
ಹಳಿಯಾಳ:- ಯಡೋಗಾ ಹಳ್ಳದಲ್ಲಿ ಉಂಟಾದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಹಳಿಯಾಳಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಪೈಪಲೈನಗಳ ದುರಸ್ಥಿ ಹಾಗೂ ನೂತನ ಬಲಿಷ್ಠ ಎಮ್ಎಸ್ ಪೈಪಲೈನ್ ಜೋಡಿಸುವ ಕಾರ್ಯ ಆರಂಭವಾಗಿದೆ.
7-8 ದಶಕಗಳ ಅವಧಿಯಲ್ಲೇ ಒಂದು ವಾರಗಳ ಕಾಲ ಹಳಿಯಾಳದಲ್ಲಿ ಸುರಿದ ದಾಖಲೆಯ ಮಳೆಗೆ ಭಾರಿ ಪ್ರವಾಹದಿಂದ ದುಸಗಿ, ಮಂಗಳವಾಡ, ಕೆಸರೊಳ್ಳಿ ಹಾಗೂ ಯಡೋಗಾ ಮೂಲಕ ಹರಿಯುವ ಹಳ್ಳಗಳು ಸೇತುವೆಗಳ ಮೇಲೆ ಹಾಗೂ ಸುತ್ತಲು ನೂರಾರು ಎಕರೆ ಪ್ರದೇಶದಲ್ಲಿ ಹರಿದು ಸಾಕಷ್ಟು ಹಾನಿ ಉಂಟುಮಾಡಿದ್ದವು. ಈ ಸಂದರ್ಭದಲ್ಲಿ ದಿ.7 ರಂದು ಪ್ರವಾಹದ ನೀರಿಗೆ ಸುಮಾರು 5 ದೊಡ್ಡ ಪೈಪಲೈನಗಳು ಕೊಚ್ಚಿಕೊಂಡು ಹೋಗಿದ್ದವು. ಇದರಿಂದ ಪಟ್ಟಣಕ್ಕೆ ಕಳೆದ 6 ದಿನಗಳಿಂದ ಕುಡಿಯುವ ನೀರು ಸಬರಾಜು ಸ್ಥಗೀತಗೊಂಡಿದ್ದು ಜನರು ಪರದಾಡುವಂತಾಗಿದೆ.

ಎಮ್.ಎಲ್.ಸಿ ಭೇಟಿ :– ಸೋಮವಾರ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೊಟ್ನೇಕರ ಅವರು ಯಡೋಗಾ ಸೇತುವೆಗೆ ಭೆಟಿ ನೀಡಿ ಪೈಪಲೈನ್ ಜೋಡಿಸುವ ಕಾರ್ಯವನ್ನು ಪರಿಶೀಲಿಸಿದರು. ಮುಂದೆ ಯಾವುದೇ ಕಾರಣಕ್ಕೂ ನೀರಿನಿಂದ ಅಥವಾ ವಾಹನಗಳಿಂದ ಪೈಪಗಳಿಗೆ ಹಾನಿಯಾಗದಂತೆ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪರಿಶೀಲನೆ :– ಹಳಿಯಾಳ ಪುರಸಭೆಯ ಬಿಜೆಪಿ ಸದಸ್ಯರಾದ ಚಂದ್ರಕಾಂತ ಕಮ್ಮಾರ, ಉದಯ ಹೂಲಿ, ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪ್ರಧಾನ ಕಾರ್ಯದರ್ಶಿ ಅನಿಲ ಮುತ್ನಾಳ್ ಸೇರಿದಂತೆ ಮೊದಲಾದವರು ಕೂಡ ಕಾಮಗಾರಿ ಸ್ಥಳಕ್ಕೆ ಭೆಟಿ ನೀಡಿ ವೀಕ್ಷಿಸಿದರು.
4-5 ದಿನಗಳಲ್ಲಿ ನೀರು:- ಈ ಕುರಿತು ಮಾಹಿತಿ ನೀಡಿದ ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಸುಮಾರು 200 ಮೀಟರ್ ಪೈಪಲೈನ್ ನೀರಿನಲ್ಲಿ ಕೊಚ್ಚಿಕೊಂಡು ಹೊಗಿರುವ ಕಾರಣ ಈಗಾಗಲೇ 8ಲಕ್ಷ 65 ಸಾವಿರ ರೂ. ಅಂದಾಜು ವೆಚ್ಚದಲ್ಲಿ ಸದೃಢ ಗುಣಮಟ್ಟದ 20 ಮೆಟಲ್ ಸ್ಟೀಲ್ ಪೈಪಗಳನ್ನು ತರಿಸಲಾಗಿದೆ. ಪೈಪ್ ಜೋಡಣೆ ಕಾಮಗಾರಿ ಪ್ರಾರಂಭವಾಗಿದ್ದು 4ರಿಂದ 5 ದಿನಗಳಲ್ಲಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುವುದು ಜನರು ಸಹಕರಿಸಬೇಕೆಂದು ವಿನಂತಿಸಿದರು.

Leave a Comment