
ಹೊನ್ನಾವರ : ಕಳೆದು ಹೋಗಿದ್ದ ನಲವತ್ತೆರಡು ಸಾವಿರ ರೂಪಾಯಿಯನ್ನು ಹಣದ ವಾರಸುದಾರರಿಗೆ ಹಿಂತಿರುಗಿಸಿದ ಹೊನ್ನಾವರದ ಶಿವಾನಂದ ಮಹಾಲೆಯವರು ತಮ್ಮ ಪ್ರಾಮಾಣಿಕತೆಯನ್ನು ಮೆರೆದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕಳೆದ ಶನಿವಾರ ಸಂಜೆ ತಮ್ಮ ವ್ಯವಹಾರಕ್ಕೆಂದು ತಮ್ಮ ಕಿಸೆಯಲ್ಲಿಟ್ಟುಕೊಂಡಿದ್ದ ಸುಮಾರು 2000 ರೂಪಾಯಿ ಮುಖಬೆಲೆಯ 21 ನೋಟುಗಳು, ಅಂದರೆ ಒಟ್ಟೂ ರೂ.42,000 ಗಳನ್ನು ಹಣದ ವಾರಸುದಾರರಾದ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಕಳೆದುಕೊಂಡಿದ್ದರು. ಕಳೆದುಕೊಂಡ À ಹಣಕ್ಕಾಗಿ ತಾವು ಆ ದಿನ ವ್ಯವಹರಿಸಿದ ಬ್ಯಾಂಕ್,ಅಂಗಡಿ ಮುಗ್ಗಟ್ಟುಗಳಿಗೆ ವಿಚಾರಿಸಿ, ಜಗದೀಪ ತೆಂಗೇರಿಯವರು ಹಣ ಸಿಗದೇ ವಿಚಲಿತರಾಗಿದ್ದರು. ಆದರೆ ಸೋಮವಾರ ದಿನ ಮುಂಜಾನೆ ನಗರದ ಬಸ್ ನಿಲ್ದಾಣದ ಬಳಿಯಿರುವ, ‘’ದಿನೇಶ್ ಹೆರ್ ಡ್ರೆಸಸ್ “ ಗೆ ಹೆರ್ ಕಟ್ಟಿಂಗ್ಗೆಂದು ಜಗದೀಪ ತೆಂಗೇರಿ ಕುಳಿತಾಗ, ಗೆಳೆಯರಾದ ‘ದಿನೇಶ್ ಹೇರ್ ಡ್ರೆಸಸ್ ; ಮಾಲೀಕರಾದ ಶಿವಾನಂದ ಮಹಾಲೆ ಬಳಿ ಜಗದೀಪ ತೆಂಗೇರಿಯವರು ಸಹಜವಾಗಿ ಮಾತನಾಡುವ ಸಂದರ್ಭದಲ್ಲಿ ತಾನು ಕಳೆದೆರಡು ದಿನದ ಹಿಂದೆ ಹಣ ಕಳೆದುಕೊಂಡಿದ್ದು ಪ್ರಸ್ತಾಪಿಸಿದ್ದಾರೆ. ಆಗ ಕೂಡಲೇ ಶಿವಾನಂದ ಮಹಾಲೆಯವರು ಎಚ್ಚೆತ್ತು ಶನಿವಾರ ರಾತ್ರಿ ವೇಳೆ ತಮ್ಮ ಅಂಗಡಿಯ ಮುಂಭಾಗದಲ್ಲಿ ಬಿದ್ದಿದ್ದ ಹಣವನ್ನು ಯಾರಿಗಾದರೂ ಹಿಂತಿರುಗಿಸಬೇಕೆಂದು ತಮ್ಮ ಕಪಾಟಿನಲ್ಲಿ ಜೋಪಾನವಾಗಿಟ್ಟಿದ್ದರು. ತಕ್ಷಣ ಶಿವಾನಂದರವರು ತೆಂಗೇರಿಯವರ ಬಳಿ ಯಾವ ಮುಖ ಬೆಲೆಯ ಏಷ್ಟು ಹಣ, ಎನ್ನುವುದನ್ನೆಲ್ಲಾ ವಿಚಾರಿಸಿ, ಇದು ತೆಂಗೇರಿಯವರ ಹಣವೆಂದು ಖಚಿತ ಪಡಿಸಿ ಎಲ್ಲಾ ಹಣವನ್ನು ಜಗದೀಪ ತೆಂಗೇರಿಯವರಿಗೆ ಹಿಂದುರುಗಿಸಿ ತಮ್ಮ ಪ್ರಾಮಾಣಿಕತೆಯನ್ನು ಮೆರೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜಗದೀಪ ತೆಂಗೇರಿ ಸಂತಸ : ಜೀವನದಲ್ಲಿ ವಿನಾಕಾರಣ ಹತ್ತು ರೂಪಾಯಿಗಳನ್ನು ಕಳೆದುಕೊಳ್ಳದ ನಾನು, ಮಳೆಯ ಗಡಿಬಿಡಿಯಲ್ಲಿ ಸಾವಿರಾರು ರೂಪಾಯಿ ಕಳೆದುಕೊಂಡು ನೊಂದಿದ್ದೆ. ಆದರೆ ಕಳೆದುಕೊಂಡಿದ್ದ ರೂ,42,000 ವನ್ನು ನನಗೆ ಹಿಂತಿರುಗಿಸಿ ಶಿವಾನಂದ ಮಹಾಲೆ ಹೃದಯವಂತಿಕೆ ಮೆರೆದಿದ್ದಾರೆ. ಈ ಹಿಂದೆಯೂ ತಮಗೆ ಸಿಕ್ಕಿದ್ದ ಓರ್ವ ಗ್ರಾಮೀಣ ಭಾಗದ ಮಹಿಳೆಯೊಬ್ಬಳ ಸುಮಾರು ಒಂದು ಲಕ್ಷ ರೂಪಾಯಿ ಬೆಲೆ ಬಾಳುವ, ಬಂಗಾgದÀ ಆಭರಣವನ್ನು ಆ ಮಹಿಳೆಗೆ ಹಿಂತಿರುಗಿಸಿ ತಮ್ಮ ಪ್ರಾಮಾಣಿಕತೆ ಮೆರೆದಿದ್ದರು. ಎಡಗೈ ಮೇಲಿನ ವಿಶ್ವಾಸ ಬಲಗೈ ಇಲ್ಲದ ಇಂದಿನ ವಾತಾವರಣದಲ್ಲಿ ಶಿವಾನಂದ ಮಹಾಲೆಯಂತವರು ಎಲ್ಲರಿಗೂ ಆದರ್ಶವಾಗಲಿ, ಎಂದು ಜಗದೀಪ ತೆಂಗೇರಿ ಹಾರೈಸಿದ್ದಾರೆ.
Leave a Comment