• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪುರಸಭೆ ಕಾಂಗ್ರೇಸ್ ಸದಸ್ಯನ ವಿರುದ್ದ – ವಕಿಲರೊರ್ವರಿಂದ ಹಳಿಯಾಳ ಠಾಣೆಯಲ್ಲಿ ಬೆದರಿಕೆ ದೂರು ದಾಖಲು

June 16, 2019 by Yogaraj SK Leave a Comment

ಹಳಿಯಾಳ:- ತನಗೆ ರಾಜಕೀಯ ಬೆಂಬಲವಿದೆ, ತಾನು ಹಳಿಯಾಳ ಪುರಸಭಾ ಸದಸ್ಯನಿದ್ದೇನೆ ಎಂದು ಬೆದರಿಕೆ ಹಾಕುತ್ತಾ ಅವ್ಯಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೇದರಿಕೆ ಹಾಕಿದ್ದಾನೆಂದು ಹಳಿಯಾಳ ಪುರಸಭೆ ಕಾಂಗ್ರೇಸ್ ಸದಸ್ಯ ಸುರೇಶ ಯಲ್ಲಪ್ಪಾ ವಗ್ರಾಯಿ ವಿರುದ್ದ ಹಳಿಯಾಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಳಿಯಾಳ ತಾಲೂಕಿನ ಅಮ್ಮನಕೊಪ್ಪ ನಿವಾಸಿ ಹಾಗೂ ನ್ಯಾಯವಾದಿಯಾಗಿರುವ ಮೇಘರಾಜ ರಾಮಪ್ಪಾ ಮೇತ್ರಿ ಎನ್ನುವವರು ಪುರಸಭಾ ಸದಸ್ಯನ ವಿರುದ್ದ ಗಂಭೀರ ಆರೋಪ ಮಾಡಿ ಹಳಿಯಾಳ ಠಾಣೆಗೆ ದೂರು ಸಲ್ಲಿಸಿದ್ದಾರೆ.
ವಕೀಲ ಮೇಘರಾಜ ಸಲ್ಲಿಸಿರುವ ದೂರಿನಲ್ಲಿ ದಿ.11 ರಂದು ಮಧ್ಯಾಹ್ನ 2.30 ಗಂಟೆಯಿಂದ 3.30 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಪಕ್ಷಗಾರ ವಿನೋದ ತೆಗನಳ್ಳಿ ಈತನ ಮದುವೆ ಪ್ರಕರಣ ಸಲುವಾಗಿ ಹಳಿಯಾಳ ಠಾಣೆಯಲ್ಲಿದ್ದಾಗ, ಆಪಾದಿತ ಸುರೇಶ ವಗ್ರಾಯಿ ತನ್ನ 10 ಜನ ಸಂಗಡಿಗರೊಂದಿಗೆ ಪೋಲಿಸ್ ಠಾಣೆಗೆ ಬಂದು ತಾನು ಎಮ್.ಎಲ್.ಸಿ ಆಪ್ತನಿದ್ದು ಪುರಸಭೆ ಸದಸ್ಯನಿದ್ದೇನೆ. ತನಗೆ ಸಾಕಷ್ಟು ರಾಜಕೀಯ ಬೆಂಬಲವಿದೆ. ನಿನ್ನಂತಹ ಹಲವಾರು ವಕೀಲರನ್ನು ನೋಡಿದ್ದೇನೆ. ನಿನ್ನ ಕೊಟು ತೆಗೆದು ಹೊರಗಡೆ ಬಾ ನಿನ್ನನ್ನು ಒಂದು ಕೈ ನೋಡಿಯೇ ಬಿಡುತ್ತೇನೆ ಎಂದು ಅವ್ಯಾಚ್ಯ ಶಬ್ದಗಳಿಂದ ಬೈಯ್ದು ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ.
ದಿ.11 ರಂದು ಸಂಜೆ 4.30ರ ಸುಮಾರಿಗೆ ವಿಧಾನ ಪರಿಷತ್ ಸದಸ್ಯರ ಕಚೇರಿಗೆ ನುಗ್ಗಿ ಧಮಕಿ ಹಾಗೂ ಜೀವ ಬೇದರಿಕೆ ಹಾಕಿರುವುದಾಗಿ ತನ್ನ ವಿರುದ್ದ ಸುಳ್ಳು ದೂರು ನೀಡಲಾಗಿದೆ ಎಂದು ಮೇಘರಾಜ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಇನ್ನೂ ರಜಪೂತ ಹುಡುಗಿ ಹಾಗೂ ದಲಿತ ಸಮುದಾಯದ ಹುಡುಗಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ಏಕೆ ತಲೆ ಹಾಕುತ್ತಿರುವಿ ಎಂದು ಧಮಕಿ ಹಾಗೂ ಜೀವ ಬೇದರಿಕೆ ಹಾಕಿದ ಕುರಿತು ಹಳಿಯಾಳ ಪುರಸಭೆ ಕಾಂಗ್ರೇಸ್ ಸದಸ್ಯ ಸುರೇಶ ವಗ್ರಾಯಿ ದಿ.11 ರಂದು ವಕೀಲ ಮೇಘರಾಜ ಮೇತ್ರಿ ಹಾಗೂ 10 ಜನರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಒಟ್ಟಾರೆ ಹಳಿಯಾಳ ಠಾಣೆಯಲ್ಲಿ ಪ್ರೇಮ ವಿವಾಹ ಪ್ರಕರಣದ ಇತ್ಯರ್ಥಕ್ಕೆ ಆಗಮಿಸಿದವರ ನಡುವೆ ನಡೆದ ಘಟನೆ ರಾಜಕೀಯ ತಿರುವು ಪಡೆದಿರುವುದು ಕಂಡು ಬರುತ್ತಿದ್ದು ದೂರು ಪ್ರತಿದೂರುಗಳು ದಾಖಲಾಗಿವೆ.
ಪಟ್ಟಣದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ಸೃಷ್ಠಿಯಾಗಿರುವ ಕಾರಣ 2 ಡಿವೈಎಸ್ಪಿ ಸೇರಿದಂತೆ ಜಿಲ್ಲೆಯ ಹಾಗೂ ಪಕ್ಕದ ಜಿಲ್ಲೆಯಿಂದ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಪಟ್ಟಣದಲ್ಲಿ ಭಾರಿ ಬಿಗಿ ಪೋಲಿಸ್ ಬಂದೋಬಸ್ತ ಏರ್ಪಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: CRIME case registered against PURSABHA sadsya suresh vagray, Marriage Case, Member, Municipal Congress, Municipal Congress Member, Suresh, Vakilarovar, Yallappa Wagrai Police Station, ಪುರಸಭೆ ಕಾಂಗ್ರೇಸ್, ಪುರಸಭೆ ಕಾಂಗ್ರೇಸ್ ಸದಸ್ಯನ ವಿರುದ್ದ, ಮದುವೆ ಪ್ರಕರಣ, ಯಲ್ಲಪ್ಪಾ ವಗ್ರಾಯಿ ವಿರುದ್ದ ಹಳಿಯಾಳ ಪೋಲಿಸ್ ಠಾಣೆ, ವಕಿಲರೊರ್ವರಿಂದ ಹಳಿಯಾಳ ಠಾಣೆಯಲ್ಲಿ ಬೆದರಿಕೆ ದೂರು ದಾಖಲು, ಸದಸ್ಯ, ಸುರೇಶ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar