• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪತ್ರಕರ್ತ ದಿನೇಶ್ ಹೆಗಡೆ,ಡಿವೈಎಸ್‍ಪಿ ವೆಲೆಂಟೈನ್ ಡಿಸೋಜಾಗೆ ಸನ್ಮಾನ

July 20, 2019 by Gaju Gokarna Leave a Comment

Dinesh Hegde, DySP felicitates Valentine D'Souza

ಹೊನ್ನಾವರ: ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಮಾಧ್ಯಮ ಪಾತ್ರ ಮಹತ್ವವಾದುದು' ಮಲೆನಾಡಿನ ಪತ್ರಕರ್ತರು ಇಲ್ಲಿನ ಸೌಂದರ್ಯರಾಶಿಯ ಸೊಬಗಿನಂತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ. ಹೇಳಿದರು. ಪಟ್ಟಣ ಪಂಚಾಯತಿ ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ಮತ್ತು ವನ್ಯಜೀವಿಗಳ ರಕ್ಷಣೆಗೆ ಯೋಜನೆಗಳನ್ನು ಸಿದ್ದಪಡಿಸಲು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು ಸಹಕಾರಿಯಾದ ಉದಾಹರಣೆಗಳಿವೆ. ಇಂದು ಪರಿಸರ ಮಾಲಿನ್ಯವಾಗುತ್ತಿದೆ; ಅರಣ್ಯ ಸಂಪತ್ತು ರಕ್ಷಣೆಯಾಗಬೇಕಿದೆ. ಇದಕ್ಕೆ ಪತ್ರಕರ್ತರ ಸಹಕಾರ ಬೇಕು. ಪತ್ರಿಕೋದ್ಯಮ ಬಹಳ ಕಷ್ಟಕರವಾದ ಕೆಲಸ. ಪತ್ರಕರ್ತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತ ಕೆಲಸ ಮಾಡುವ ಸ್ಥಿತಿಯಿರುತ್ತದೆ. ರಚನಾತ್ಮಕ ಕಾರ್ಯಗಳನ್ನು ನಡೆಸಲು ಪತ್ರಿಕಾ ದಿನಾಚರಣೆಯು ವೇದಿಕೆಯಾಗಿದೆ ಎಂದರು. ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿರುವ ಭಟ್ಕಳ ಡಿವೈಎಸ್‍ಪಿ ವೆಲೆಂಟೈನ್ ಡಿಸೋಜಾ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಿವೈಎಸ್‍ಪಿ ವೆಲೆಂಟೈನ್ ಡಿಸೋಜಾ ಮಾತನಾಡಿ,ತಪ್ಪು ನಡೆದಾಗ ಎಚ್ಚರಿಸುವ, ಉತ್ತಮ ಕಾರ್ಯ ಮಾಡಿದಾಗ ಪ್ರೋತ್ಸಾಹಿಸಿದ ಮಾಧ್ಯಮರಂಗವು ನನ್ನ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದೆ’ ಎಂದರು.
ಸನ್ಮಾನ ಸ್ವೀಕರಿಸಿದ ದಿನೇಶ ಹೆಗಡೆ ಮಾತನಾಡಿ, `ಪತ್ರಿಕಾರಂಗವು ನಾಲ್ಕನೇ ಅಂಗವೆಂದು ಕರೆಸಿಕೊಂಡಿದೆ. ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ ವ್ಯವಸ್ಥೆಯಲ್ಲಿರುವವರು ಸೂಕ್ತವಾದ ಸೌಲಭ್ಯಗಳನ್ನು ಪಡೆಯುತ್ತಾರೆ. ಪತ್ರಕರ್ತರಿಗೆ ನಿರ್ದಿಷ್ಟ ವೇತನ, ನಿವೃತ್ತಿ ಪಿಂಚಣಿ ಮುಂತಾದ ಸೌಲಭ್ಯಗಳಿಲ್ಲ. ಆದರೆ ಉಳಿದ ಮೂರು ರಂಗಗಳನ್ನು ಎಚ್ಚರಿಸುವ ಕೆಲಸವನ್ನು ಪತ್ರಿಕಾರಂಗ ಮಾಡುತ್ತಿದೆ’ ಎಂದರು. ಪತ್ರಿಕೋದ್ಯಮದಲ್ಲಿ ಸಾಧನೆಗೈದ ಹಿರಿಯ ಪತ್ರಕರ್ತರ ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರೆ ಯುವಪತ್ರಕರ್ತರಿಗೆ ಹೆಚ್ಚಿನ ಉತ್ಸಾಹ,ಹುಮ್ಮಸ್ಸು ಪಡೆಯುವಂತಾಗುತ್ತದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಘದ ಅಧ್ಯಕ್ಷ ಎಂ.ಜಿ.ಹೆಗಡೆ ಮಾತನಾಡಿದರು. ಕೃಷ್ಣಮೂರ್ತಿ ಹೆಬ್ಬಾರ ಸ್ವಾಗತಿಸಿದರು. ಗೋಪಾಲಕೃಷ್ಣ ಭಟ್ ಅತಿಥಿಗಳನ್ನು ಪರಿಚಯಿಸಿದರು. ಕೃಷ್ಣಮೂರ್ತಿ ಭಟ್ ಮತ್ತು ವಿಶ್ವನಾಥ ಸಾಲ್ಕೋಡ ಸನ್ಮಾನಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷ ಎಚ್.ಎಂ.ಮಾರುತಿ ಧನ್ಯವಾದ ಸಮರ್ಪಿಸಿದರು. ಸತೀಶ ತಾಂಡೇಲ, ಗಜು ಗೋಕರ್ಣ ಮುರಳೀಧರ ಗಾಯತೊಂಡೆ, ಸುಧೀರ ಕಡ್ನೀರ, ಶ್ರೀಧರ ನಾಯ್ಕ ಪುಷ್ಪ ಮತ್ತು ನೆನಪಿನ ಕಾಣಿಕೆ ನೀಡಿದರು. ವೆಂಕಟೇಶ ಮೇಸ್ತ, ನಾಗರಾಜ ನಾಯ್ಕ ಖರ್ವಾ ನಿರ್ವಹಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: Dinesh Hegde, ಡಿವೈಎಸ್‍ಪಿ ವೆಲೆಂಟೈನ್ ಡಿಸೋಜಾಗೆ ಸನ್ಮಾನ, ನಿವೃತ್ತಿ ಪಿಂಚಣಿ, ಪತ್ರಕರ್ತ ದಿನೇಶ್ ಹೆಗಡೆ, ಪತ್ರಕರ್ತರಿಗೆ ನಿರ್ದಿಷ್ಟ ವೇತನ, ಮಲೆನಾಡಿನ ಪತ್ರಕರ್ತರು, ಮಾಧ್ಯಮ ಪಾತ್ರ ಮಹತ್ವ, ಸರ್ಕಾರದ ಕಾರ್ಯಕ್ರಮ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...