
ಜೋಯಿಡಾ ತಾಲೂಕಿನಲ್ಲಿ ಹರಿಯುವ ಕಾಳಿ ನದಿಯನ್ನು ಉತ್ತರಕರ್ನಾಟಕಕ್ಕೆ ತೆಗೆದುಕೊಂಡು ಹೋಗುವ ಯೋಜನೆ ನಡೆಯುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು , ಜೋಯಿಡಾದಲ್ಲಿ ಹುಟ್ಟಿ ಜೋಯಿಡಾ ತಾಲೂಕಿನಲ್ಲಿ ಹರಿಯುವ ನಮ್ಮ ನದಿಯ ನೀರು ನಮಗೆ ಬಳಕೆ ಮಾಡಲು ಸಿಗುತ್ತಿಲ್ಲ, ನಮ್ಮನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ನೀರು ತೆಗೆದುಕೊಂಡು ಹೋಗುವ ಈ ಯೋಜನೆಗೆ ಧಿಕ್ಕಾರ ಎಂದು ತಾ,ಪಂ,ಸದಸ್ಯ ಶರತ ಗುರ್ಜರ ಗುಡುಗಿದರು,
ಕೆಡಿಪಿ ಸಭೆಯ ಆರಂಭದಲ್ಲಿಯೇ ಈ ಚರ್ಚೆ ಆರಂಭವಾಗಿ ಜುಲೈ 8 ರಂದು ಕಾಳಿ ಬ್ರಿಗೇಡ್‍ರವರ ವತಿಯಿಂದ ಕಾಳಿ ನದಿ ಉತ್ತರಕರ್ನಾಟಕ್ಕೆ ತೆಗೆದುಕೊಂಡು ಹೋಗುವುದನ್ನು ವಿರೋದಿಸಿ ಜೋಯಿಡಾ ಬಂದ ಮಾಡಲಾಗುತ್ತಿದ್ದು ಇದಕ್ಕೆ ತಾಲೂಕಿನ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.
ನಂತರ ಆರೋಗ್ಯ ಇಲಾಕೆಯ ಸರದಿ ಬಂದಾಗ ತಾಲೂಕಾ ವೈಧ್ಯಾಧಿಕಾರಿ ಸುಜಾತಾ ಉಕ್ಕಲಿ ಮಾತನಾಡಿ ತಾಲೂಕಿನಲ್ಲಿ ಆರೋಗ್ಯ ಇಲಾಕೆಯಿಂದ ಮಳೆಗಾಲದ ಎಲ್ಲಾ ಪೂರ್ವ ತಯಾರಿ ಕಾರ್ಯಕ್ರಮ ನಡೆದಿದೆ, ರಾಮನಗರದ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಅಣಶಿಯಲ್ಲಿ ಕಟ್ಟಡ ಸರಿಯಿಲ್ಲದೆ ತೊಂದರೆ ಆಗುತ್ತಿದೆ ಎಂದು ಹೇಳಿದಾಗ , ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವುದಾಗಿ ಅಲ್ಲಿದ ಸಂಭಂದಪಟ್ಟ ಅಧಿಕಾರಿಗಳು ಹೇಳಿದರು. ರಾಮನಗರದಲ್ಲಿ ಬೋರವೆಲ್ ಬದಲು ಹೊಸ ಬಾವಿ ನಿರ್ಮಾಣ ಮಾಡುವಂತೆ ಸೂಚನೆ ನೀಡಲಾಯಿತು, ಅಲ್ಲದೇ ನಾಳೆ ಜೋಯಿಡಾದ ಹೊಸ ಕಟ್ಟಡ ಉದ್ಘಾಟನೆ ಇದೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಕೆ ಇಂಜಿನೆಯರ್ ಸತೀಷ ಮಾತನಾಡುತ್ತಾ ತಾಲೂಕಿನ ಅನಮೋಡ ಕುವೇಶಿ ರಸ್ತೆ, ಉಳವಿ ಡಿಗ್ಗಿ ರಸ್ತೆ, ಪಂಚಲಿಗೇಶ್ವರ ರಸ್ತೆ, ಹಾಗೂ ವಾಗಬಾಂದ, ತೇರಾಳಿ ರಸ್ತೆ ಕಾಮಗಾರಿಗಳು ಸಧ್ಯ ಅರಣ್ಯ ಇಲಾಕೆಯ ತಕರಾರಿನಿಂದ ಸ್ಥಗಿತಗೊಂಡಿದ್ದು, ಅರಣ್ಯ ಇಲಾಕೆಯವರ ಹತ್ತಿರ ಮಾತು ಕತೆ ನಡೆಸಿ ಸಧ್ಯದಲ್ಲೇ ಕಾಮಗಾರಿ ಪ್ರಾರಂಭ ಮಾಡುತ್ತೆವೆ ಎಂದರು.
ಸಿಪಿಐ ರಮೇಶ ಹೂಗಾರ ಸೂಚನೆ –
ಜೋಯಿಡಾ ತಾಲೂಕಿನ ಸರ್ವೆ ಸಾಧಾರನ ಎಲ್ಲಾ ರಸ್ತೆಗಳ ಅಕ್ಕ ಪಕ್ಕದಲ್ಲಿ ಮಳೆಗಾಲದಲ್ಲಿ ಮರಗಳು ಬಿಳುತ್ತವೆ , ಅದನ್ನು ತೆಗೆಯುವ ಜವಾಬ್ದಾರಿ ಯಾರದು ಎಂದು ಪ್ರಶ್ನೆ ಹಾಕಿದಾಗ ಅರಣ್ಯ ಇಲಾಕೆ ಮತ್ತು ಲೋಕೋಪಯೋಗಿ ಅಧಿಕಾರಿಗಳು ಮುಖ ಮುಖ ನೋಡಿಕೊಂಡು, ಅಷ್ಟೇ ಅಲ್ಲದೇ ತಾಲೂಕಿನಲ್ಲಿ ಹೆಸ್ಕಾಂ ಇಲಾಕೆಯವರು ಗಣೇಶಗುಡಿ ಸೇರಿದಂತೆ ತಾಲೂಕಿನ ಕೆಲವೆಡೆ ರಸ್ತೆಗೆ ತಾಗಿಯೇ ಕಂಬಗಳನ್ನು ನಿಲ್ಲಿಸಿದ್ದಾರೆ ರಸ್ತೆ ಪಾಸು ಮಾಡುವಾಗ ಸ್ಪಲ್ಪ ಬದಿಯಲ್ಲಿ ವಾಹನ ತೆಗೆದುಕೊಂಡರೆ ಅಪಘಾತ ಸಂಭವಿಸುತ್ತದೆ ಇದನ್ನು ಸರಿಪಡಿಸಿ ಎಂದು ಹೇಳಿದಾಗ ಈ ಸಭೆಯಲ್ಲಿ ಹೆಸ್ಕಾಂನಿಂದ ಯಾರೊಬ್ಬ ಅಧಿಕಾರಿಯು ಬರದೆ ಇರುವುದನ್ನು ನೋಡಿ ಸಭೆಯಲ್ಲಿದ್ದ ಎಲ್ಲಾ ಸದಸ್ಯರು ಹೆಸ್ಕಾಂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯೆಕ್ತ ಪಡಿಸಿದರು.
ನಂತರ ಅರಣ್ಯ ಇಲಾಕೆ, ಕೃಷಿ ಇಲಾಕೆ, ತೋಟಗಾರಿಕಾ ಇಲಾಕೆ, ಇನ್ನೂಳಿದ ಎಲ್ಲಾ ಇಲಾಕೆಯ ವರದಿ ನೀಡಲಾಯಿತು.
ಈ ಸಭೆಯ ಅದ್ಯಕ್ಷತೆಯನ್ನು ತಾ.ಪಂ,ಸದಸ್ಯೆ ನರ್ಮದಾ ಪಾಟ್ನೆಕರ ವಹಿಸಿದ್ದರು, ವೇದಿಕೆಯಲ್ಲಿ ಜಿ,ಪಂ ಸದಸ್ಯರಾದ ರಮೇಶ ನಾಯ್ಕ, ಸಂಜಯ ಹಣಬರ, ತಾ,ಪಂ ಉಪಾಧ್ಯಕ್ಷ ವಿಜಯ ಪಂಡಿತ ಹಾಗೂ ತಾಲೂಕಾ ಕಾರ್ಯನಿರ್ವಣಾಧಿಕಾರಿ ಪ್ರಕಾಶ ಹಾಲಮ್ಮನವರ ಉಪಸ್ಥಿತರಿದ್ದರು
Leave a Comment