
ಹುಬ್ಬಳ್ಳಿ ವಿದ್ಯುತ್ಚ್ಚಕ್ತಿ ಸರಬರಾಜು ಕಂಪನಿ ನಿಯಮಿತ ಹೊನ್ನಾವರ ಹೆಸ್ಕಾಂ ಉಪವಿಭಾಗದ ವತಿಯಿಂದ ವಿದ್ಯುತ್ ಸುರಕ್ಷತಾ ಜಾಗೃತಿ ಕಾರ್ಯಗಾರ ಮಾರ್ಥೋಮಾ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಚಾರ್ಯರಾದ ಫಾಧರ್ ಜಾರ್ಜ ಉಮನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿ ಭವಿಷ್ಯದ ದೃಷ್ಟಿಯಿಂದ ವಿದ್ಯುತ್ ಉಳಿತಾಯ ತೀರಾ ಅಗತ್ಯವಾಗಿದೆ. ನಾವು ಇಂದು ಅನವಶ್ಯಕ ಖರ್ಚುಗಳನ್ನು ಮಾಡುತ್ತಾ ಜೀವನ ನಡೆಸುತ್ತಿದ್ದು, ಇದರ ಬಗ್ಗೆ ಜಾಗೃತಿವಹಿಸಬೇಕಿದೆ. ವಿದ್ಯಾರ್ಥಿ ಜೀವನದಿಂದಲೇ ಇದನ್ನು ಅನುಸರಿಸಲು ನಮ್ಮ ಸಂಸ್ಥೆಯಲ್ಲಿ ಇಂದು ಕಾರ್ಯಕ್ರಮ ಆಯೋಜಿಸಿದ್ದಾರೆ. ಇಂದಿನ ಕಾರ್ಯಗಾರದ ಸಂಪೂರ್ಣ ಲಾಭ ಪಡೆದು ಉತ್ತಮ ನಾಗರಿಕರಾಗಿ ಜೀವನ ನಡೆಸೋಣ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಿರ್ದೇಶಕರಾದ ಎಚ್.ಎನ್.ಪೈ ಮಾತನಾಡಿ ನಾವು ನಮ್ಮ ಕಣ್ಣಮುಂದೆಯೇ ವಿದ್ಯುತ್ ಪೋಲಾಗುದನ್ನು ಗಮನಿಸುತ್ತೇವೆ. ಆದರೆ ಈ ಬಗ್ಗೆ ಎಚ್ಚರವಹಿಸುದಿಲ್ಲ. ಮುಂದಿನ ತಲೆಮಾರಿಗೆ ಈ ಸಂಪನ್ಮೂಲ ಉಳಿಸಲು ನಾವು ಉಳಿತಾಯ ಮಾಡುವುದು ಅನಿವಾರ್ಯವಾಗಿದೆ. ಅಲ್ಲದೆ ವಿದ್ಯುತ್ ಪೋಲಾಗದಂತೆ ಪ್ರತಿ ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯನಿವಾಹಕ ಅಭಿಯಂತರಾದ ಶಂಕರ ಗೌಡ ಮಾತನಾಡಿ ಇಂದು ನಾವೆಲ್ಲರು ಒಂದು ನಿಮಿಷ ಕರೆಂಟ್ ಇಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ ಎನ್ನುವಂತೆ ಮಾರು ಹೋಗಿದ್ದೇವೆ. ಮನೆಯಲ್ಲಿ ವಿದ್ಯುತ್ ಸಮಸ್ಯೆ ಆದಾಗ ಸಾರ್ವಜನಿಕರು ಅನೇಕ ಬಾರಿ ಹೆಸ್ಕಾ ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಾರೆ. ಆದರೆ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರುವುದಿಲ್ಲ. ಆದರೆ ಸಿಬ್ಬಂದಿಗಳಷ್ಟೆ ಸಾರ್ವಜನಿಕರ ಸಹಕಾರ ಇದ್ದರೆ ಮಾತ್ರ ವಿದ್ಯುತ್ ಇಲಾಖೆ ಸೂಸುತ್ರವಾಗಿ ಕಾರ್ಯನಿರ್ವಹಿಸಬಹುದು. ವಿದ್ಯುತ್ ಅವಘಡ ಸಂಭವಿಸಿದಾಗ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮ ಹಾಗು ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮಾಥೋರ್ಮಾ ಶಾಲಾ ಖಜಾಂಚಿ ಕೆ.ಸಿ ವಗ್ರೀಸ್,ಹೆಸ್ಕಾಂ ತಾಂತ್ರಿಕ ಸಹಾಯಕ ಇಂಜನಿಯರ್ ರಾಧಾ ಭಟ್, ಧನುಶ್ರೀ ಮುತ್ತಿತರರು ಉಪಸ್ಥಿತರಿದ್ದರು.
Leave a Comment