
ಹಳಿಯಾಳ:- ಭಾರಿ ಮಳೆಗೆ ಪ್ರವಾಹ ಸೃಷ್ಠಿಸಿದ್ದ ಹಳಿಯಾಳದ ಹಳ್ಳಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು ಹಳ್ಳಗಳು ಶಾಂತವಾಗಿ ಹರಿಯುತ್ತಿದ್ದು, ನದಿ ಪಾತ್ರದ ರೈತರು ಹೊಲಗಳ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ.
8 ದಿನಗಳ ಕಾಲ ಹಳಿಯಾಳ-ಖಾನಾಪುರ-ಅಳ್ನಾವರ ಭಾಗದಲ್ಲಿ ಸುರಿದ ದಾಖಲೆಯ ಮಳೆಗೆ ಹಳಿಯಾಳದ ದುಸಗಿ, ಮಂಗಳವಾಡ, ಯಡೋಗಾ, ಕೆಸರೊಳ್ಳಿ, ಹಂಪಿನಹೊಳಿ, ಮುಗದಕೊಪ್ಪ ಹಳ್ಳಗಳಲ್ಲಿ ಪ್ರವಾಹ ಸೃಷ್ಠಿಯಾಗಿ ಸುತ್ತಲು ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೊಗಿದ್ದವು.
ಅಲ್ಲದೇ ರೈತರ ಕೃಷಿ ಸಾಮಗ್ರಿಗಳು, ಪಂಪಸೆಟಗಳು ಹಾಗೂ ಕೊಟ್ಟಿಗೆಗಳು ನಿರಿನಲ್ಲಿ ಕೊಚ್ಚಿಕೊಂಡು ಹೊಗಿದ್ದವು ಹಾಗೂ ನೀರಿನಲ್ಲಿ ತೆಲಿ ಬಂದ ಗಿಡ ಗಂಟಿಗಳು, ಮರಗಳ ಟೊಂಟೆಗಳು ಕೃಷಿ ಜಮೀನಿನಲ್ಲಿ ಬಿದ್ದಿದ್ದರಿಂದ ಈಗ ರೈತರಿಗೆ ಭೂಮಿ ಹಸನು(ಸ್ವಚ್ಚ) ಮಾಡುವುದು ತಲೆನೋವಾಗಿ ಪರಿಣಮಿಸಿದೆ.

Leave a Comment