
ಖಾನಾಪುರ;
ಹೌದು ಗಡಿಭಾಗ ಖಾನಾಪೂರ ತಾಲೂಕಿನ ಎಲ್ಲ ರೀತಿಯಿಂದ ಸೈ ಎನಿಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನೀಡಿರುವ ಈ ಶಾಲೆಯ ವಿಶೇಷ ವರದಿ ಇಲ್ಲಿದೆ ನೋಡಿ
ಸರ್ಕಾರಿ ಶಾಲೆಗಳು ಎಂದರೆ ಮೂಲಭೂತ ಸೌಕರ್ಯವಂಚಿತ, ಶಿಕ್ಷಕರ ಕೊರತೆಯಿರುವ ಹಾಗೂವಿದ್ಯಾಭ್ಯಾಸದಲ್ಲಿ ಅಷ್ಟೇನೂ ಉತ್ತಮ ಗುಣಮಟ್ಟ ಹೊಂದಿರದ ಶಾಲೆಗಳು ಪಾಲಕ ವರ್ಗದಿಂದಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ ತಾಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟದಲ್ಲಿ ಇತರೆ ಪ್ರೌಢಶಾಲೆಗಳಿಗಿಂತ ವಿಭಿನ್ನವಾಗಿದ್ದು, ತಾಲೂಕಿನ ಹಿರೇಹಟ್ಟಿಹೊಳಿ, ಚಿಕ್ಕಹಟ್ಟಿಹೊಳಿ, ಗಾಡಿಕೊಪ್ಪ, ಜಿಕನೂರು ಸೇರಿದಂತೆ ಬೆಳಗಾವಿ ತಾಲೂಕಿನ ಕುಕಡೊಳ್ಳಿ ಮತ್ತು ಚನ್ನಮ್ಮನ ಕಿತ್ತೂರು ತಾಲೂಕಿನ ಅಮರಾಪುರ, ವೀರಾಪುರ ಗ್ರಾಮಗಳ ಗ್ರಾಮೀಣ ಭಾಗದವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದೆ.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರ, ಗ್ರಾಮಸ್ಥರ ಸಹಭಾಗಿತ್ವ ಮತ್ತು ಶಿಕ್ಷಕರ ಪರಿಶ್ರಮದಿಂದಾಗಿ ಶಾಲೆ ಪಠ್ಯ ಮತ್ತು ಪಠ್ಯೇತರ ರಂಗಗಳಲ್ಲಿ ತನ್ನದೇ ಆದ ಸಾಧನೆಗಳನ್ನು ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಶೈಕ್ಷಣಿಕ ರಂಗದಲ್ಲಿ ಮಿಂಚಿದ್ದು, ವಿವಿಧ ಕ್ರೀಡೆಗಳಲ್ಲಿ ರಾಜ್ಯಮಟ್ಟದವರೆಗೂ ಆಯ್ಕೆಯಾಗುವ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ಶಾಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಸಹಾಯದೊಂದಿಗೆ ದೂರದರ್ಶನ, ಆಕಾಶವಾಣಿಗಳ ಮೂಲಕ ಬೋಧಿಸುವುದು, ನಿಯಮಿತವಾಗಿ ಜನಪದ ನೃತ್ಯ, ಕೋಲಾಟ, ನಾಟಕ, ಭಾಷಣ, ವಿಜ್ಞಾನ ಮಾದರಿ ತಯಾರಿಸುವುದು, ಚಿತ್ರಕಲೆ, ಕ್ವಿಜ್, ಡಿಬೇಟ್ ಮತ್ತಿತರ ಪಠ್ಯಕ್ಕೆ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರತಿಯೊಬ್ಬರೂ ಕಲಿಕೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ.
2007ರಲ್ಲಿ ಸ್ಥಾಪನೆಗೊಂಡ ಈ ಶಾಲೆ ಮೊದಲು ಕಟ್ಟಡದ ಕೊರತೆಯಿಂದಾಗಿ ಗ್ರಾಮದ ಪ್ರಾಥಮಿಕಶಾಲೆಯ 3 ಕೊಠಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಗ್ರಾಮದ ಹೊರವಲಯದ 4.20 ಎಕರೆ ಜಮೀನನ್ನು ಶಾಲೆ ನಿರ್ಮಾಣಕ್ಕೆ ಸರ್ಕಾರ ಮಂಜೂರು ಮಾಡಿದ್ದರಿಂದ 2012ರಲ್ಲಿ ಹೊಸಜಾಗದಲ್ಲಿ ಸುಸಜ್ಜಿತ ಕಟ್ಟಡ ತಲೆಯೆತ್ತಿದೆ.
ಕಟ್ಟಡದ ಸುತ್ತಮುತ್ತ ವಿಶಾಲವಾದ ಆಟದಮೈದಾನ, ಅಡುಗೆ ಮನೆ, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ, ಕುಡಿಯುವ ನೀರಿನ ವ್ಯವಸ್ಥೆ, ಸಿಬ್ಬಂದಿ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಈ ಶಾಲೆ ಹೊಂದಿದೆ. ಪ್ರಸ್ತುತಶಾಲೆಯಲ್ಲಿ 7 ಶಿಕ್ಷಕರು ಸೇರಿದಂತೆ 9 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 8ರಿಂದ10ನೇ ತರಗತಿಯವರೆಗೆ ಒಟ್ಟು 130 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಸಣ್ಣಕ್ಕಿ, ಹಳೆಯ ವಿದ್ಯಾರ್ಥಿಗಳ ಸಂಘದಅಧ್ಯಕ್ಷ ಶಿವಾನಂದ ಪೂಜಾರಿ ಹಾಗೂ ಶಾಲೆಯ ಎಲ್ಲ ಶಿಕ್ಷಕರ, ವಿದ್ಯಾರ್ಥಿಗಳ, ಪಾಲಕರಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಶಾಲೆಯ ಆವರಣದಲ್ಲಿ 600ಕ್ಕೂ ಹೆಚ್ಚು ವಿವಿಧಪ್ರಜಾತಿಯ ಸಸಿಗಳನ್ನು ನೆಡಲಾಗಿದೆ.
ಶಾಲೆಯ ಪ್ರತಿ ವಿದ್ಯಾರ್ಥಿಗೆ 4 ನೆಟ್ಟಸಸಿಗಳನ್ನು ಪೋಷಿಸುವ ಹೊಣೆಗಾರಿಕೆಯನ್ನು ವಹಿಸಿಕೊಡಲಾಗಿದೆ. ಶಾಲಾ ಅವಧಿಗೂ ಮುನ್ನಹಾಗೂ ನಂತರ ಶ್ರಮದಾನದ ಮೂಲಕ ಗಿಡಗಳಿಗೆ ಬೇಲಿ ಹಾಕುವ, ನೀರುಣಿಸುವ ಮತ್ತು ಕಸತೆಗೆಯುವ ಕೆಲಸವನ್ನು ಈ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿ ನಿಯಮಿತವಾಗಿಮಾಡುತ್ತಿದ್ದಾರೆ.
ಗ್ರಾಮಸ್ಥರ, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಶ್ರಮದಾನ ಹಾಗೂ ಪಾಲಕರ ದೇಣಿಗೆಗಳಸಹಾಯದಿಂದ ಶಾಲೆಯ ಆವರಣವನ್ನು ಸಮತಟ್ಟು ಮಾಡಿ ಕ್ರೀಡಾಂಗಣ, ವಿವಿಧ ಕ್ರೀಡೆಗಳಿಗೆಬೇಕಾದ ಪರಿಕರಗಳನ್ನು ಖರೀದಿಸಲಾಗಿದೆ. ಗ್ರಂಥಾಲಯದಲ್ಲಿ 4 ಸಾವಿರಕ್ಕೂ ಹೆಚ್ಚುಪುಸ್ತಕಗಳನ್ನು ಸಂಗ್ರಹಿಸಲಾಗಿದೆ.
ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳಿಗೆ ವಿವಿಧಮಾದರಿಗಳನ್ನು ಒದಗಿಸಿ ಅವುಗಳನ್ನು ಬಳಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲೆಯಶಿಕ್ಷಕರು ಶಾಲೆಯ ಒಳಗೆ ಹಾಗೂ ಹೊರಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಒದಗಿಸುವಫಲಕಗಳನ್ನು ಅಳವಡಿಸುವ ಮೂಲಕ ಶಾಲೆಗೆ ವಿಶೇಷ ಆಕರ್ಷಣೆಯನ್ನು ನೀಡುವಲ್ಲಿ ವಿಶೇಷಕಾಳಜಿಯನ್ನು ವಹಿಸಿದ್ದಾರೆ.
ಪ್ರಶಸ್ತಿಗಳುಶಾಲೆಯ ವಿದ್ಯಾರ್ಥಿಗಳು ಕೋಲು ನೆಗೆತ, ಎತ್ತರ ಜಿಗಿತ ಮತ್ತು ವಾಲಿಬಾಲ್ಕ್ರೀ ಡೆಗಳಲ್ಲಿ ಕಳೆದ ಮೂರು ವರ್ಷಗಳಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿಮಿಂಚುತ್ತಿದ್ದಾರೆ. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಾನಪದ ನೃತ್ಯಮತ್ತು ಭಾವಗೀತೆ, ಚರ್ಚಾಕೂಟ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆಯಹಿರಿಮೆಯನ್ನು ಹೆಚ್ಚಿಸಿದ್ದಾರೆ. ಶಾಲೆಯ ಹಿಂದಿನ ಮುಖ್ಯ ಶಿಕ್ಷಕ ಎಸ್,ವಿ ಪಾಟೀಲಅವರಿಗೆ ತಾಲೂಕುಮಟ್ಟದ ಉತ್ತಮ ಶಿಕ್ಷಕ ಹಾಗೂ ದೈಹಿಕ ಶಿಕ್ಷಕ ಗಿರೀಶ ನಾಯಕ ಅವರಿಗೆ2015ರ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು ಈ ಶಾಲೆಗೆ ಸಂದಗೌರವಗಳಾಗಿವೆ.
ಪರಿಸರದ ಬಗ್ಗೆ ವಿಶೇಷ ಕಾಳಜಿಶಾಲೆಯ ಆವರಣದಲ್ಲಿ ಬಾಳೆ, ತೆಂಗು, ಚಿಕ್ಕು, ಮಾವು, ಗೋಡಂಬಿ ಸೇರಿದಂತೆ ವಿವಿಧಹಣ್ಣುಗಳ, ಕಾಯಿಗಳ ಹಾಗೂ ತರಹೇವಾರಿ ಹೂವುಗಳ ತೋಟವನ್ನು ನಿರ್ಮಿಸಿರುವುದು. ಶಾಲೆಯ ಆವರಣದ ಪ್ರವೇಶ ದ್ವಾರದ ಬಳಿ ಸರಸ್ವತಿ ಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿರುವುದುಶಾಲೆಯ ವಿಶೇಷತೆಗಳಾಗಿವೆ.
Leave a Comment