ಹಳಿಯಾಳ :- ಕಳೆದ ಅಗಸ್ಟ್ ತಿಂಗಳ ದಿ.6 ರಿಂದ 9 ರ ವರೆಗೆ ಹಳಿಯಾಳದ ದುಸಗಿ ಹಳ್ಳದಲ್ಲಿ ಪ್ರವಾಹ ಉಂಟಾಗಿ ಸೇತುವೆ ಬಳಿಯ ರಾಜ್ಯ ಹೆದ್ದಾರಿ ಕೊಚ್ಚಿಕೊಂಡು ಹೋಗಿದ್ದನ್ನು ಮರೆಯುವ ಮೊದಲೆ ಈಗ ಮತ್ತೇ ಸೇತುವೆಗೆ ತಾಗಿರುವ ಮಣ್ಣು ಭಾರಿ ಪ್ರಮಾಣದಲ್ಲಿ ಕುಸಿತ ಉಂಟಾಗುತ್ತಿರುವುದು ಜನರ ನಿದ್ದೆಗೆಡಿಸಿದೆ.
ದುಸಗಿ ಹೊಸ ಸೇತುವೆಯ ಪಕ್ಕದಲ್ಲೇ ಹಳೆ ಸೇತುವೆ ಕೂಡ ಇದೆ ಇಲ್ಲಿ ಸೇತುವೆಗೆ ತಾಗಿ ಇತ್ತೀಚೆಗೆ ಕೊಚ್ಚಿಕೊಂಡು ಹೊಗಿದ್ದ ರಸ್ತೆಗೆ ಮಣ್ಣು, ಖಡಿ ಹಾಕಿ ತಾತ್ಕಾಲಿಕ ರೀಪೇರಿ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೇ ಶನಿವಾರ ರಾತ್ರಿ ಮತ್ತೇ ಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದಿರುವುದರಿಂದ ಮಣ್ಣು ಕುಸಿತವಾಗಿದೆ.
ಸೇತುವೆಗೆ ತಾಗಿರುವ ಮಣ್ಣು ಹಳ್ಳದ ಪಕ್ಕದಿಂದ ಒಳಗಡೆಯಿಂದ ಕುಸಿಯುತ್ತಿರುವುದರಿಂದ ಒಳಬದಿಯಿಂದಲೇ ದೊಡ್ಡ ಕಂದಕ ನಿರ್ಮಾಣವಾಗಿದೆ. ಇದರ ಬದಿಯಲ್ಲೇ ವಾಹನಗಳು ಸಂಚರಿಸುತ್ತಿವೆ. ಒಂದಾನುವೇಳೆ ಭಾರಿ ವಾಹನ ಸಂಚಾರ ನಿರಂತರವಾದರೇ ಮತ್ತೇ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಒಳಭಾಗದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಉಂಟಾಗಿ ಹಾನಿಯಾಗುವ ಲಕ್ಷಣಗಳು ಗೊಚರಿಸುತ್ತಿವೆ.
ಭಾನುವಾರ ಜನರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಸಂಬಂಧಪಟ್ಟ ಇಲಾಖೆಯವರು ಕೂಡಲೇ ಮಣ್ಣು ಕುಸಿತವನ್ನು ತಡೆದು ದುರಸ್ಥಿ ಮಾಡದೇ ಇದ್ದರೇ ಸದಾ ವಾಹನ ಸಂಚಾರವಿರುವ ಈ ಸೇತುವೆಯಲ್ಲಿ ಅವಘಡಗಳು ಸಂಭವಿಸಬಹುದಾಗಿರುವ ಕಾರಣ ತಕ್ಷಣ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.



Leave a Comment