• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪುಸ್ತಕಗಳು ಜ್ಞಾನ ಭಂಡಾರದ‌ ಕೀಲಿಕೈ ಇದ್ದಂತೆ – ಸುಜಾತಾ ನಾಯ್ಕ‌

July 22, 2019 by Sandesh Desai Leave a Comment

watermarked 21 jyd 1a.

ಜೋಯಿಡಾ ;

“ಪುಸ್ತಕಗಳು ಜ್ಞಾನ ಭಂಡಾರದ ಕೀಲಿ ಕೈ ಇದ್ದಂತೆ” ಎಂಬ ಅನುಭಾವಿಗಳ ಮಾತು ಅಕ್ಷರ ಸಹ ಸತ್ಯವಾಗಿದ್ದು, ಪುಸ್ತಕಗಳ ಓದಿನಂದ ಸಿಗುವ ಸಂತಸಕ್ಕೆ ಸಮನವಾದ ಸಂತಸ ಬೇರಾವುದೂ ಇಲ್ಲ. ಟಿ.ವಿ.ಮೋಬೈಲ್ ಮೋಬೈಲ್‍ಗಳ ಮೇಲಿರುವ ಮೋಹವನ್ನು ಪುಸ್ತಕದ ಮೇಲಿಟ್ಟರೆ ಮುಂದೊಂದು ದಿನ ಸಮಾಜದ ಎತ್ತರದ ಸ್ಥಾನದಲ್ಲಿದ್ದು ಎಲ್ಲರಿಂದಲೂ ಗೌರವಿಸಲ್ಪಡುತ್ತಿರಿ ಎಂದು ಮುಖ್ಯೋಪದ್ಯಾಯಿನಿ ಸುಜಾತಾ ನಾಯಕ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ತಾಲೂಕಿನ ಜಗಲಬೇಟ್ ಪ್ರೌಢಶಾಲೆಯಲ್ಲಿ ವಾಚನಾಲಯ ವಿಭಾಗದಿಂದ ಹಮ್ಮಿಕೊಂಡಿದ್ದ ಪುಸ್ತಕಗಳ ಪ್ರದರ್ಶನ ಮತ್ತು ಪರಿಚಯ ಕಾರ್ಯಕ್ರಮ”ಜ್ಞಾನ ಸಿರಿ” ಉದ್ಘಾಟಿಸಿ ಮಾತನಾಡುತ್ತಿದ್ದರು.
ಪುಸ್ತಕಗಳು ಎಕಾಂತದಲ್ಲಿ ಸಂಗಾತಿಯಾಗಿಯೂ, ಕಷ್ಟಕಾಲದಲ್ಲಿ ದಾರಿ ದೀವಿಗೆಯಾಗಿಯೂ ಸಹಾಯಕ್ಕೆ ಬರುತ್ತದೆ. ಸಾಹಿತ್ಯ ವಿವಿಧ ಪ್ರಕಾರಗಳನ್ನು ಓದುವ ಮೂಲಕ ಸಾಹಿತ್ಯದ ರಸ ಅನುಭವಿಸುತ್ತಲೇ ಶಭ್ದ ಭಂಡಾರ ಹೆಚ್ಚಿಸಿಕೊಂಡು ಬರವಣಿಗೆಯ ಕಲೆ ವೃದ್ದಿಸಿಕೊಂಡರೆ ಅದು ನಿಮಗೆ ಪರೀಕ್ಷೆಗೂ, ಬದುಕಿಗೂ ತುಂಬಾ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮ ಆಯೋಜಕ ಪ್ರಶಾಂತ ಕಮ್ಮೂರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಶಾಲಾ ವಾಚನಾಲಯದಲ್ಲಿ ವಾಚನಾಯ ಅವಧಿಯಲ್ಲಿ ನೀಡುವ ಪುಸ್ತಕಗಳನ್ನು ಹೊರತುಪಡಿಸಿ ವಿವಿಧ ಭಾಷೆ ಮತ್ತು ಸಾಹಿತ್ಯ ಪ್ರಕಾರಗಳ 2500 ಕ್ಕೂ ಹೆಚ್ಚು ಪುಸ್ತಕಗಳಿವೆ. ಆ ಎಲ್ಲಾ ಪುಸ್ತಕಗಳನ್ನು ಜೀವನ ಚರಿತ್ರೆ, ನಿಘಂಟು, ಕಾದಂಬರಿ, ಜನಪದ, ವೈಚಾರಿಕ, ಸಾಮಾನ್ಯ ಜ್ಞಾನ, ಕಾವ್ಯ, ವ್ಯಕ್ತಿತ್ವ ವಿಕಸನ, ವಿಜ್ಞಾನ ಕಥೆ, ಹೀಗೆ ವಿವಿಧ ಪ್ರಕಾರಗಳಲ್ಲಿ ವಿಂಗಡಿಸಿ ಪ್ರದರ್ಶನಕ್ಕಿಟ್ಟು ಅದನ್ನು ಸಮಾಧಾನದಿಂದ ವೀಕ್ಷಿಸಿ ಇಷ್ಟದ ಪುಸ್ತಕಗಳ ಹೆಸರನ್ನು ಬರೆದುಕೊಂಡು ಮುಂದಿನ ದಿನದಲ್ಲಿ ಆಪುಸ್ತಕಗಳನ್ನು ಪಡೆದು ಓದುವ ಮೂಲಕ ಬಿಡುವಿನ ಸಮಯದ ಸದುಪಯೋಗ ಮಾಡಿಕೊಳ್ಳಿ ಎಂದರು.
ಬೆಳಿಗ್ಗೆ 9.30 ರಿಂದ ಮದ್ಯಾನ್ಹ 1.30 ರವರೆಗೆ 8.9.10.ನೇ ತರಗತಿಯ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ಬಂದು ಶಿಕ್ಷಕರ ಮಾರ್ಗದರ್ಶನದಲ್ಲಿ ಪುಸ್ತಕಗಳನ್ನು ವೀಕ್ಷಿಸಿ ತಮಗಿಷ್ಟವಾದ ಪುಸ್ತಕಗಳ ಹೆಸರು ಬರೆದುಕೊಂಡರು. ಶಾಲೆಯ ಎಲ್ಲಾ ಅಧ್ಯಾಪಕರು ಈ ಸಮಯದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

watermarked 21 jyd 1.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: ಕಾದಂಬರಿ, ಕಾವ್ಯ, ಕೀಲಿಕೈ ಇದ್ದಂತೆ, ಜಗಲಬೇಟ್ ಪ್ರೌಢಶಾಲೆ, ಜನಪದ, ಜೀವನ ಚರಿತ್ರೆ, ಜ್ಞಾನ ಭಂಡಾರದ‌, ಟಿ.ವಿ.ಮೋಬೈಲ್, ನಿಘಂಟು, ಪುಸ್ತಕಗಳು, ಮೋಬೈಲ್‍ಗಳ ಮೇಲಿರುವ ಮೋಹ, ವಾಚನಾಲಯ ವಿಭಾಗ, ವಿಜ್ಞಾನ ಕಥೆ, ವೈಚಾರಿಕ, ವ್ಯಕ್ತಿತ್ವ ವಿಕಸನ, ಸಾಮಾನ್ಯ ಜ್ಞಾನ, ಸುಜಾತಾ ನಾಯ್ಕ‌, ಹೀಗೆ ವಿವಿಧ ಪ್ರಕಾರಗಳಲ್ಲಿ ವಿಂಗಡಿಸಿ ಪ್ರದರ್ಶನಕ್ಕಿಟ್ಟು

Explore More:

About Sandesh Desai

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...