ಹಳಿಯಾಳ:- ಶ್ರೀ ಹನುಮಾನ್ ದೇವರ ಜಯಂತಿ ಅಂಗವಾಗಿ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಮಾರುತಿ ದೇವಸ್ಥಾನಗಳಲ್ಲಿ ಬಾಲಹನುಮನನ್ನು ತೊಟ್ಟಿಲು ತೂಗಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಯಿತು.
ಪಟ್ಟಣದ ಕುಂಬಾರಗಲ್ಲಿ, ಬಸವನಗಲ್ಲಿ, ಹೊಸ ಬಸ್ ಘಟಕ, ಪೇಟೆ ಆಂಜನೇಯ, ಧಾರವಾಡ ರಸ್ತೆಯಲ್ಲಿ, ಹವಗಿ ಗ್ರಾಮದ ಆಂಜನೇಯ, ತೇರಗಾಂವ ಗ್ರಾಮದಲ್ಲಿ ಹೀಗೆ ಹಲವಾರು ಕಡೆಗಳಲ್ಲಿ ಆಂಜನೇಯ ದೇವಸ್ಥಾನಗಳಲ್ಲಿ ಹನುಮಾನ್ ಜಯಂತಿಯನ್ನು ಅತ್ಯಂತ ಶೃದ್ದಾಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗಿದೆ.
ಇನ್ನೂ ಇದೇ ಸಂದರ್ಭದಲ್ಲಿ ತಾಲೂಕಿನ ಭಾಗವತಿ ಗ್ರಾಮದಲ್ಲಿಯ ಮಾರುತಿ ದೇವಸ್ಥಾನದ ಜಾತ್ರಾ ಮಹೋತ್ಸವವು ನೆರವೆರುತ್ತಿದ್ದು. ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಸಚಿವರು ಹವಗಿ ಗ್ರಾಮದ ಆಂಜನೇಯನ ದರ್ಶನವನ್ನು ಪಡೆದರು.
ಅವರೊಂದಿಗೆ ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣಾ ಪಾಟೀಲ್, ರಾಮಚಂದ್ರ ಬುರ್ಲಿ, ಸಂತೋಷ, ಅರ್ಜುನ್ ಬೊವಿ, ಗೋಪಾಲ ಶೆಟ್ಟಿ ಮೊದಲಾದವರು ಇದ್ದರು.
Leave a Comment