತೆ ಅಭಿವ್ರದ್ದಿ ಬಗ್ಗೆ ಗಮನಹರಿಸುತ್ತಿಲ್ಲ. ಇಂತವರನ್ನು ಮತ್ತೆ ಆಯ್ಕೆ ಮಾಡಿದರೆ ಜಿಲ್ಲೆ ಅದೋಗತಿಯತ್ತ ಹೊಂದಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೇಂಗೇರಿ ಮಾತನಾಡಿ ಕೆಲ ಯುವಕರು ಮೋದಿ ಮೋದಿ ಎಂದು ಮಾರುಹೋಗಿದ್ದಾರೆ. ಅವರ ಜಾಕೇಟ್ ನೋಡಿ ಮಾರು ಹೋಗಿರಬೇಕು. ದೇಶದಲ್ಲಿ ಶಾಂತಿ ಸಹಬಾಳ್ವೆ ಬೇಕೆಂದರೆ, ಕಾಂಗ್ರೆಸ್-ಜೆ.ಡಿ.ಎಸ್ ಇತರ ಪಕ್ಷಗಳ ಮೈತ್ರಿ ಸರ್ಕಾರ ಕೇಂದ್ರದ ಆಡಳಿತ ಚುಕ್ಕಾಣಿ ಹಿಡಿಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಯು ಆರ್ ಸಭಾಪತಿ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್ ನಾಯ್ಕ,ಕೆಪಿ.ಸಿ.ಸಿ ಕಾರ್ಯದರ್ಶಿಸುನೀತಾ ಹುರಕಡ್ಲಿ,ಜೆ.ಡಿ.ಎಸ್ ತಾಲೂಕಾಧ್ಯಕ್ಷ ಸುಬ್ರಾಯ್ ಗೌಡ,ಗೋವಿಂದ ಗೌಡ ಉರ್ಮಿಳಾ ಶೇಟ್, ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: badly speaking, belief in religion and the protection of religion, every time a vote is heard in the name of someone else's vote, Jainism, justice, justice and justice, MP Ananthakumar's head, protection, RELIGION, the joyous asnotiker, this person's performance is zero, thousands of youths on Kes, tongue is poisoned, zero, Zero. Believe in the truth

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...