
ಕಲಘಟಗಿ:ತಾಲೂಕಿನ ಬೂದನಗುಡ್ಡ ಬಸವಣ್ಣ ದೇವರ ಮೂರ್ತಿಯನ್ನು ದುಷ್ಕರ್ಮಿಗಳು ಬಗ್ನಗೊಳಿಸಿದ ಘಟನೆ ಜರುಗಿದೆ.
ಮಂಗಳವಾರ ರಾತ್ರಿ ಗರ್ಭಗುಡಿಯ ಬೀಗ ಮುರಿದ ಅಪರಿಚಿತರು ಬಸವವಣ್ಣದೇವರ ಮೂರ್ತಿಗೆ ಬೆಂಕಿ ಹಚ್ಚಿ ಭಗ್ನಗೊಳಿಸಿದ್ದಾರೆ.
ದೇವಸ್ಥಾನದ ಒಳಗಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ.ಬೆಳಗಿನ ಜಾವ ದೇವಸ್ಥಾನದ ಪೂಜೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶ್ವಾನದಳದೊಂದಿಗೆ ತೆರಳಿ ತನಿಖೆ ಕೈಗೊಂಡಿದ್ದಾರೆ.


Leave a Comment