
ಹೊನ್ನಾವರ: ಇಲ್ಲಿಯ ಪ್ರತಿಷ್ಠಿತ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಪಿ. ಟಿ. ನಾಯ್ಕ ಮೂಡ್ಕಣಿ ಮತ್ತು ಉಪಾಧ್ಯಕ್ಷರಾಗಿ ಸತೀಶ ತಾಂಡೇಲ್ ಮಠದಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ಕಚೇರಿಯಲ್ಲಿ ಶುಕ್ರವಾರ ಚುನಾವಣಾಧಿಕಾರಿ ಅಧಿಕಾರಿ ಜಿ.ಕೆ.ಭಟ್ಟ ಚುನಾವಣಾ ಪ್ರಕ್ರಿಯೆ ನಡೆಸಿದರು. ಕಾಸ್ಕಾರ್ಡ್ ಬ್ಯಾಂಕಿನ ಉಪಾಧ್ಯಕ್ಷ ಈಶ್ವರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ಯೋಗೇಶ ರಾಯ್ಕರ್. ಟಿ.ಎಸ್.ಹೆಗಡೆ, ಗಣಪಯ್ಯ ಗೌಡ, ವೆಂಕಟ್ರಮಣ ಭಟ್ಟ, ಎಂಆರ್ ಹೆಗಡೆ, ರಾಮಪ್ಪ ನಾಯ್ಕ, ಶಿವರಾಮ ಸಂಗುಮನೆ, ಮಂಜುನಾಥ ರಾಮಕೃಷ್ಣ ಹೆಗಡೆ, ಈರಮ್ಮ ಮಾದೇವ ನಾಯ್ಕ, ಮಂಗಲಾ ಭಟ್ಟ, ಪ್ರಧಾನ ವ್ಯವಸ್ಥಾಪಕ ಪಿ.ಎನ್.ಭಟ್ಟ್ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೆಡಿಎಸ್ ಮುಖಂಡ ಪಿ.ಟಿ.ನಾಯ್ಕ ಅವರು ಈ ಹಿಂದೆ ಹೆರಂಗಡಿ ಗ್ರಾ.ಪಂ.ಅಧ್ಯಕ್ಷರಾಗಿ, ತಾ.ಪಂ.ಸದಸ್ಯರಾಗಿ, ಮಾವಿನಕುರ್ವಾ ಕ್ಷೇತ್ರದಿಂದ ಜಿ.ಪಂ.ಸದಸ್ಯರಾಗಿ ಹಾಗೂ ಎಪಿಎಂಸಿ ಸದಸ್ಯರಾಗಿಯೂ ಆಯ್ಕೆಯಾಗಿ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ಬಾರಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಅವರನ್ನು ಮುಂದಿನ ಅವಧಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ನೂತನ ಉಪಾಧ್ಯಕ್ಷರಾಗಿರುವ ಸತೀಶ ತಾಂಡೇಲ್ ಅವರು ಸಾಮಾಜಿಕ ಕಾರ್ಯಕರ್ತರಾಗಿ, ಪತ್ರಕರ್ತರಾಗಿ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಸಾಲಿನಲ್ಲಿ ಸುರ್ವಣ ಮಹೋತ್ಸವ ಆಚರಿಸಿಕೊಂಡಿಸುವ ಬ್ಯಾಂಕ್ನ ಇತಿಹಾಸದಲ್ಲಿ ಪ್ರಥಮ ಮೀನುಗಾರ ಸಮಾಜದ ನೀರ್ದೇಶಕ, ಉಪಾಧ್ಯಕ್ಷರಾಗಿರುವುದು ಇವರ ಹೆಗ್ಗಳಿಕೆ.
Leave a Comment