• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರೈತರಿಗೆ ಬೆಳೆ ನಷ್ಟ ಪರಿಹಾರ ಸಕಾಲದಲ್ಲಿ ಪಾವತಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಕಂದಾಯ ಸಚಿವ, ಆರ್.ವಿ.ದೇಶಪಾಂಡೆ

May 21, 2019 by Yogaraj SK Leave a Comment

download

ಬೆಂಗಳೂರು ಮೇ 21, 2019 – ರಾಜ್ಯದ ತೀವ್ರ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಉದ್ಯೋಗ ಸೃಜನೆ, ಮೇವಿನ ಕೊರತೆಯಾಗದಂತೆ ಎಲ್ಲಾ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದರ ಜೊತೆಗೆ ಕಳೆದ ಸಾಲಿನ ಮುಂಗಾರಿನಲ್ಲಿ ಬೆಳೆ ನಷ್ಟ ಸಂತ್ರಸ್ತ ರೈತರ ಪಾಲಿನ ಪರಿಹಾರ ಹಣವನ್ನು ಕೂಡಲೇ ಪಾವತಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಕಂದಾಯ ಸಚಿವ, ಆರ್.ವಿ.ದೇಶಪಾಂಡೆ ನೀಡಿದ್ದಾರೆ.
ಜೊತೆಗೆ, ಜನ ಹಾಗೂ ಜಾನುವಾರುಗಳಿಗೆ ಯಾವುದೇ ಸಂದರ್ಭದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ನಿಗಾ ವಹಿಸುವುದು. ಹೊಸ ಬೋರ್‍ವೆಲ್‍ಗಳನ್ನು ಕೊರೆಯುವ ಬದಲು ಖಾಸಗಿ ಬೋರ್‍ವೆಲ್‍ಗಳನ್ನು ಪಡೆಯಲು ಆದ್ಯತೆ ನೀಡುವುದು. ಕುಡಿಯುವ ನೀರಿನ ಬಾಕಿ ಬಿಲ್ಲನ್ನು ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಪಾವತಿಸುವುದು. ಕುಡಿಯುವ ನೀರು ಸರಬರಾಜು ಟ್ಯಾಂಕರ್‍ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸುವ ಮೂಲಕ ದುರುಪಯೋಗ ತಡೆಗಟ್ಟುವುದು, ಮೇವು ಬ್ಯಾಂಕ್ ತೆರೆಯಲು ಆದ್ಯತೆ ನೀಡುವುದು, ಸರ್ಕಾರೇತರ ಸಂಸ್ಥೆಗಳು ಗೋಶಾಲೆ ತೆರೆಯಲು ಮುಂದೆ ಬಂದಲ್ಲಿ ಪ್ರೋತ್ಸಾಹಿಸುವುದು, ಹಸಿರು ಮೇವು ಬೆಳೆಸುವ ಸಲುವಾಗಿ ವಿತರಿಸಿದ ಮಿನಿ ಕಿಟ್‍ನ ಸಮರ್ಪಕ ಬಳಕೆ ಬಗ್ಗೆ ಪರಿಶೀಲಿಸುವುದು, ಜನ ಗುಳೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಸೂಕ್ತ ಉದ್ಯೋಗ ಸೃಜನೆ, ಸಕಾಲಿಕ ವೇತನ ಪಾವತಿ ಸೇರಿದಂತೆ ಎಲ್ಲಾ ಪರಿಹಾರ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ರಾಜ್ಯದ ಮಳೆ ಬೆಳೆ, ಬರ ಪರಿಸ್ಥಿತಿ ಕುರಿತು ಅವಲೋಕಿಸಲು ಮತ್ತು ಕೈಗೊಳ್ಳಬೇಕಾದ ಪರಿಹಾರ ಕ್ರಮಗಳನ್ನು ಕುರಿತು ವಿಧಾನಸೌಧದಲ್ಲಿ ತಮ್ಮ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಸಭೆ ನಡೆಸಿದ ಸಚಿವರು ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಕುರಿತಂತೆ ಈ ಕೆಳಕಂಡ ವಿವರಗಳನ್ನು ನೀಡಿದ್ದಾರೆ.
• ಹಸಿರು ಮೇವಿನ ಖರೀದಿ ದರ ಪ್ರತಿ ಟನ್‍ಗೆ ಈಗಿರುವ ರೂ.1,500/-ರಿಂದ ರೂ.3,000/-ಕ್ಕೆ ಹೆಚ್ಚಳ.
• ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಕುರಿ ಮತ್ತು ಮೇಕೆಗಳಿಗೆ ಜಂತುನಾಶಕ ಮತ್ತು ಲವಣ ಮಿಶ್ರಣ ಔಷಧಿ ಖರೀದಿಗಾಗಿ ರೂ.5.00 ಕೋಟಿ ಅನುದಾನ.
• ಅಂತರರಾಜ್ಯ ಮೇವು ಸಾಗಾಣಿಕೆಗೆ ಜುಲೈ 31, 2019ರವರೆಗೆ ನಿರ್ಬಂಧ.
• ವಿಜಯಪುರ ಜಿಲ್ಲೆಗೆ ತುರ್ತು ಬರ ಪರಿಹಾರ ಕ್ರಮಗಳಿಗಾಗಿ ಎಸ್.ಡಿ.ಆರ್.ಎಫ್. ನಿಧಿಯಿಂದ ರೂ.10.00 ಕೋಟಿ ಅನುದಾನ ಬಿಡುಗಡೆ.
• ಬಾಗಲಕೋಟೆ ಜಿಲ್ಲೆಯಲ್ಲಿನ ಬ್ಯಾರೇಜ್ ಗೇಟ್ ನಿರ್ವಹಣೆಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ರೂ.15.00 ಲಕ್ಷ ಅನುದಾನ.

:: 2 ::

• ಬೆಳೆ ಹಾನಿ ಹೊಂದಿರುವ ಜಮೀನಿನ ರೈತರು ಮರಣ ಹೊಂದಿದ್ದಲ್ಲಿ, ಫಲಾನುಭವಿ ರೈತರ ಸಕ್ಷಮ ವಾರಸುದಾರರಿಗೆ ಇನ್‍ಪುಟ್ ಸಬ್ಸಿಡಿ ವಿತರಿಸಲು ಸಂಬಂಧಪಟ್ಟ ತಹಶೀಲ್ದಾರರಿಗೆ ಅಧಿಕಾರ.
• ಜಮೀನು ಜಂಟಿ ಖಾತೆಯಿದ್ದಲ್ಲಿ, ತನಿಖೆ ನಡೆಸಿ ಅರ್ಹ ಫಲಾನುಭವಿ ರೈತರಿಗೆ ಇನ್‍ಪುಟ್ ಸಬ್ಸಿಡಿ ವಿತರಿಸುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಸಂಬಂಧಪಟ್ಟ ತಹಶೀಲ್ದಾರರಿಗೆ ಅಧಿಕಾರ.
• ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲು ತಹಶೀಲ್ದಾರುಗಳಿಗೆ ಸಂಪೂರ್ಣ ಅಧಿಕಾರÀ.
• ಅಲ್ಲದೇ, 2018ರ ಮುಂಗಾರು ಹಂಗಾಮಿನಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಕೊಡಗು ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಅಪಾರ ಹಾನಿಯಾಗಿರುವುದನ್ನು ಮನಗಂಡು ಈ ಬಾರಿ ಮುಂಗಾರು ಆರಂಭಕ್ಕೆ ಮುನ್ನವೇ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 2 ಸುಸಜ್ಜಿತ ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆಗಳನ್ನು ಮೇ 25, 2019ರಿಂದಲೇ ನಿಯೋಜಿಸಲಾಗುವುದು ಎಂದು ಸಚಿವ, ದೇಶಪಾಂಡೆ ತಿಳಿಸಿದ್ದಾರೆ.
• ಜೊತೆಗೆ, ಕೃಷಿ ಇಲಾಖೆಯು ಬಿತ್ತನೆ ಬೀಜ, ಗೊಬ್ಬರಗಳನ್ನು ಸಾಕಷ್ಟು ದಾಸ್ತಾನು ಇಟ್ಟುಕೊಂಡು ಮುಂಬರುವ ಮುಂಗಾರು ಹಂಗಾಮಿನಲ್ಲಿ ಸಕಾಲದಲ್ಲಿ ರೈತರಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

**********

 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: barage gate management, crop loss compensation for farmers, crop loss victims' compensation, drinking for people-livestock Revenue minister, germicide, In case of farmers suffering from crop damage, input, interstate fodder transportation, private borewell, R Reddy, Revenue minister, Rs.5.00 crore for purchase, RTI activist, rv deshpande, saline mixture, sheep and goat, small irrigation department, strict notice to officials, subsidy distribution, the beneficiary farmers' capacity, timely payment, To review drought situation, V. Deshpande, ಅಂತರರಾಜ್ಯ ಮೇವು ಸಾಗಾಣಿಕೆ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ, ಆರ್.ವಿ.ದೇಶಪಾಂಡೆ, ಉದ್ಯೋಗ ಸೃಜನೆ, ಕುರಿ ಮತ್ತು ಮೇಕೆಗಳಿಗೆ, ಖರೀದಿಗಾಗಿ, ಖಾಸಗಿ ಬೋರ್‍ವೆಲ್‍, ಜಂತುನಾಶಕ, ಜನ-ಜಾನುವಾರುಗಳಿಗೆ ಕುಡಿಯುವ ನೀರು, ನೀಡಿದ ಕಂದಾಯ ಸಚಿವ, ಪಾವತಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಕಂದಾಯ ಸಚಿವ, ಫಲಾನುಭವಿ ರೈತರ ಸಕ್ಷಮ, ಬರ ಪರಿಸ್ಥಿತಿ ಕುರಿತು ಅವಲೋಕಿಸಲು, ಬೆಳೆ ನಷ್ಟ ಸಂತ್ರಸ್ತ ರೈತರ ಪಾಲಿನ ಪರಿಹಾರ, ಬೆಳೆ ಹಾನಿ ಹೊಂದಿರುವ ಜಮೀನಿನ ರೈತರು ಮರಣ ಹೊಂದಿದ್ದಲ್ಲಿ, ಬ್ಯಾರೇಜ್ ಗೇಟ್ ನಿರ್ವಹಣೆಗಾಗಿ, ಮೇವಿನ ಕೊರತೆ, ರಾಜ್ಯದ ತೀವ್ರ ಬರಪರಿಸ್ಥಿತಿ ಹಿನ್ನೆಲೆ, ರಾಜ್ಯದ ಮಳೆ ಬೆಳೆ, ರೂ.5.00 ಕೋಟಿ, ರೈತರಿಗೆ ಬೆಳೆ ನಷ್ಟ ಪರಿಹಾರ ಸಕಾಲದಲ್ಲಿ, ಲವಣ ಮಿಶ್ರಣ ಔಷಧಿ, ವಾರಸುದಾರರಿಗೆ ಇನ್‍ಪುಟ್, ಸಕಾಲದಲ್ಲಿ ಪಾವತಿಸಲು, ಸಣ್ಣ ನೀರಾವರಿ ಇಲಾಖೆ, ಸಬ್ಸಿಡಿ ವಿತ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...