ಹಳಿಯಾಳ:- ಬೆಂಗಳೂರಿನ ಜಿಗಣಿಯಲ್ಲಿರುವ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿ ಸ್ನೈಡರ್ ಇಲೆಕ್ಟ್ರಿಕ್ನಲ್ಲಿ ಅಪ್ರೆಂಟಿಶೀಫ್ ತರಬೇತಿಗಾಗಿ ಕ್ಯಾಂಪಸ ಸಂದರ್ಶನವನ್ನು ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದಿನಾಂಕ 08-05-2019 ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ದಿನೇಶ ನಾಯ್ಕ ತಿಳಿಸಿದ್ದಾರೆ.
ಐ.ಟಿ.ಐ. ಇಲೆಕ್ಟ್ರೀಕಲ್ (NCVT) ಹಾಗೂ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ((NCVT) ಪಾಸಾದವರು ಹಾಗೂ ಕೊನೆಯ ಸೆಮಿಸ್ಟರ್ನಲ್ಲಿರುವ 22 ವರ್ಷದ ಒಳಗಿನ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಕೋರಿದೆ. (ಎಸ್.ಎಸ್.ಎಲ್.ಸಿ.ಯಲ್ಲಿ ಕಡ್ಡಾಯ ಶೇ.45% ಅಂಕಪಡೆದಿರಬೇಕು ಎಂದು ಹೇಳಿರುವ ಅವರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 08284-221300 ಸಂಪರ್ಕಿಸುವಂತೆ ಕೊರಿದ್ದಾರೆ.
Leave a Comment