
ಹಳಿಯಾಳ:- ಕೆ.ಎಲ್.ಎಸ್. ಪದವಿಪೂರ್ವ ವಿಜ್ಞಾನ, ವಾಣಿಜ್ಯ ಹಾಗೂ ಬಿ.ಸಿ.ಎ. ಮಹಾವಿದ್ಯಾಲಯದ ಪ್ರಥಮ ವರ್ಷದ ಪಿ.ಯು. ಹಾಗೂ ಬಿ.ಸಿ.ಎ. ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಅಂಗವಾಗಿ “ಪ್ರೇರಣಾ 2019”ರ ಉದ್ಘಾಟನೆಯನ್ನು ಸ್ವಾಪ್ಟವೇರ್ ಇಂಜಿನಿಯರ ಪ್ರಭುದೇವ ಪಟ್ಟಣಶೇಟ್ಟಿ ನೆರವೆರಿಸಿದರು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಭುದೇವ ಅವರು ತಂತ್ರಜ್ಞಾನಯುಗದಲ್ಲಿ ವಿಜ್ಞಾನ ಮತ್ತುತಂತ್ರಜ್ಞಾನ ಪ್ರಮುಖ್ಯತೆ ಹಾಗೂ ವಿಜ್ಞಾನದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ 2019ರ ದ್ವಿತೀಯ ಪಿ.ಯು.ಸಿ. ಹಾಗೂ ಬಿ.ಸಿ.ಎ ಪದವಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.
ಕರ್ನಾಟಕ ಲಾ ಸೊಸಾಯಿಟಿ ಬೆಳಗಾವಿಯ ಸದಸ್ಯರಾದ ಪಿ.ಎಸ್.ಸಾವಕಾರ, ಪಶಾಂತ ಎಸ್.ಕುಲಕರ್ಣಿ, ವಿವೇಕ ಕುಲಕರ್ಣಿ, ಎಸ್.ವಿ. ಗಣಾಚಾರಿ, ಕಾಲೇಜಿನ ಪ್ರಾಚಾರ್ಯ ಡಾ. ಸಮೀರ್ ಗಲಗಲಿ ಇದ್ದರು. ವಿದ್ಯಾರ್ಥಿನಿ ಸಪ್ನಾ ಸಾಳೂಂಕೆ ಹಾಗೂ ಶ್ರೀನಿವಾಸ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.
Nice job