
ಜೋಯಿಡಾ –
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗುಂದ ಶಾಖೆ ಸೋಮವಾರ ಗ್ರಾಹಕರ ಸಭೆ ಕರೆದಿತ್ತು,
ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಅವರು ಗುಂದ ಶಾಖೆಯು ಕಳೆದ ಹಲವಾರು ವರ್ಷಗಳಿಂದ ನಷ್ಟದಲ್ಲಿದೆ, ಈಗ ಬ್ಯಾಂಕ್ ಕಟ್ಟಡದ ಬಾಡಿಗೆಯನ್ನು ಕಟ್ಟಡದ ಮಾಲಿಕರು ಹೆಚ್ಚಿಸಲು ಹೇಳುತ್ತಿದ್ದಾರೆ, ನಮ್ಮ ಕೇಂದ್ರ ಕಚೇರಿ ಇದಕ್ಕೆ ಒಪ್ಪುತ್ತಿಲ್ಲ, ಆದ್ದರಿಂದ ನಮಗೆ ಇಲ್ಲಿನ ಗ್ರಾಹಕರು ಬೇರೆ ಕಟ್ಟಡ ವ್ಯವಸ್ಥೆ ಮಾಡಿಕೊಡಿ ಎಂದರು.
ವ್ಯವಸ್ಥಾಪಕರ ಮಾತಿಗೆ ಗ್ರಾಹಕರು ತೀವೃ ಆಕ್ಷೇಪ ವ್ಯೆಕ್ತಪಡಿಸುತ್ತಾ , ಬ್ಯಾಂಕ್ ನಷ್ಟದಲ್ಲಿದೇ ಎಂದರೆ ತಪ್ಪು, ನಮ್ಮ ಶಾಖೆಯಲ್ಲಿಸಂಗ್ರಹವಾದ 9 ಕೋಟಿ ಉಳಿತಾಯವನ್ನು ತಾವು ಶಾಖೆಯ ವ್ಯಾಪ್ತಿಯಲ್ಲಿ ಬಂಡವಾಳವಾಗಿ ಬಳಸಿಲ್ಲ, ಬೇರೆಡೆ ತೊಡಗಿಸಿದ್ದಕ್ಕೆ ಈ ಶಾಖೆ ಹಾನಿ ತೋರಿಸುತ್ತಿದೆ ಎಂದರೆ ತಪ್ಪು, ರೈತರಿಗೆ ಹೆಚ್ಚಾಗಿರುವ ಈ ಶಾಖೆಯ ವ್ಯಾಪ್ತಿಗೆ ಸಾಕಷ್ಟು ಸಾಲ ಸೌಲಭ್ಯ ನೀಡುತ್ತಿಲ್ಲ, ಶಾಲ ನೀಡಬೇಕಾದರೂ ತುಂಬಾ ಅನವಶ್ಯಕ ಕಾಗದ ಪತ್ರ ತರಲು ಹೇಳುತ್ತಿರಿ,ಬ್ಯಾಂಕಿನ ಲೀಗಲ್ ಅಧಿಕಾರಿ ಬೇಕಾಬಿಟ್ಟಿ ಹಣ ಕೇಳುತ್ತಾರೆ, ಬಡ ರೈತರಿಗೆ ಇದರಿಂದ ತೊಂದರೆಯಾಗುತ್ತದೆ, ಲೀಗಲ್ ಅಧಿಕಾರಿಗೆ ನಿರ್ಧಿಷ್ಟ ಪಡಿಸಿದ ಹಣವನ್ನು ಬ್ಯಾಂಕನವರೇ ಬರಿಸಬೇಕು , ನಂತರ ಸಾಲಗಾರರಿಂದ ಪಡೆಯಬೇಕು, ಇಂಥ ಹಣಕ್ಕೆ ಖಡಿವಾಣ ಹಾಕಬೇಕು , ರೈತರಿಗೆ ಸಾಕಷ್ಟು ಸಾಲ ಬೇಕಾದಲ್ಲಿ ಗ್ರಾಮೀಣ ಬ್ಯಾಂಕು ಉದ್ದೇಶ ಗಮನದಲ್ಲಿಟ್ಟು ಸಾಲ ಸೌಲಭ್ಯ ನೀಡಬೇಕು, ಬ್ಯಾಂಕಿನ ಎಲ್ಲಾ ಶಾಖೆಗಳೂ ಲಾಭದಲ್ಲಿಯೇ ನಡೆಯಬೇಕೆಂದಿನಿಲ್ಲ, ಗ್ರಾಹಕರ ಸೇವೆಯನ್ನು ಗಮನದಲ್ಲಿಟ್ಟು ಬ್ಯಾಂಕ್ ಕೆಲಸ ಮಾಡಬೇಕಾಗುತ್ತದೆ, ಈ ಬ್ಯಾಂಕ್ ಆರಂಭದಿಂದಲೂ ಗ್ರಾಹಕರು ಬ್ಯಾಂಕಿನೊಂದಿಗೆ ನಿಖಟ ಸಂಭಂದ ಇಟ್ಟುಕೊಂಡರೂ ಬ್ಯಾಂಕಿ ಆಡಳಿತ ವರ್ಗದವರು ಗ್ರಾಹಕ ಸಭೆ ಕರೆಯುತ್ತಿಲ್ಲ, ಇಲ್ಲಿನ ಸಮಸ್ಯಗೆ ಸ್ವಂದಿತ್ತಿಲ್ಲ, ಈ ರೀತಿಯ ವರ್ತನೆಯನ್ನು ನಾವು ಖಂಡಿಸುತ್ತೇವೆ, ಬರುವ ಅಗಸ್ಟ 30 ರೊಳಗೆ ಬ್ಯಾಂಕಿನ ಆಡಳಿತ ವರ್ಗ ಇಲ್ಲಿನ ಸಮಸ್ಯೆ ಬಗ ಹರಿಸಿದೇ ಇದ್ದಲ್ಲಿ ಇಲ್ಲಿನ ಗ್ರಾಹಕರು 9 ಕೋಟಿ ಹಣವನ್ನು ವಾಪಾಸ್ಸು ನೀಡಬೇಕೆಂದು ಗ್ರಾಹಕರು ಕೇಳಿಕೊಂಡಿದ್ದಾರೆ,
ಅಲ್ಲದೇ ಬ್ಯಾಂಕಿನ ಹಿರಿಯ ಅಧಿಕಾರಿಗಳು ಬಂದು ಗ್ರಾಹಕರೊಂದಿಗೆ ಸಭೆ ನಡೆಸಿ ಅಚಿತಿಮ ನಿರ್ಣಯ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ನಂದಿಗದ್ದಾ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ವಹಿಸಿದ್ದರು, ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್,ವಿ,ಹೆಗಡೆ ,ಎಸ್,ಎಸ್, ಭಟ್ಟ ವೇದಿಕೆಯಲ್ಲಿದ್ದರು, ನಂದಿಗದ್ದಾ ಗ್ರಾ,ಪಂ, ಸದಸ್ಯ ಆರ್,ವಿ ದಾನಗೇರಿ, ಆರ್,ಎನ್, ಹೆಗಡೆ, ಶಂಕರ ಭಟ್ಟ, ಶ್ರೀಧರ ಭಾಗ್ವತ ಮತ್ತು ನೂರಾರು ಗ್ರಾಹಕರು ಚರ್ಚೆಯಲ್ಲಿ ಭಾಗವಹಿಸಿದ್ದರು.

Leave a Comment