
ಹಳಿಯಾಳ :- ಉತ್ತರ ಕರ್ನಾಟಕದಲ್ಲಿ ಯುದ್ಧೋಪಾದಿಯಲ್ಲಿ ನಡೆಯುತ್ತಿರುವ ನೆರೆ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಬೋಟ್ ಮುಗುಚಿ 5 ಮಂದಿ ಎನ್ ಡಿಆರ್ ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅದೃಷ್ಟವಶಾತ್ ಅವರು ಸುರಕ್ಷಿತವಾಗಿ ದಡ ಸೇರಿದ್ದಾರೆ. ಅಪಾಯದಿಂದ ಪಾರಾಗಿದ್ದಾರೆ.
ಕೊಪ್ಪಳದ ಗಂಗಾವತಿಯ ವಿರೂಪಾಕ್ಷ ಗಡ್ಡೆಯಲ್ಲಿ ಸಂಭವಿಸಿದ ಆಕಸ್ಮಿಕ ಬೋಟ್ ಮಗುಚಿ ಪ್ರವಾಹಕ್ಕೆ ಸಿಲುಕಿದ ರಕ್ಷಣಾ ಸಿಬ್ಬಂದಿಯವರನ್ನು ಮತ್ತೊಂದು ತಂಡ ರಕ್ಷಿಸಿದೆ.
ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಎನ್ ಡಿಆರ್ ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಶ್ಲಾಘಿಸಿದ್ದು, ಸುರಕ್ಷಿತವಾಗಿ ವಾಪಸ್ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸಿವಿಲ್ ಡಿಫೆನ್ಸ್ ಕಮಾಂಡರ್ ?? ಚೇತನ್ ಅವರು
75 ಜನರ ಜೀವ ಉಳಿಸಿ ಕೊನೆಗೆ ತಮ್ಮದೆ ಬೊಟ್ ಮುಳುಗಿದರು 12KM ಈಜಿ ಬಂದು ಸುರಕ್ಷಿತವಾಗಿ ದಡ ಸೇರಿದ್ದು ಕಮಾಂಡರ್ ಅವರಿಗೆ ನಮದೊಂದು ಸಲಾಂ.

Leave a Comment