
ಹಳಿಯಾಳ:- 2019-20 ನೇ ಸಾಲಿನ ಸಾಂಬ್ರಾಣಿ ವಲಯ ಮಟ್ಟದ ಕ್ರೀಡಾಕೂಟವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡೊಳ್ಳಿ ಶಾಲಾ ಮೈದಾನದಲ್ಲಿ ಯಶಸ್ವಿಯಾಗಿ ನೆರವೆರಿತು.
ತಾಲೂಕ ಪಂಚಾಯತ ಅಧ್ಯಕ್ಷೆ ರೀಟಾ ಸಿದ್ದಿ ಅವರು ಕ್ರೀಡಾಕೂಟದ ಉಧ್ಘಾಟನೆಯನ್ನು ನೆರವೆರಿಸಿದರು. ಕ್ರೀಡಾ ಜ್ಯೋತಿಯನ್ನು ಗುಂಡೊಳ್ಳಿ ಗ್ರಾಮದ ದೈವ ಕಮೀಟಿಯ ಅಧ್ಯಕ್ಷ ಸುಭಾಷ ಕಾಮ್ರೇಕರ ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ಗುಂಡೊಳ್ಳಿ ಗ್ರಾಪಂ ಉಪಾಧ್ಯಕ್ಷ ಮಾರುತಿ ಸಾಲ್ಗುಡಿ, ಎಸ್ಡಿಎಮ್ಸಿ ಅಧ್ಯಕ್ಷ ಶಂಕರ ದೇಸನೂರ ಕ್ರೀಡಾ ಧ್ವಜಾರೋಹಣ ನೆರವೆರಿಸಿದರು. ಶಾಲಾ ಶಿಕ್ಷಕರು, ಗ್ರಾಮದ ಹಿರಿಯರು ಮೊದಲಾವರು ಉಪಸ್ಥಿತರಿದ್ದರು.
Leave a Comment