ಹಳಿಯಾಳ:- ಹಳಿಯಾಳ- ಜೋಯಿಡಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸುನಿಲ್ ಹೆಗಡೆ ಹಾಗೂ ಅವರ ಕುಟುಂಬದವರು ಹಳಿಯಾಳದಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಪಟ್ಟಣದ ಸರ್ಕಾರಿ ಶಾಸಕರ ಮಾದರಿ ಶಾಲೆ ನಂಬರ್ ಒಂದರ ಬೂತ್ ನಂಬರ್ 94 ರಲ್ಲಿ ಮಾಜಿ ಶಾಸಕ ಸುನಿಲ್ ಹೆಗಡೆ, ಮಾಜಿ ವಿಧಾನ ಪರಿಷತ್ ಸದಸ್ಯ ವಿ. ಡಿ. ಹೆಗಡೆ ಹಾಗೂ ಮಾಜಿ ಶಾಸಕರ ಪತ್ನಿ ಸುವರ್ಣ, ಮಾಜಿ ವಿಧಾನ ಪರಿಷತ್ ಸದಸ್ಯರ ಪತ್ನಿ ಸುನೀತಾ ಹೆಗಡೆ, ಕುಟುಂಬದವರಾದ ವಿಷ್ಣು, ನೀರಿಕ್ಷಾ ಹೆಗಡೆ ತಮ್ಮ ಮತವನ್ನು ಚಲಾಯಿಸಿದರು.



Leave a Comment