• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

10 ಕೋಟಿ ಉದ್ಯೋಗ ಸೃಷ್ಟಿ ಯುವಕರ ಕನಸಿಗೆ ಭಂಗ ತಂದ ಮೋದಿ -ಆನಂದ ಅಸ್ನೋಟಿಕರ

April 15, 2019 by Gaju Gokarna Leave a Comment

 Anand Asnotikar Campaigning ,Honnavar

ಹೊನ್ನಾವರ : ಮೋದಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ದೇಶದ 2ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇನೆ ಅನ್ನುವ ಆಶ್ವಾಸನೆ ನೀಡಿ ಅಧಿಕಾರಕೆ ಬಂದಿದ್ದರು . ಆದರೆ ಅಧಿಕಾರಕ್ಕೆ ಬಂದು ಐದು ವರ್ಷ ಕಳೆದರೂ ಕೇವಲ ಒಂದು ಲಕ್ಷ ಉದ್ಯೋಗ ಸ್ಶಷ್ಟಿಸಲು ವಿಫಲರಾದ ಮೋದಿ ಸುಳ್ಳಿನ ಸರದಾರ ಎಂದು ಉತ್ತರ ಕನ್ನಡ ಲೋಕಾಸಭಾ ಕ್ಷೇತ್ರದ ಕಾಂಗ್ರೆಸ-ಜೆ.ಡಿ.ಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ ಅಸ್ನೋಟಿಕರ ಟೀಕಿಸಿದರು.
ಅವರು ಹೊನ್ನಾವರ ತಾಲೂಕಿನ ಅರೇಅಂಗಡಿ, ಹಳದೀಪುರ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಹೊನ್ನಾವರ ಬ್ಲಾಕ ಕಾಂಗ್ರೆಸ ಮತ್ತು ಜೆ.ಡಿ.ಎಸ್. ಜಂಟಿಯಾಗಿ ಏರ್ಪಡಿಸಿದ ಸಾರ್ವಜನಿಕ ಸಭೆಯನ್ನು ಮುಗಿಸಿ, ಹೊನ್ನಾವರ ಕರ್ಕಿ ನಾಕಾ ಬಳಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಂಸದ ಅನಂತ ಕುಮಾರ ಹೆಗಡೆ ಕಳಾಹೀನ ಮಂತ್ರಿಯಾಗಿದ್ದೂ, ತನ್ನ ಕಾಲಾವಧಿಯಲ್ಲಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡದೇ ಕೆನರಾ ಕ್ಷೇತ್ರವನ್ನು 25 ವರ್ಷ ಹಿಂದಕ್ಕೆ ತಳ್ಳಿದ್ದಾರೆ ಎಂದರು. ಕೇವಲ ಹಿಂದುಳಿದ ವರ್ಗದ ಯುವಕರನ್ನು ಸಮಾಜ ವಿರೋಧಿ ಕೆಲಸಕ್ಕೆ ಪ್ರಚೋದಿಸಿ, ಇಂದು ನೂರಾರು ಯುವಕರು ಕೋರ್ಟ, ಕಛೇರಿ ಅಲೆಯುತ್ತಿದ್ದರೆ. ಅದು ಅನಂತ ಕುಮಾರ ಹೆಗಡೆಯ ಸಾಧನೆ ಎಂದರು. ಇನ್ನಾದರೂ ಉತ್ತರ ಕನ್ನಡ ಜಿಲ್ಲೆಯ ಮತದಾರರು ಅಭಿವೃದ್ದಿಯ ದೃಷ್ಟಿಯಿಂದ ಅನಂತ ಕುಮಾರ ಹೆಗಡೆಯನ್ನು ಸೋಲಿಸಿ ನನ್ನನ್ನು ಗೆಲ್ಲಿಸಿದರೆ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಹಗಲು ರಾತ್ರಿ ಹೋರಾಡುವುದಾಗಿ ನೆರೆದ ಸಾರ್ವಜನಿಕರಿಗೆ ಭರವಸೆ ನೀಡಿದರು.
ಮಾಜಿ ಶಾಸಕ ಕೆ.ಪಿ.ಸಿ.ಸಿ.ಯಿಂದ ನಿಯೋಚಿಸಲ್ಲಟ್ಟ ವೀಕ್ಷಕರಾದ ಯು.ಆರ್.ಸಭಾಪತಿ ಮಾತಾನಾಡಿ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಬಿ.ಜೆ.ಪಿ.ಯವರ ಮನೆ ಆಸ್ತಿಯಂತೆ ವರ್ತಿಸುತ್ತಿದ್ದಾರೆ. ನೂರಾರು ವರ್ಷಗಳ ಭವ್ಯ ಇತಿಹಾಸವಿದ್ದು, ಸ್ವಾತಂತ್ರ ಸಂಗ್ರಾಮದ ಮೂಲಕ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಕಾಂಗ್ರೆಸ ಪಕ್ಷವನ್ನು ದೇಶದ್ರೋಹಿಗಳು ಎಂದು ಕರೆಯುತ್ತಿರುವ ಬಿ.ಜೆ.ಪಿ. ಮುಖಂಡರ ವರ್ತನೆಯನ್ನು ಸಭಾಪತಿ ಖಂಡಿಸಿದರು.

Anand Asnotikar Campaigning ,Honnavar
ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಮಾತನಾಡಿ ಸಂಸದ ಅನಂತ ಕುಮಾರ ಹೆಗಡೆಯ ನಾಲಿಗೆ ಅವರ ಅಂತರಂಗವನ್ನು ಸಾರುತ್ತದೆ. ಸುಳ್ಳು ಹೇಳುವುದೇ ಅವರ ಬಂಡವಾಳ ಎಂದರು. ಹೊನ್ನಾವರದಲ್ಲಿ ಸಾವಿಗಿಡಾದ ಪರೇಶ ಮೇಸ್ತನಿಗೆ ಒಂದು ವಾರದಲ್ಲಿ ಹನಿಹನಿ ರಕ್ತಕ್ಕೂ ನ್ಯಾಯ ಕೂಡಿಸುತ್ತೇನೆ ಎಂದವರು ಈಗ ವರ್ಷ ಕಳೆದರೂ ನ್ಯಾಯದ ಬಗ್ಗೆ ಮಾತೇ ಇಲ್ಲಾ. ನನ್ನ ಕಾಲಾವಧಿಯಲ್ಲಿ ನಾನು ಕ್ಷೇತ್ರಕ್ಕೆ ಮಾಡಿದ ಅಭಿವೃಧ್ದಿಯ ಶೇ10ನ್ನ ಕೂಡ ಅನಂತ ಕುಮಾರ ಮಾಡಿಲ್ಲಾ ಎಂದರು.
ಜನತಾದಳದ ಮುಖಂಡ ಸೂರಜ್ ಸೋನಿ ಮಾತಾನಾಡಿ, ಅನಂತ ಕುಮಾರ ಹೆಗಡೆ ಹತ್ತಾರು ವರ್ಷಗಳ ಕಾಲ ನಮ್ಮನ್ನು ಉಪಯೋಗಿಸಿಕೊಂಡು ಕೊನೆಗೆ ನಮ್ಮನ್ನೆಲ್ಲಾ ಜೈಲಿಗೆ ಅಟ್ಟಿಸಿ ಖುಷಿ ಪÀಟ್ಟಂತಹ ಅನಂತ ಕುಮಾರ ಹೆಗಡೆ ವಿಶ್ಯಾಸ ದ್ರೋಹಿ ಎಂದರು. ಯುವಕರು ಇಂತವರ ಬಣ್ಣ ಬಣ್ಣದ ಮಾತುಗಳಿಗೆ ಮರಳಾಗದಂತೆ ಎಚ್ಚರದಿಂದಿರಲು ಕರೆ ನೀಡಿದರು.
ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ ಯಾರಿಗೂ ಗೌರವ ನೀಡದೇ, ಸರ್ವಾಧಿಕಾರಿಯಂತೇ ವರ್ತಿಸುವ ಅನಂತ ಕುಮಾರ ಹೆಗಡೆಯವರನ್ನು ಮನೆಗೆ ಕಳುಹಿಸುವ ಕಾಲ ಸನ್ನಿಹಿತವಾಗಿದೆ ಎಂದರು .

 Anand Asnotikar Campaigning ,Honnavar
ಸಭೆಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವಿನೋದ ನಾಯ್ಕ,ಜೆ.ಡಿ.ಎಸ್. ಜಿಲ್ಲಾ ಅಧ್ಯಕ್ಷ ಬಿ.ಆರ್.ನಾಯ್ಕ,ಕೆ.ಪಿ.ಸಿ.ಸಿ ವೀಕ್ಷಕಿ ಸುನೀತಾ ಹುರಕಡ್ಲಿ, ಕುಮಟಾ ಬ್ಲಾಕ್ ಅಧ್ಯಕ್ಷ ವಿ.ಎಲ್.ನಾಯ್ಕ, ವಾಮನ ನಾಯ್ಕ, ಗಜು ಅಳ್ವೇಕೋಡಿ, ಜೆ.ಡಿ.ಎಸ್. ತಾಲೂಕಾಧ್ಯಕ್ಷ ಸುಬ್ರಾಯ ಗೌಡ, ಯುವ ಮುಖಂಡ ರವಿಕುಮಾರ ಶೆಟ್ಟಿ, ವಿನಾಯಕ ಶೇಟ, ದಾಮೋದರ ನಾಯ್ಕ, ಗೋವಿಂದ ಗೌಡ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಡಿ.ಎಸ್. ಮುಖಂಡ ಕೃಷ್ಣ ಗೌಡ,ಹಳಗೇರಿ ವಂದಿಸಿದರು.

 Anand Asnotikar Campaigning ,Honnavar

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: 10 ಕೋಟಿ ಉದ್ಯೋಗ ಸೃಷ್ಟಿ, Anand Asnotikar Campaigning, Anand Us Otikara, Arangadi in Honnavar Taluk, came to power, Congresses-JD Congress candidate from alliance, freedom fighters, Haldipur zilla panchayat constituency, Honnavar, hundreds of young men in court, jailed prisoners, Janata Dal chief Suraj Soni has a glorious history of hundreds of years, office wave, past Lok Sabha election, Rs 10 crore job creation, the country's 2 million per year for youth employment, Uttarkashi Lok Sabha constituency, youth to dream of youth, ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ದೇಶದ 2ಕೋಟಿ ಯುವಕರಿಗೆ ಉದ್ಯೋಗ, ಅನಂತ ಕುಮಾರ ಹೆಗಡೆ ವಿಶ್ಯಾಸ ದ್ರೋಹಿ, ಆನಂದ ಅಸ್ನೋಟಿಕರ, ಉತ್ತರ ಕನ್ನಡ ಲೋಕಾಸಭಾ ಕ್ಷೇತ್ರದ, ಕಛೇರಿ ಅಲೆ, ಕಳೆದ ಲೋಕಸಭಾ ಚುನಾವಣೆ, ಕಾಂಗ್ರೆಸ-ಜೆ.ಡಿ.ಎಸ್ ಮೈತ್ರಿ ಪಕ್ಷದ ಅಭ್ಯರ್ಥಿ, ಜನತಾದಳದ ಮುಖಂಡ ಸೂರಜ್ ಸೋನಿ, ಜೈಲಿಗೆ ಅಟ್ಟಿಸಿ ಖುಷಿ ಪÀಟ್ಟಂತಹ, ನೂರಾರು ಯುವಕರು ಕೋರ್ಟ, ನೂರಾರು ವರ್ಷಗಳ ಭವ್ಯ ಇತಿಹಾಸವಿದ್ದು, ಯುವಕರ ಕನಸಿಗೆ ಭಂಗ ತಂದ ಮೋದಿ, ಸ್ವಾತಂತ್ರ ಸಂಗ್ರಾಮ, ಹಳದೀಪುರ ಜಿಲ್ಲಾ ಪಂಚಾಯತ ಕ್ಷೇತ್ರ, ಹೊನ್ನಾವರ ತಾಲೂಕಿನ ಅರೇಅಂಗಡಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,058 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...