
ಹೊನ್ನಾವರ: ತಾಲೂಕಿನ ಕಾಸರಕೋಡ ಮಲ್ಲುಖುರ್ವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯಾ ಎಲ ಭಟ್ ಇವರನ್ನು ಕ್ಷೇತ್ರಶಿಕ್ಷಣಾಧಿಕಾರಿ ಕಛೇರಿಯಲ್ಲಿ ಬಿಳ್ಕೂಡುವ ಮೂಲಕ ಗೌರವ ಸಲ್ಲಿಸಲಾಯಿತು.
35 ವರ್ಷ ಸುಧಿರ್ಘ ಅವಧಿಯಲ್ಲಿ ಹಳಿಯಾಳ ಮತ್ತು ಹೊನ್ನಾವರದಲ್ಲಿ ಸೇವೆ ಸಲ್ಲಿಸಿ ಜನಮನ್ನಣಿಗೆ ಪಾತ್ರವಾಗುವುದಲ್ಲದೇ ಅನೇಕ ಕ್ರೀಡಾಪಟುಗಳಿಗೆ ತರಬೇತಿ ನಿಡಿದ್ದರು. ಇವರಿಂದ ತರಬೇತಿ ಪಡೆದ ಕ್ರೀಡಾಪಟುಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದರು.
ಬಿಳ್ಕೂಟ್ಟು ಗೌರವಿಸಿದ ಬಳಿಕ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಅಶೋಕ ಭಜಂತ್ರಿ ಮಾತನಾಡಿ ತಾಲೂಕಿನಲ್ಲಿ ಸೇವಾ ನಿವೃತ್ತಿ ಹೊಂದಿದವರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಉತ್ತಮವಾಗಿದ್ದು ಅವರ ಸೇವೆಗೆ ಸಿಗುವ ಗೌರವವಾಗಿದೆ. ತಾಲೂಕಿನಲ್ಲಿ ಅನೇಕ ದೈಹಿಕ ಶಿಕ್ಷಕರ ಪರಿಶ್ರಮದಿಂದ ಕ್ರೀಡಾಪಟುಗಳು ಸಾಧನೆ ಮಾಡುತ್ತಿದ್ದಾರೆ. ಎಲ್ಲರು ಒಗ್ಗೂಡಿ ಇಂತಹ ಗೌರವಯುತ ಕಾರ್ಯಕ್ರಮ ಆಯೋಜಿಸಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಾಧನಾ ಬರ್ಗಿ ಮಾತನಾಡಿ ಎಲ್ಲರೊಂದಿಗೆ ಆತ್ಮಿಯತೆಯಿಂದ ಹೊಂದಿಕೊಂಡು ಉತ್ತಮ ಸಲಹೆ ಸೂಚನೆ ನೀಡುವ ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸುವ ಕಲೆಯನ್ನು ಇವರಿಂದ ನಾವೆಲ್ಲ ಕಲಿತಿದ್ದೇವು, ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು,
ಈ ಸಂದರ್ಭದಲ್ಲಿ ಸಮನ್ವಯಾಧಿಕಾರಿ ಎಸ್.ಎಮ್ ಹೆಗಡೆ, ಶಿಕ್ಷಕ ಸಂಘದ ಅಧ್ಯಕ್ಷ ಎನ್.ಎಸ್.ನಾಯ್ಕ, ರಾಜ್ಯ ಸಮಿತಿ ಸದಸ್ಯರಾದ ಎಂ.ಜಿ.ನಾಯ್ಕ, ಯುವಜನಸೇವಾಕ್ರೀಡಾಧಿಕಾರಿ ಸುದೀಶ ನಾಯ್ಕ, ದೈಹಿಕ ಶಿಕ್ಷಣ ಪರಿವಿಕ್ಷಕರಾದ ಜಿ.ಎಚ್.ನಾಯ್ಕ, ಉಪಸ್ಥಿತರಿದ್ದರು. ಬಾಬು ನಾಯ್ಕ ಸ್ವಾಗತಿಸಿ ಎಂ,ಟಿ.ಗಣಪತಿ ವಂದಿಸಿದರು. ಎನ್.ಎಸ್.ಲೋಫಿಸ್ ಕಾರ್ಯಕ್ರಮ ನಿರ್ವಹಿಸಿದರು.
Leave a Comment