ಹೊನ್ನಾವರ .ಸೇತುಬಂಧ ಟ್ರಸ್ಟ್ ಕರ್ಕಿ ಇವರ ಆಶ್ರಯದಲ್ಲಿ ದಿÀ: 11-04-2019 ರಿಂದ 20-04-2019 ರವರೆಗೆ ಬೇಸಿಗೆ ರಜಾ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರ್ಕಿ ಸೇತುಬಂಧ ಟ್ರಸ್ಟ್ ಕಾರ್ಯಾಲಯದಲ್ಲಿ ನಿರಂತರ 10 ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಿವರಾಮ ನಾಯಕ, ನಿವೃತ್ತ ಪ್ರಾಚಾರ್ಯರು ಉದ್ಘಾಟಿಸಿ ಮಾತನಾಡುತ್ತಾ, ಸೇತುಬಂಧ ಟ್ರಸ್ಟ್ ಕಾರ್ಯವನ್ನು ಶ್ಲಾಘಿಸಿದರು.
ಎಚ್.ಎನ್. ನಾಯ್ಕ, ನಿವೃತ್ತ ಶಿಕ್ಷಕರು, ಕರ್ಕಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ಕಿ ಸುತ್ತಮುತ್ತಲಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 100 ಕ್ಕೂ ಅಧಿಕ ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡು ಧ್ಯಾನ ಮತ್ತು ಯೋಗ, ಸ್ಪೋಕನ್ ಇಂಗ್ಲೀಷ್, ಗಣಿತ, ವಿಜ್ಞಾನ ವಿಷಯ, ಮೌಲ್ಯಶಿಕ್ಷಣ ಈ ವಿಷಯದ ಬಗ್ಗೆ ವಿಶೇಷ ತರಬೇತಿಯನ್ನು ಪಡೆದರು. ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಶಿವರಾಮ ನಾಯಕ, ನಿವೃತ್ತ ಪ್ರಾಚಾರ್ಯರು, ಎಸ್.ಎನ್. ಹೆಗಡೆ, ದೈಹಿಕ ಶಿಕ್ಷಣ ಶಿಕ್ಷಕರು, ಪುಷ್ಪಾ ನಾಯ್ಕ, ಗಣಿತ ಶಿಕ್ಷಕಿ, ಮಾರ್ಥೋಮಾ ಶಾಲೆ, ಮೌಲ್ಯ ಶಿಕ್ಷಣ ತರಬೇತಿದಾರರಾದ ನೇತ್ರಾವತಿ ಮೇಸ್ತ, ರೇಣುಕಾ ನಾಯ್ಕ, ಸರ್ಫಿ ಸೆಂಟರ್ ಹೊನ್ನಾವರ, ಪ್ರಭಾಕರ ಸಿದ್ಧೇಶ್ವರ, ನಿವೃತ್ತ ಶಿಕ್ಷಕರು ಇವರು ನಡೆಸಿಕೊಟ್ಟರು.
ಸೇತುಬಂಧ ಟ್ರಸ್ಟ್ ಕಾರ್ಯದರ್ಶಿ ಜಿ.ಎಚ್. ನಾಯ್ಕ ಹಾಗೂ ಕೆ.ಎಸ್. ಭಟ್, ಸತೀಶ ಭಟ್ ಇವರ ನಿರ್ದೇಶನದಲ್ಲಿ ಬೇಸಿಗೆ ರಜಾ ಶಿಬಿರ ಅತ್ಯುತ್ತಮ ರೀತಿಯಲ್ಲಿ ನಡೆದು ಎಲ್ಲರ ಮೆಚ್ಚುಗೆ ಗಳಿಸಿತು.
ದಿÀ: 20-04-2019 ರಂದು ನಡೆದ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಿವಾನಿ ಟ್ರೇಡ್ ಕಾರ್ಪೋರೇಶನ್, ಹೊನ್ನಾವರ ಮಾಲೀಕರಾದ ಕೃಷ್ಣಮೂರ್ತಿ ಭಟ್ ಇವರು ವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ, ಎಲ್.ಎಂ. ಹೆಗಡೆ, ಮುಖ್ಯಾಧ್ಯಾಪಕರು ಆಗಮಿಸಿ ಶುಭ ಕೋರಿದರು.
ಶಿಬಿರದ ಸಂಚಾಲಕರಾದ ಜಿ.ಎಚ್. ನಾಯ್ಕ ಸ್ವಾಗತಿಸಿ, ರಜಾ ಶಿಬಿರದ ದೈನಂದಿನ ಚಟುವಟಿಕೆಗಳನ್ನು ವಿವರಿಸಿದರು.
ಕೆ.ಎಸ್. ಭಟ್ ಅಧ್ಯಕ್ಷರಿಗೆ, ಮುಖ್ಯ ಅತಿಥಿಗಳಿಗೆ ನೆನೆಪಿನ ಕಾಣಿಕೆ ನೀಡಿದರು.
ಸತೀಶ ಭಟ್ ್ನ ವಂದಿಸಿ,
ಈ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲು ಸರ್ವರ ಸಹಕಾರ ಕೋರಿದರು. ನಿರ್ಮಲಾ ಹೆಗಡೆ ಕಾರ್ಯಕ್ರಮದ ಕುರಿತು ಮಾತನಾಡಿದರು.
ಕುಮಾರಿ ದೀಪಾ ಆಚಾರಿ, ಕಂಪ್ಯೂಟರ್ ಶಿಕ್ಷಕಿ ಹಾಗೂ ಸರಿತಾ ಹೊರ್ಟಾ, ಸ್ಪೋಕನ್ ಇಂಗ್ಲೀಷ್ ಶಿಕ್ಷಕಿ ಈ ಶಿಬಿರದ ಉಸ್ತುವಾರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
Leave a Comment