ಹಳಿಯಾಳ : ಕರಾಟೆಯು ಆತ್ಮ ರಕ್ಷಣೆಯ ಕಲೆಯಾಗಿದ್ದು ಇದೀಗ ಅದನ್ನು ಬಾಲಕಿಯರು ಮತ್ತು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯಲು ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಯುವ ಜನಾಂಗ ಇದನ್ನು ಕಲಿತು ಇದರ ಮಹತ್ವವನ್ನು ಮುಂದಿನ ಜನಾಂಗಕ್ಕೆ ಪ್ರಚಾರ ಮಾಡಬೇಕಾಗಿದೆ ಎಂದು ಮಂಜು ಡಾನ್ಸ್. ,ಸಂಗೀತ ಮತ್ತು ಕರಾಟೆ ಶಾಲೆಯ ಮುಖ್ಯಸ್ಥ ಮಂಜುನಾಥ ಮಾದರ ಹೇಳಿದರು.
ಪಟ್ಟಣದ ಪ್ರತಿಭಾವಂತ ಕರಾಟೆ ಪಟು ರೇಷ್ಮಾ ನಾಗರಾಜ ಕೆಲ್ಲಾಗೆ 5ನೇ ಡ್ಯಾನ್ ಬ್ಲ್ಯಾಕ್ ಬೆಲ್ಟ್ ಮತ್ತು ಪದವಿ ಪ್ರಧಾನ ಮಾಡಿ ಮಾತನಾಡಿದ ಅವರು, ಕರಾಟೆ ಇಂದಿನ ಅಗತ್ಯತೆಗಳಲ್ಲಿ ಒಂದಾಗಿದೆ. ವಿದೇಶಿ ಕಲೆಯಾದರೂ ಸಹ ಇದನ್ನು ಸುಲಭವಾಗಿ ಕಲೆಯಬಹುದಾಗಿದ್ದು ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ವಿಶೇಷ ಶಕ್ತಿಯನ್ನು ಸಂಪಾದಿಸಲು ಅನುಕೂಲವಾಗುತ್ತದೆ. ಯುವತಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರದಂತಹ ಹೀನ ಕೃತ್ಯಗಳನ್ನು ಸಹ ಕರಾಟೆಯಿಂದ ತಡೆಯಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕರಾಟೆ ಪಟುಗಳಿಗೆ ಬೆಲ್ಟ್ ಮತ್ತು ಪದವಿಗಳನ್ನು ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮೇಘರಾಜ ಮೇತ್ರಿ, ನಾಗಲಿಂದ ಚಲವಾದಿ, ಎಂ.ಸಿ.ಲಿಂಗನಗೌಡಾ ಮತ್ತೀತರರು ಇದ್ದರು.
Send me manju no and adress