ಹೊನ್ನಾವರ: 30 ವರ್ಷಕ್ಕೂ ಅಧಿಕ ಸಮಯದಿಂದ ಪೋಲಿಸ್ ಇಲಾಖೆಯಲ್ಲಿ ನಿಷ್ಟಾವಂತರಾಗಿ ಸೇವೆ ಸಲ್ಲಿಸಿ ಜನಮನ್ನಣಿ ಪಡೆದಿದ್ದ ಎ.ಎಸ್.ಐ ಚಂದ್ರಶೇಖರ ಎಚ್. ನಾಯ್ಕ ಕವಲಕ್ಕಿ ಇವರು ಏಪ್ರೀಲ್ 30ರಂದು ನಿವೃತ್ತರಾಗಿದ್ದರು. ಇವರನ್ನು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬಿಳ್ಕೂಟ್ಟು ಸೇವೆಯನ್ನು ಸ್ಮರಿಸಿದರು. ಯಲ್ಲಾಪುರ, ಸಿದ್ದಾಪುರ, ಗೋಕರ್ಣ, ಸೇವೆ ಸಲ್ಲಿಸಿ ಮಂಕಿ ಠಾಣಿಗೆ ಸೇರಿದ ಬಳಿಕ ಹವಲ್ದಾರ ಆಗಿ ನಂತರ ಹೊನ್ನಾವರ ಠಾಣಿಗೆ ಸೇರಿದ ಬಳಿಕ ಎ.ಎಸ್.ಐ ಪದನ್ನೋತಿ ಹೊಂದಿದ್ದರು. ಈ ಸಂದರ್ಭದಲ್ಲಿ ಸಿ.ಪಿಐ. ಚೆಲವರಾಜು, ಪಿಎಸೈ ತೇಜಸ್ವಿ, ಹೆಚ್ಚುವರಿ ಪಿಎಸೈ ರವಿಗುಡಿ, ಶಿವರಾಜ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment