ಹಳಿಯಾಳ:- 5 ಬಾರಿ ಸಂಸದರಾಗಿ ಕೆನರಾ ಲೋಕಸಭಾ ಕ್ಷೇತ್ರಕ್ಕೆ ಅನಂತಕುಮಾರ ಹೆಗಡೆಯ ಕೊಡುಗೆ ಏನು ? ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಸಿಗುವ ಸಂಸದರಿಂದ ಅಭಿವೃದ್ದಿ ನೀರಿಕ್ಷಿಸಲು ಸಾಧ್ಯವೇ ಎಂದು ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯ ಹಾಗೂ ಹಳಿಯಾಳ ಎಪಿಎಮ್‍ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ ಪ್ರಶ್ನೀಸಿದ್ದಾರೆ.
ಅಭಿವೃದ್ದಿಗೆ ಶ್ರಮಿಸುತ್ತಿದೆ ಮೈತ್ರಿ ಸರ್ಕಾರ:-
ಕಾಂಗ್ರೇಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಪರವಾಗಿ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರವಲ್ಲದೇ ಖಾನಾಪುರ ಭಾಗದಲ್ಲೂ ಚುನಾವಣಾ ಪ್ರಚಾರ ಕೈಗೊಂಡ ಯುವ ಕಾಂಗ್ರೇಸ್ ಮುಖಂಡ ಶ್ರೀನಿವಾಸ ರಾಜ್ಯದಲ್ಲಿ ಕಾಂಗ್ರೇಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದು ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಸರ್ಕಾರ ಶ್ರಮಿಸುತ್ತಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದ್ದಾರೆ. ನೂತನ ಯೋಜನೆಗಳನ್ನು ಘೊಷಿಸಿದ್ದಾರೆ. ಕೇವಲ ಅಭಿವೃದ್ದಿಯೊಂದೆ ಮಂತ್ರ ಎಂದು ಕಾರ್ಯನಿರ್ವಹಿಸುತ್ತಿರುವ ಮೈತ್ರಿ ಸರ್ಕಾರದ ಪಕ್ಷಗಳ ಲೋಕಸಭಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೇ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿಯನ್ನು ನಿರೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ದೇಶಪಾಂಡೆ ಹಾಗೂ ಘೋಟ್ನೇಕರ ನೇತೃತ್ವ:-
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೇಸ್ ಮತಬ್ಯಾಂಕ್ ಅಧಿಕವಿದ್ದು ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ನೀಡಬೇಕಿತ್ತು. ಆದರೂ ಹೈಕಮಾಂಡ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರಗೆ ಟಿಕೆಟ್ ನೀಡಿರುವುದು ಪ್ರಾರಂಭದಲ್ಲಿ ಎಲ್ಲರಿಗೂ ಮುನಿಸಿತ್ತು ಆದರೇ ಹೈಕಮಾಂಡ ನಿರ್ಧಾರಕ್ಕೆ ಕಾರ್ಯಕರ್ತರು ಹಾಗೂ ಮುಖಂಡರು ತಲೆ ಬಾಗಬೇಕಿದ್ದು ಅವರ ನಿರ್ಧಾರದಂತೆ ಹೈಕಮಾಂಡ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಮುತ್ಸದ್ದಿ ರಾಜಕಾರಣಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರುಗಳ ನೇತೃತ್ವದ ಜೊತೆಗೆ ಅವರ ಮಾರ್ಗದರ್ಶನದಲ್ಲಿ ಕಡಿಮೆ ಅವಧಿಯಲ್ಲಿ ಎಲ್ಲೆಡೆ ಪ್ರಚಾರ ಕಾರ್ಯ ಕೈಗೊಳ್ಳಲಾಗಿದ್ದು ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗಿದೆ ಎಂದಿದ್ದಾರೆ ಶ್ರೀನಿವಾಸ ಘೊಟ್ನೇಕರ.

ಲೋಕಸಭೆಯಲ್ಲಿ ಜಿಲ್ಲೆಯ ಧ್ವನಿಯಾಗಲಿದ್ದಾರೆ :-
ಒಂದು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಆನಂದ ಅಸ್ನೋಟಿಕರ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಅಲ್ಲದೇ ಯುವಕರಾಗಿರುವ ಅವರು ಸಂಸತ್ತು ಪ್ರವೇಶಿಸಿದರೇ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತಬಹುದು ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಸಿಗುವ ಎಲ್ಲ ಆಶಾಭಾವನೆಗಳಿದ್ದು ಆನಂದ ಅಸ್ನೋಟಿಕರಗೆ ಮತ ನೀಡುವಂತೆ ಅವರು ಮತದಾರರಲ್ಲಿ ವಿನಂತಿಸಿದ್ದಾರೆ.
ಮೈತ್ರಿ ಅಭ್ಯರ್ಥಿ ಆನಂದಗೆ ಮತ ನೀಡಿ:-
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಜಿಲ್ಲೆಯಲ್ಲಿ ಅಭಿವೃದ್ದಿ ಮಾಡಿಲ್ಲ ಸ್ವತಃ ಅವರ ಪಕ್ಷದ ಕಾರ್ಯಕರ್ತರು, ಮುಖಂಡರ ಕೈಗೆ ಸಿಗದ ಹೆಗಡೆ 5 ವರ್ಷಕ್ಕೊಮ್ಮೆ ಚುನಾವಣೆಯ ಒಂದು ತಿಂಗಳು ಮುಂಚೆ ಹಾಗೂ ಚುನಾವಣೆ ಮುಗಿಯುವವರೆಗೆ ಕಾಣಸಿಗುತ್ತಾರೆ ಹೀಗಾಗಿ ಅವರಿಂದ ಅಭಿವೃದ್ದಿ ನೀರಿಕ್ಷಿಸಲು ಸಾಧ್ಯವೆ ಇಲ್ಲವಾಗಿದ್ದು 5 ಬಾರಿ ಅವರನ್ನು ಕಣ್ಣುಮುಚ್ಚಿ ಹಿಂದುತ್ವದ ಆಧಾರದ ಮೇಲೆ ಆಯ್ಕೆ ಮಾಡಿರುವ ಮತದಾರರು ಈ ಬಾರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗಾಗಿ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರಗೆ ಮತ ನೀಡುವಂತೆ ಘೋಟ್ನೇಕರ ಕೊರಿದ್ದಾರೆ.
ಅಸ್ನೋಟಿಕರ ಗೆಲುವು ನಿಶ್ಚಿತ :-
ಜಿಲ್ಲೆಯ ಯುವ ಮತದಾರರು ಆನಂದ ಅಸ್ನೋಟಿಕರ ಪರವಾಗಿದ್ದಾರೆ ಅಲ್ಲದೇ ಈ ಬಾರಿ ಬದಲಾವಣೆ ಮಾಡಬೇಕು ಹೊಸಬರಿಗೆ ಅವಕಾಶ ನೀಡಿ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಯ ಜೊತೆಗೆ ನೆನೆಗುದಿಗೆ ಬಿದ್ದಿರುವ ಹಲವಾರು ಯೋಜನೆಗಳಿಗೆ ಚಾಲನೆ ನೀಡಲು ಹೊಸಬರೇ ಬೆಸ್ಟ್ ಎನ್ನುವ ನಿರ್ಧಾರಕ್ಕೆ ಮತದಾರ ಪ್ರಭು ಬಂದಿದ್ದು ಈ ಬಾರಿ ಆನಂದ ಅಸ್ನೋಟಿಕರ ಗೆಲುವು ನಿಶ್ಚಿತ ಎಂದು ಶ್ರೀನಿವಾಸ ಘೊಟ್ನೇಕರ ಭವಿಷ್ಯ ನುಡಿದ್ದಾರೆ.
Leave a Comment