ಹೊನ್ನಾವರ : ಬ್ಲಾಕ್ ಕಾಂಗ್ರೆಸ ಮತ್ತು ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿಯವರ ಸೂಚನೆಯ ಮೇರೆಗೆ, ರಾಜ್ಯ ಕಾಂಗ್ರೆಸ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷರಾದ
ಶ್ರೀ ಲಕ್ಷಿನಾರಾಯಣರವರ ಅನುಮೋದನೆಯಲ್ಲಿ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ ಹಿಂದುಳಿದ ವರ್ಗ ವಿಭಾಗ ಅಧ್ಯಕ್ಷರಾದ ಬಿ.ಡಿ.ನಾಯ್ಕರವರು, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹೊಟೇಲ್ ಉದ್ಯಮಿ ಶ್ರೀ ಮಂಜುನಾಥ ಹನುಮಂತ ಗೌಡ ಇವರನ್ನು ಹೊನ್ನಾವರ ತಾಲೂಕಾ ಕಾಂಗ್ರೆಸ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ ಎಂದು ಬಿ.ಸಿ.ಸಿ. ಅಧ್ಯಕ್ಷ ಜಗದೀಪ ಎನ್.ತೆಂಗೇರಿ ತಿಳಿಸಿದ್ದಾರೆ.
ಈ ಕುರಿತಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ಸಂತಸ ವ್ಯಕ್ತ ಪಡಿಸಿದ್ದು ತಾವು ಎಂದಿನಂತೆ ಪಕ್ಷದ ಸಂಘಟನೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುವಂತೆ ಶುಭ ಹಾರೈಸಿದ್ದಾರೆ.
Leave a Comment