• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹೊನ್ನಾವರ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೇಸ್ ಹೀನಾಯ ಸೋಲಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಹಾಗೂ ಪಕ್ಷದ ಹಿರಿಯ ನಾಯಕರೇ ಕಾರಣ ಜಗದೀಪ ತೆಂಗೇರಿ ಗಂಭೀರ ಆರೋಪ

June 4, 2019 by Vishwanath Shetty Leave a Comment

watermarked IMG 20190604 123214

ಹೊನ್ನಾವರ; ಮೇ 29ರಂದು ನಡೆದ ಹೊನ್ನಾವರ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೇಸ್ 1 ಸ್ಥಾನ ಪಡೆಯುವ ಕಳಪೆ ಸಾಧನೆ ಮಾಡಿರುವುದು ಪಕ್ಷಕ್ಕೆ ಮುಜುಗರ ತಂದಿದೆ. ಆದರೆ ಇದಕ್ಕೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಹಾಗೂ ಪಕ್ಷದ ಹಿರಿಯ ನಾಯಕರೇ ಕಾರಣ ಎಂದು ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಜಗದೀಪ ತೆಂಗೇರಿ ಗಂಭೀರ ಆರೋಪ ಮಾಡಿದರು. ಅವರು ಪಕ್ಷದ ಕಛೇರಿಯಲ್ಲಿ ಮಾಧ್ಯಮಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿ 290 ವಾರ್ಡಗಳ ಪೈಕಿ ಕಾಂಗ್ರೇಸ್ 1 ಸ್ಥಾನ ಪಡೆದಿದೆ. ಈ ಕಳಪೆ ಸಾಧನೆಗೆ ಪಕ್ಷದ ಹಿರಿಯ ನಾಯಕರು ಪ್ರಚಾರಕ್ಕೆ ಆಗಮಿಸದೇ ಇರುವುದು ಮುಖ್ಯ ಕಾರಣ ಎಂದು ತಮ್ಮದೇ ಪಕ್ಷದ ನಾಯಕರ ವಿರುದ್ದ ಹರಿಹಾಯ್ದರು. 2014ರ ವಿಧಾನಸಭೆ ಚುನಾವಣೆಯಲ್ಲಿ ಶಾರದಾ ಶೆಟ್ಟಿಯವರನ್ನು ಶಾಸಕರನ್ನಾಗಿಸಲು ಹೊನ್ನಾವರ ಪಟ್ಟಣದ ಕಾಂಗ್ರೇಸ್ ಕಾರ್ಯಕರ್ತರು ಹಗಲಿರುಳು ಶ್ರಮ ವಹಿಸಿದ್ದರು. ಆದರೆ ಆ ಋಣವನ್ನು ತೀರಿಸುವ ಬದಲು ಅವರು ಒಂದು ದಿನವು ಇತ್ತ ತಲೆ ಹಾಕಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಹತ್ತಾರು ವರ್ಷಗಳಿಂದ ಹೊನ್ನಾವರ ಪಟ್ಟಣ ಪಂಚಾಯತ ಕಾಂಗ್ರೆಸ್‍ನ ಹಿಡಿತದಲ್ಲಿದ್ದೂ, ಅನೇಕ ಜನಪರ ಉತ್ತಮ ಕೆಲಸಗಳನ್ನು ಮಾಡಿದೆ. ಆದರೆ ಈ ಚುನಾವಣೆಯ ಸಂದರ್ಭದಲ್ಲಿಯೇ ಲೋಕಸಭಾ ಚುನಾವಣೆಯ ಪಲಿತಾಂಶ ನಮ್ಮೆಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿತು ಎಂದು ತೆಂಗೇರಿ ಹೇಳಿದರು. ದೇಶದಾದ್ಯಂತ ಬೀಸಿದ ಮೋದಿ ಸುನಾಮಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೆÀಲ್ಲಾ ಕೊಚ್ಚಿ ಹೋಗಿ ಬಿ.ಜೆ.ಪಿ. ಅತೀ ದೊಡ್ಡ ಪಟ್ಟಣ ಪಂಚಾಯತ ಸದಸ್ಯರನ್ನು ಹೊಂದಿದ ಪಕ್ಷವಾಗಿ ಹೊರ ಬಂದಿದೆ. ಮುಂದಿನ ದಿನದಲ್ಲಿ ಹೊನ್ನಾವರದ ಸಮಗ್ರ ಅಭಿವೃಧ್ಧಿಗಾಗಿ , ನಮ್ಮ ಪಕ್ಷ ರಚನಾತ್ಮಕವಾದ ಬೆಂಬಲವನ್ನು ನೂತನ ಅಧ್ಯಕ್ಷರಿಗೆ ನೀಡಲಿದೆ ಎಂದು ತೆಂಗೇರಿ ಸಾರಿದರು.
ನಮ್ಮ ಪಕ್ಷದ ಟಿಕೇಟ್ ಹಂಚಿಕೆಯಲ್ಲಿ ಯಾವುದೇ ಗೊಂದಲವಿರಲಿಲ್ಲಾ. ಪಕ್ಷದ ಎಲ್ಲಾ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ, ಎಲ್ಲಾ ಸಮಾಜವನ್ನು ಗಣನೆಗೆ ತೆಗೆದುಕೊಂಡು ಟಿಕೇಟ್ ವಿತರಿಸಲಾಗಿದೆ. ನಾಮಧಾರಿ ಸಮಾಜದ ನಾಲ್ಕು ಅಭ್ಯಥಿರ್üಗೆ, ಕೊಂಕಣ ಖಾರ್ವಿ ಸಮಾಜದ ನಾಲ್ಕು ಅಭ್ಯಥಿರ್üಗೆ, ಮುಸ್ಲಿಂ ಸಮಾಜದ ಮೂವರಿಗೆ, ಕ್ರಿಶ್ಚನ್ ಸಮಾಜದ ಇಬ್ಬರಿಗೆ, ಪರಿಶಷ್ಠ ಜಾತಿ, ಹಾಲಕ್ಕಿ ಒಕ್ಕಲು, ರಾÀಮಕ್ಷತ್ರಿಯ, ದ್ಯೆವಜ್ಞ ಬ್ರಾಹ್ಮಣ, ದೇವಾಡಿಗ ಮತ್ತು ಚಾರೋಡಿ ಸಮಾಜದ ತಲಾ ಒಬ್ಬರಿಗೆ ಟಿಕೇಟ್ ನೀಡಿ ಸಾಮಾಜಿಕ ಸಮತೋಲನ ಕಾಪಾಡಿಕೊಳ್ಳಲಾಗಿತ್ತು ಎಂದು ತೆಂಗೇರಿ ತಿಳಿಸಿದರು. ಆದರೂ ಪಕ್ಷದ ಹೆಚ್ಚಿನ ಸೀಟನ್ನು ಗೆಲ್ಲಿಸುವಲ್ಲಿ ವಿಫಲರಾದೆವು ಎಂದು ವಿಷಾದ ವ್ಯಕ್ತ ಪಡಿಸಿದರು.

watermarked IMG 20190604 123250
ಚುನಾವಣೆಯ ಆರಂಭದಿಂದ ಕೊನೆಯವರೆಗೂ ಪಕ್ಷದ ಯಾವ ನಾಯಕರೂ ನಮಗೆ ಸಾಥ್ ನೀಡಲಿಲ್ಲಾ. ನಾನು ಕೂಡ ಗಾಂಧೀನಗರ ವಾರ್ಡನಿಂದ ಒರ್ವ ಅಭ್ಯರ್ಥಿಯಾಗಿದ್ದರಿಂದ ಇತರ ಯಾವುದೇ ವಾರ್ಡಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲಾ ಎಂದು ತೆಂಗೇರಿ ತಿಳಿಸಿದರು. ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿಯವರಿಗೆ ಮೊದಲ ಚುನಾವಣೆಯಲ್ಲಿ ಈ ಭಾಗÀದಲ್ಲಿ ಯಾರ ಪರಿಚÀಯವಿಲ್ಲದಿದ್ದರೂ ನಾವೆಲ್ಲಾ ್ಲ ಹಗಲು-ರಾತ್ರಿ ಕೆಲಸ ಮಾಡಿ ಅವರ ಗೆಲುವಿಗೆ ಪರಿಶ್ರಮಿಸಿದ್ದೇವು. ಅವರ ಎರಡು ಚುನಾವಣೆಯಲ್ಲಿಯೂ ಮೂಂಚೂಣೆಯಲ್ಲಿ ಕೆಲಸ ಮಾಡಿದ ನನಗೆ, ನಾನು ಪಟ್ಟಣ ಪಂಚಾಯತ ಚುನಾವಣೆಗೆ ನಿಂತು ಕಷ್ಟ ಎದುರಿಸುವ ಸಂದರ್ಭದಲ್ಲಿ ಒಂದು ದಿನವು ನಮ್ಮ ವಾರ್ಡಿಗೆ ಬಂದು ತಮ್ಮ ನಾಲಿಗೆಯಿಂದ ನಮಗಾಗಿ ಒಂದು ಮತ ಕೇಳದಿರುವುದು ತೀರಾ ನೋವಿನ ಸಂಗತಿ ಎಂದರು. ನಮ್ಮಲ್ಲಿ ಟಿಕೇಟ್ ಪಡೆದವರು ಹೆಚ್ಚಾಗಿ ಬಡ ಮಧ್ಯಮ ವರ್ಗದವರೇ ಹೆಚ್ಚಾಗಿದ್ದರು. ಪಕ್ಷದಿಂದ ಐದು ಪೈಸೆ ಸಹಾಯವಿಲ್ಲದೇ ಎಲ್ಲರೂ ಚುನಾವಣೆ ಮುಗಿಸಿ ಸಂಕಷ್ಟಕ್ಕೊಳಗಾದರೂ ಎಂದರು. ಆದರೂ ಸಮಯ ಸಂದರ್ಭ ಒಂದೇ ರೀತಿ ಇರೋದಿಲಾ,್ಲ ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬ ಗಾದೆ ಮಾತಿನಂತೆ ಎಲ್ಲರಿಗೂ ಒಂದು ಕಾಲ ಬಂದೇ ಬರುತ್ತೇ ಅಂತ ಮಾರ್ಮಿಕವಾಗಿ ಜಗದೀಪ ಎನ್.ತೆಂಗೇರಿ ನೊಂದು ನುಡಿದರು.
123 ಕೋಟಿ ರೂಪಾಯಿ ವೆಚ್ಚದ ಶರಾವತಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಕಳೆದ ವರ್ಷ ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿಯವರ ಒತ್ತಾಸೆಯಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮಟಾದಲ್ಲಿ ಅಡಿಗಲ್ಲು ಹಾಕಿದ್ದರು. ಆದರೆ ಇಂದಿನ ಶಾಸಕ ದಿನಕರ ಶೆಟ್ಟಿ ಈ ಯೋಜನೆಯನ್ನು ಸರಕಾರದ ಮಟ್ಟದಲ್ಲಿ ಸಮರ್ಪಕವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದು ನಾವೆಲ್ಲಾ ಹೊನ್ನಾವರದ ಅಭಿವೃದ್ಧಿಗಾಗಿ ಪಕ್ಷಬೇದ ಮರೆತು ಶಾಸಕರನ್ನು ಬೆಂಬಲಿಸುವುದಾಗಿ ಜಗದೀಪ ತೆಂಗೇರಿ ತಿಳಿಸಿದರು.
ಮಾಜಿ ಪಟ್ಟಣ ಪಂಚಾಯತ ಅಧ್ಯಕ್ಷೆ ತುಳಸಿ ಗೌಡ ಮಾತನಾಡಿ. ಮುಂದೆ ನಾವ್ಯಾರೂ ವಿಧಾನಸಭೆಗೆ ಸ್ವರ್ದಿಸುವುದಿಲ್ಲಾ. ಸ್ವರ್ದಿಸುವವರು ನಮ್ಮ ಬಳಿ ಬಂದಾಗ ಪಟ್ಟಣ ಪಂಚಾಯತ ಚುನಾವಣೆಯ ನೆನಪು ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ರಾಜಶ್ರೀ ನಾಯ್ಕ, ಜೋಸ್ಪಿನ್ ಡಯಾಸ, ಶರಾವತಿ ಮೇಸ್ತ, ಸುರೇಶ ಮೇಸ್ತ, ಇಂಟಕ್À ಅಧ್ಯಕ್ಷ ಆಗ್ನೇಲ್ ಡಯಾಸ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯಾ ಹುಸೇನ್ , ಹನೀಫ್ ಶೇಖ, ನೆಲ್ಸನ್ ರೊಡ್ರಗಿಸ್, ಅಲೆಕ್ಸ್, ವೆಂಕಟೇಶ ಮೇಸ್ತ, ಕೃಷ್ಣ ಹರಿಜನ, ಹೆನ್ರಿ ಲಿಮಾ, ಬ್ರಾಜಿಲ್ ಪಿಂಟೊ, ಮಾರ್ಷಲ್ ಡಿಸೋಜಾ, ಸುಧಾ ನಾಯ್ಕ, ಗಜು ನಾಯ್ಕ, ಶೇಖರ ಚಾರೋಡಿ, ವಿನಿತಾ ಮೇಸ್ತ, ಉದಯ ಮೇಸ್ತ, ಅಕ್ಷತಾ ಮೇಸ್ತ, ಮುಸಾ ಅಣ್ಣೆಗೇರಿ, ಬಾಲಚಂದ್ರ ನಾಯ್ಕ, ಬೆಗ್Àಂ ಹಜೀರಾ ಸೈಯದ್, ಹರೀಶ ನಾಯ್ಕ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಕಾಂಗ್ರೆಸ್‍ನ, ಕಾಂಗ್ರೇಸ್ ಹೀನಾಯ ಸೋಲಿಗೆ, ಕೊಂಕಣ ಖಾರ್ವಿ ಸಮಾಜದ ನಾಲ್ಕು ಅಭ್ಯಥಿರ್üಗೆ, ಕೊಚ್ಚಿ ಹೋಗಿ, ಕ್ರಿಶ್ಚನ್ ಸಮಾಜದ ಇಬ್ಬರಿಗೆ, ಜಗದೀಪ ತೆಂಗೇರಿ ಗಂಭೀರ ಆರೋಪ, ದೇಶದಾದ್ಯಂತ ಬೀಸಿದ, ನಮ್ಮ ಪಕ್ಷದ ಅಭ್ಯರ್ಥಿಗಳೆÀಲ್ಲಾ, ನಮ್ಮೆಲ್ಲಾ ಲೆಕ್ಕಾಚಾರ, ಪಕ್ಷದ ಹಿರಿಯ ನಾಯಕರೇ ಕಾರಣ, ಪರಿಶಷ್ಠ ಜಾತಿ, ಬಿ.ಜೆ.ಪಿ. ಅತೀ ದೊಡ್ಡ ಪಟ್ಟಣ ಪಂಚಾಯತ ಸದಸ್ಯರನ್ನು, ಬುಡಮೇಲು, ಮಾಜಿ ಶಾಸಕಿ, ಮಾಧ್ಯಮಗೊಷ್ಟಿಯನ್ನು ಉದ್ದೇಶಿಸಿ, ಮುಸ್ಲಿಂ ಸಮಾಜದ ಮೂವರಿಗೆ, ಮೋದಿ ಸುನಾಮಿ, ರಾÀ, ಲೋಕಸಭಾ ಚುನಾವಣೆಯ ಪಲಿತಾಂಶ, ಶಾರದಾ ಶೆಟ್ಟಿ, ಹತ್ತಾರು ವರ್ಷಗಳಿಂದ, ಹಾಲಕ್ಕಿ ಒಕ್ಕಲು, ಹೊಂದಿದ ಪಕ್ಷವಾಗಿ ಹೊರ, ಹೊನ್ನಾವರ ಪಟ್ಟಣ ಪಂಚಾಯತ, ಹೊನ್ನಾವರ ಪಟ್ಟಣ ಪಂಚಾಯತ ಚುನಾವಣೆ-2019

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...