
ಹೊನ್ನಾವರ : ಮಂಗಳೂರಿನಲ್ಲಿ ಶಿಟೊ-ರು ಕರಾಟೆ ಡು ಏರ್ಪಡಿಸಿದÀ ಮುಕ್ತ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹೊನ್ನಾವರದ ಯಕ್ಷ ಕರಾಟೆ ಡು ಅಸೋಸಿಯೇಷನ್ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪದಕಗಳನ್ನು ಪಡೆದಿರುತ್ತಾರೆ. ಹಲವು ವಯೋಮಿತಿಯ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಶ್ರೀನಿವಾಸ ಉಮೇಶ ಕಾಮತ 6 ವರ್ಷ ವಯೋಮಿತಿಯ ಕಥಾದಲ್ಲಿ ತೃತೀಯ ಸ್ಥಾನವನ್ನು, ಪ್ರೀತಮ್ ವಿ. ಮೇಸ್ತ 8 ವರ್ಷ ವಯೋಮಿತಿಯ ಕಥಾದಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಹರುಶ್ ರಾಮಕೃಷ್ಣ ಆಗೇರ್ 12 ವರ್ಷ ವಯೋಮಿತಿಯ ಕಮಿಟೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರ ಸಾಧನೆಗೆ ಕರಾಟೆ ಶಿಕ್ಷಕರಾದ ಸೆನ್ಸಿ ವಾಮನ ಪಾಲನ, ಸೆನ್ಸಿ ರಾಜೇಶ ಪಟಗಾರ ಮುಖ್ಯ ತರಬೇತುದಾರರಾದ ರವಿಕುಮಾರ ಉದ್ಯಾವರ ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿರುತ್ತಾರೆ.
Leave a Comment