
ಹೊನ್ನಾವರ , ಜಯಕರ್ನಾಟಕ ಸಂಘಟನೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಅಳ್ಳಂಕಿ ಕಾಲೆಜು ಮೈದಾನದಲ್ಲಿ ನೆರವೆರಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸಮ್ಮಾನಿಸಲಾಯಿತು. ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿಸಲಾಯಿತು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾದೇವ ನಾಯ್ಕ ಮತ್ತು ಜಟ್ಟಿ ಹಳ್ಳೇರ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣಪಿ ಭಟ್ಟ ಮತ್ತು ಎಸ್.ಎನ್.ಹೆಗಡೆ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಹೆರಂಗಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಜೇಶ್ವರಿ ನಾಯ್ಕ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾಧ್ಯಕ್ಷತೆಯನ್ನು ಅಳ್ಳಂಕಿ ಘಟಕದ ಅಧ್ಯಕ್ಷರಾದ ಪ್ರಮೋದ ನಾಯ್ಕ ವಹಿಸಿದ್ದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಕಾಂತ ಕೊಚರೇಕರ, ಈಶ್ವರ ಅಂಕೋಲೇಕರ, ಜಿ.ಟಿ. ಹಳ್ಳೇರ, ಗಣಪತಿ ಹಳ್ಳೇರ, ಮುಸ್ಲೀಂ ಧರ್ಮ ಗುರುಗಳು ಮುಂತಾದವರು ಉಪಸ್ಥಿತರಿದ್ದರು. ಗಣೇಶ ಹಳ್ಳೇರ ಸ್ವಾಗತಿಸಿದರು. ಮಾರುತಿ ಹಳ್ಳೇರ ವಂದಿಸಿದರು. ಕಾರ್ಯಕ್ರಮವನ್ನು ಮಾದೇವ ನಾಯ್ಕ ನಿರೂಪಿಸಿದರು.
Leave a Comment