• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಂತರಾಷ್ಟ್ರೀಯ “ರೋಡ್ ರೀಲ್ಸ್” ಕಿರುಚಿತ್ರ ನಿರ್ಮಾಣ ಸ್ಪರ್ದೆಗೆ ಹೊನ್ನಾವರದ ಹುಡುಗರ “ಮಿಸ್ಟರಿ ಅನ್ ಸಾಲ್ವಡ್ “

May 30, 2019 by Vishwanath Shetty Leave a Comment

"Mystery is Salvad" for the international "Road Reels" short film production,honavar

ಸಂಪೂರ್ಣ ಹೊನ್ನಾವರದ ಪ್ರತಿಭೆಗಳಿಂದ ಇಲ್ಲಿನ ಪರಿಸರದಲ್ಲಿಯೇ ನಿರ್ಮಾಣವಾದ ಮಿಸ್ಟರಿ ಅನ್ ಸಾಲ್ವಡ್ ಎನ್ನುವ ಕಿರುಚಿತ್ರ ಅಂತರಾಷ್ಟ್ರೀಯ ಕಿರುಚಿತ್ರ ನಿರ್ಮಾಣ ಸ್ಪರ್ದೆಯಾಗಿರುವ ಮೈ ರೋಡ್ ರೀಲ್ಸ್ ಸ್ಪರ್ದೆಗೆ ನಾಮಿನೇಟ್ ಆಗುವ ಮೂಲಕ ಹೊಸದೊಂದು ಭರವಸೆಯನ್ನು ಹುಟ್ಟುಹಾಕಿದೆ.
ಓದು ಬರಹ ಆಟ ಪಾಠ ಎಂದುಕೊಳ್ಳುವ ವಯಸ್ಸಿನಲ್ಲಿಯೇ ಬಣ್ಣದ ಬದುಕಿನ ಬಗ್ಗೆ ಕುತೂಹಲ ಹಾಗೂ ಆಸಕ್ತಿಯನ್ನು ಹೊಂದಿ ಬಿಡುವಿನ ವೇಳೆಯಲ್ಲಿ ಹೊಸತೇನಾದರೂ ಸೃಷ್ಟಿಸಬೇಕೆನ್ನುವ ತುಡಿತದೊಂದಿಗೆ ಕಿರು ಚಿತ್ರ ನಿರ್ಮಾಣದ ಗೀಳನ್ನು ಹಚ್ಚಿಕೊಂಡು ಮುಚ್ಚಿಡಲಾರೆ ಎನ್ನುವ ಪ್ರೇಮ ಗೀತೆಯೊಂದಕ್ಕೆ ದೃಶ್ಯಕಾವ್ಯ ಬರೆದಿದ್ದ ಡಿಪ್ಲೋಮಾ ವಿದ್ಯಾರ್ಥಿ ಪ್ರಮಥ್ ನಾಯ್ಕ ಮಿಸ್ಟರಿ ಅನ್ ಸಾಲ್ವಡ್ ಕಿರುಚಿತ್ರದ ನಿರ್ಮಾಣ ನಿರ್ದೇಶನ ಸಂಭಾಷಣೆಯ ಸಂಪೂರ್ಣ ಜವಾಬ್ಧಾರಿ ಹೊತ್ತುಕೊಂಡಿದ್ದಾನೆ.
ಕಿರುಚಿತ್ರದಲ್ಲಿ ಬರುವ ಪಾತ್ರಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ತಾರಾಗಣದಲ್ಲಿರುವ ಶರತ್ ಭಂಡಾರಿ, ಅಂಕಿತಾ ಭಟ್, ಅರವಿಂದ ಹೆಗಡೆ, ಶ್ವೇತಾ ಗೌಡ, ಮೋಹನ್ ಹೆಗಡೆ ಮಾಡಿದ್ದಾರೆ. ಕಿರುಚಿತ್ರ ನಿರ್ಮಾಣಕ್ಕೆ ಸನತ್ ನಾಯ್ಕ, ವಿನಯ್ ಭಟ್, ಸ್ವಾತಿ ಕಾಮತ್ ಸಹಕಾರ ನೀಡಿದ್ದನ್ನು ಚಿತ್ರ ತಂಡ ಸ್ಮರಿಸುತ್ತಿದೆ.
ಸ್ಪರ್ದೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಕಿರುಚಿತ್ರ ಮಿಸ್ಟರಿ ಅನ್ ಸಾಲ್ವಡ್ ಆಗಿದ್ದು ಭಾರತದಿಂದ ನಾಮಿನೇಟ್ ಆದ ಕಿರುಚಿತ್ರಗಳಲ್ಲಿ ಇಲ್ಲಿಯವರೆಗೆ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಿದೆ. ವಿಜ್ಞಾನಕ್ಕೆ ಸವಾಲಾಗಿರುವ ವ್ಯಕ್ತಿಯೊಬ್ಬನ ಮಾನಸಿಕ ತುಮುಲಗಳನ್ನು ಸಶಕ್ತವಾಗಿ ಬಿಂಬಿಸುವ ಕಥಾ ಹಂದರವನ್ನು ಕೇವಲ ಮೂರುವರೆ ನಿಮಿಷದಲ್ಲಿ ಕಟ್ಟಿಕೊಡುವಲ್ಲಿ ವಯಸ್ಸಿಗೆ ಮೀರಿದ ಪ್ರಭುದ್ಧತೆಯನ್ನು ನಿರ್ದೇಶಕ ಪ್ರಮಥ್ ತೋರಿದ್ದಾರೆ.
ರೋಡ್ ಮೈಕ್ರೋಪೋನ್ಸ್ ಏರ್ಪಡಿಸಿರುವ ಸ್ಪರ್ದೆಯಲ್ಲಿ ಪ್ರಪಂಚದ ನೂರಾರು ಕಿರುಚಿತ್ರಗಳು ಸ್ಪರ್ದಿಸಲಿದ್ದು 28 ವಿಭಾಗಗಳಲ್ಲಿ ಬಹುಮಾನ ಪ್ರಮಾಣಪತ್ರಗಳನ್ನು ನೀಡುವ ಈ ಅಭಿಯಾನದಲ್ಲಿ ಆನ್ಲೈನಲ್ಲಿಯೇ ನಿರ್ಣಾಯಕರು ಸಿನೆಮಾ ವೀಕ್ಷಣೆಮಾಡಿ ಚಿತ್ರದ ಗುಣಮಟ್ಟವನ್ನು ನಿರ್ಧರಿಸಲಿದ್ದಾರೆ.
ಶಂಕರನಾಗ್ ಅನಂತನಾಗ್ ಮೊದಲಾದ ಅಭಿಜಾತ ಪ್ರತಿಭೆಗಳನ್ನು ಬಣ್ಣದ ಜಗತ್ತಿಗೆ ಕೊಡುಗೆಯಾಗಿ ಕೊಟ್ಟಿರುವ ಹೊನ್ನಾವರದ ಮಣ್ಣಿನಲ್ಲಿ ಪ್ರತಿಭೆಗಳಿಗೆ ಬರವಿಲ್ಲ ಎನ್ನುವುದನ್ನು ಹಲವಾರು ಪ್ರತಿಭೆಗಳು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಇದ್ದು ಇದೀಗ ಇಲ್ಲಿನ ಹುಡುಗರ ಕಿರುಚಿತ್ರವೊಂದು ಅಂತರಾಷ್ಟ್ರೀಯ ಸ್ಪರ್ದೆಗೆ ನಾಮನಿರ್ದೇಶಿತಗೊಳ್ಳುವ ಮೂಲಕ ಈ ಪರಂಪರೆ ಮುಂದುವರೆಯುವ ಸೂಚನೆಯನ್ನು ರವಾನಿಸಿದೆ.
[ಸಿನೆಮಾ ಜಗತ್ತಿನ ಪ್ರತಿಭೆಗಳನ್ನು ಶೋಧಿಸುವ ಮೈ ರೋಡ್ ರೀಲ್ ಸ್ಪರ್ದೆಗೆ ಹಿಂದಿನ ವರ್ಷ ಕರ್ನಾಟಕದಿಂದ ಯಾವ ಕಿರುಚಿತ್ರವೂ ಸ್ಪರ್ದಿಸಿರಲಿಲ್ಲ ಹಾಗಾಗಿ ನಾವು ಒಂದು ಪ್ರಯತ್ನ ಮಾಡಿನೋಡೋಣ ಅಂತ ಪ್ರಯತ್ನಿಸಿದ್ದೇವೆ ಅಷ್ಟೇ ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ನೀವು ಲಿಂಕ್ ಓಟ್ ಮಾಡಿ ಪೋತ್ಸಾಹಿಸಿ ಎಂದು ಕೇಳಿಕೊಂಡರು. – ಪ್ರಮಥ್,ಕಿರುಚಿತ್ರದ ನಿರ್ದೇಶಕ]

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: "Hannah's boys" mystery un salvated, a mystery, an unlawful short film produced, Diploma Student Pramath Naika, entertaining, enthusiastic, international road reels ", mystery to the international" Road Reels " Un Salvard, short film production, the Hannahvara boys, ಅಂತರಾಷ್ಟ್ರೀಯ "ರೋಡ್ ರೀಲ್ಸ್" ಕಿರುಚಿತ್ರ ನಿರ್ಮಾಣ ಸ್ಪರ್ದೆಗೆ ಹೊನ್ನಾವರದ ಹುಡುಗರ "ಮಿಸ್ಟರಿ ಅನ್ ಸಾಲ್ವಡ್ ", ಅಂತರಾಷ್ಟ್ರೀಯ ರೋಡ್ ರೀಲ್ಸ್", ಅನ್ ಸಾಲ್ವಡ್ ಕಿರುಚಿತ್ರದ ನಿರ್ಮಾಣ, ಆಸಕ್ತಿಯನ್ನು ಹೊಂದಿ ಬಿಡುವಿನ ವೇಳೆ, ಕಿರುಚಿತ್ರ ನಿರ್ಮಾಣ ಸ್ಪರ್ದೆ, ಕುತೂಹಲ, ದೃಶ್ಯಕಾವ್ಯ ಬರೆದಿದ್ದ ಡಿಪ್ಲೋಮಾ ವಿದ್ಯಾರ್ಥಿ ಪ್ರಮಥ್ ನಾಯ್ಕ, ಮಿಸ್ಟರಿ, ಮಿಸ್ಟರಿ ಅನ್ ಸಾಲ್ವಡ್, ಹೊನ್ನಾವರದ ಹುಡುಗರ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,147 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...