• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಯಾರೂ ಕದಿಯದ ಜ್ಞಾನ ಸಂಪತ್ತನ್ನು ಗಳಿಸಬೇಕು- ಗುರು ಮಾಹಾಂತ ಸ್ವಾಮಿಗಳು

June 26, 2019 by Yogaraj SK Leave a Comment

book release

ಹಳಿಯಾಳ:- ಯಾರೂ ಕದಿಯದ ಜ್ಞಾನ ಸಂಪತ್ತನ್ನು ಗಳಿಸಬೇಕು, ಅಂತಹಜ್ಞಾನ ಸಂಪತ್ತು ಹೆಚ್ಚು ಹೆಚ್ಚು ಓದುವುದರಿಂದ ವೃದ್ಧಿಯಾಗುತ್ತದೆ ಎಂದು ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಳಕಲ್ಲಿನ ಪೀಠಾಧೀಶರಾದ ಗುರು ಮಹಾಂತಸ್ವಾಮಿಗಳು ಹೇಳಿದರು.
ಅವರು ಶ್ರೀ ವಿಜಯ ಮಹಾಂತೇಶ್ವರ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿರುವ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ನವ ದೆಹಲಿ ಹಾಗೂ ಬೆಳಗಾವಿಯ ಸೇವಕ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ “ಗೊಂಬೆಗಳ ಮೂಲಕ ವಿಜ್ಞಾನಕಲಿಕೆ” ಕಾರ್ಯಗಾರ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಳಿಯಾಳದ ಚಿಬ್ಬಲಗೇರಿ ಪ್ರಾಥಮಿಕ ಶಾಲೆಯ ಶಿಕ್ಷಕ ಗೊಂಬೆಯಾಟ ಖ್ಯಾತಿಯ ಸಿದ್ದಪ್ಪ ಬಿರಾದಾರ ಬರೆದ “ಶಿಕ್ಷಣದಲ್ಲಿ ಗೊಂಬೆಗಳು” ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಶಿಕ್ಷಕ ಸಿದ್ದಪ್ಪ ಬಿರಾದಾರ ಬರೆದ “ಶಿಕ್ಷಣದಲ್ಲಿ ಗೊಂಬೆಯಾಟ” ಪುಸ್ತಕ ಶಿಕ್ಷಕರಿಗೆ ತುಂಬಾ ಉಪಯುಕ್ತವಾಗಿದ್ದು ಅವರು ತಮ್ಮ ಪರಿಣಾಮಕಾರಿಯಾದ ಪಾಠ ಬೋಧನೆಗೆ ತಾವೇ ತಯಾರಿಸಿದ ಗೊಂಬೆಗಳು ಎಷ್ಟು ಸಹಕರಿಸಿವೇ ಎಂಬ ಅನುಭವವಗಳನ್ನು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ. ಅವರು ಕಂಡುಕೊಂಡ ವಿನೂತನ ಮಾರ್ಗದ ಕೈಪಿಡಿ ಇದಾಗಿದ್ದು ಎಲ್ಲ ಶಿಕ್ಷಕರಿಗೆ ಮಾದರಿಯಾಗಲಿದೆ ಎಂದ ಮಹಾಂತಸ್ವಾಮಿಗಳು ಬಿರಾದಾರ ಅವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಮಹಾಂತೇಶ್ವರ ವಿದ್ಯಾವರ್ಧಕ ಸಂಘದಚೇರಮನ್ನಎಮ್ ಜಿ ಪಟ್ಟಣಶೆಟ್ಟರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬಯಲಾಟಅಕಾಟೆಮಿಯರಿಜಿಸ್ಟ್ರಾರ್‍ಆದ ಶಶಿಕಲಾ ಹುಡೇದ “ವಿಜ್ಞಾನಕಲಿಕೆಯಲ್ಲಿ ಸಂಪ್ರದಾಯದಲ್ಲಿ ಗೊಂಬೆಗಳು” ಎಂಬ ವಿಷಯದಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಸೇವಕ ಸಂಸ್ಥೆಯ ಮುಖ್ಯಸ್ಥಆನಂದ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್‍ನಜಿಲ್ಲಾಅಧ್ಯಕ್ಷ ಮಹಾಂತೇಶಗಜೇಂದ್ರಗಡ ಪುಸ್ತಕದ ಪರಿಚಯ ಮಾಡಿದರು. ಸಂಸ್ಥೆಯಉಪಾಧ್ಯಕ್ಷ ಎ ಎನ್‍ಕನ್ನೂರ, ಪ್ರಧಾನ ಕಾರ್ಯದರ್ಶಿ ಡಿ ಎನ್‍ದೇವಗಿರಿಕರ,ಎಸ್‍ಆರ್‍ಕಂಟಿ ಶಿಕ್ಷಣ ಮಹಾ ವಿದ್ಯಾಲಯದಅಧ್ಯಕ್ಷ ಬಿ ಎಮ್‍ಕಬ್ಬಿಣದ, ನಿನಾಸಂ ಕಲಾವಿದಗಣೇಶ ಹೆಗ್ಗೋಡರಂಗಾಯಣದರಂಗನಿರ್ದೇಶಕಿ ಸುನಂದಾ ನಿಂಬನಗೌಡರ. ಕಲಾವಿದ ಸಿದ್ದಪ್ಪ ಬಿರಾದಾರ ಉಪಸ್ಥಿತರಿದ್ದರು. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯಡಾ.ಜಿ ಸಿ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾತಿಸಿದರು. ಡಾ.ಆರ್ ಕೆ ಕುಲಕರ್ಣಿಕಾರ್ಯಕ್ರಮ ನಿರ್ವಹಿಸಿದರು.

book release

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: Begawai Employer Organization Federal Asylum, Dolls Science Learning, National Science & Technology Communication Board New Delhi, Nobody Must Steal Knowledge, Vijayamanteshwar Vidyarvaka Sangh, ಅಂತಹಜ್ಞಾನ ಸಂಪತ್ತು ಹೆಚ್ಚು ಹೆಚ್ಚು ಓದುವುದರಿಂದ, ಗುರು ಮಾಹಾಂತ ಸ್ವಾಮಿಗಳು, ಗೊಂಬೆಗಳ ಮೂಲಕ ವಿಜ್ಞಾನಕಲಿಕೆ, ತಂತ್ರಜ್ಞಾನ ಸಂವಹನ ಮಂಡಳಿ ನವ ದೆಹಲಿ, ಬೆಳಗಾವಿಯ ಸೇವಕ ಸಂಸ್ಥೆ ಸಂಯುಕ್ತ ಆಶ್ರಯ, ಯಾರೂ ಕದಿಯದ ಜ್ಞಾನ ಸಂಪತ್ತನ್ನು ಗಳಿಸಬೇಕು, ರಾಷ್ಟ್ರೀಯ ವಿಜ್ಞಾನ, ವಿಜಯಮಹಾಂತೇಶ್ವರ ವಿದ್ಯಾವರ್ಧಕ ಸಂಘ, ವೃದ್ಧಿಯಾಗುತ್ತದೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...