• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೆಂಗೇರಿ ಉಪನಗರ ನಿವಾಸಿಗಳಿಂದ ಹಳಿಯಾಳದ ನೆರೆ ಸಂತ್ರಸ್ಥರಿಗೆ 2.5ಲಕ್ಷ ಪರಿಹಾರ ವಿತರಣೆ- ಮರಾಠಾ ಜಗದ್ಗುರು, ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜ ಉಪಸ್ಥಿತಿ

September 10, 2019 by Yogaraj SK 1 Comment

Banglore kengeri upanagara Haliyal nivasigalinda Haliyal nere santrastarige parihara vitarane

ಹಳಿಯಾಳ:- ಪ್ರಪಂಚದಲ್ಲಿ ಪರೋಪಕಾರಕ್ಕಿಂತ ಶ್ರೇಷ್ಠ ಧರ್ಮ ಮತ್ತೋಂದಿಲ್ಲ ಈ ನಿಟ್ಟಿನಲ್ಲಿ ಶ್ರೀ ಛತ್ರಪತಿ ಶಿವಾಜಿ ಮತ್ತು ಶ್ರೀ ಭಗತಸಿಂಗ ಸೇವಾ ಸಂಘಗಳು ಹಾಗೂ ಹಳಿಯಾಳ ತಾಲೂಕಾ ಗೆಳೆಯರ ಬಳಗದವರು ಮಾಡುತ್ತಿರುವ ಸಮಾಜ ಸೇವೆ ಅಭಿನಂದನಾರ್ಹ ಎಂದು ಬೆಂಗಳೂರಿನ ಗೋಸಾವಿ ಮಹಾಸಂಸ್ಥಾನ ಮಠದ, ಮರಾಠಾ ಜಗದ್ಗುರುಗಳಾದ, ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜರು ಹೇಳಿದರು.

Banglore kengeri upanagara Haliyal nivasigalinda Haliyal nere santrastarige parihara vitarane


ಹಳಿಯಾಳ ತಾಲೂಕಿನವರಾದ ಸುಮಾರು 350ಕ್ಕೂ ಅಧಿಕ ಕುಟುಂಬಗಳು ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ವಾಸಿಸುತ್ತಿದ್ದು ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ಕಾರ್ಮಿಕರು ರಾಜ್ಯದ ವಿವಿದೆಡೆ ಪ್ರವಾಹ ಸಂತ್ರಸ್ಥರಿಗೆ ತಮ್ಮ ಒಂದು ದಿನದ ಸಂಬಳವನ್ನು ಒಟ್ಟೂಗೂಡಿಸಿ ನೆರೆಪೀಡಿತರಿಗೆ ಅವಶ್ಯಕವಾಗಿರುವ ಪರಿಹಾರ ಕಿಟ್‍ಗಳನ್ನು ವಿತರಿಸಿದ್ದು ಕೊನೆಯದಾಗಿ ಹಳಿಯಾಳ ತಾಲೂಕಿನ ಸುಮಾರು 25 ಕುಟುಂಬಗಳಿಗೆ ತಲಾ 10 ಸಾವಿರ ರೂ.ಗಳಂತೆ 2.50 ಲಕ್ಷ ರೂ. ಪರಿಹಾರ ಧನ ಸಂಗ್ರಹಿಸಿದ್ದರು.

watermarked IMG 20190910 WA0073


ಬುಧವಾರ ಪಟ್ಟಣದ ಮರಾಠಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮರಾಠಾ ಜಗದ್ಗುರುಗಳಾದ ಮಂಜುನಾಥ ಮಹಾರಾಜರು ನೆರೆ ಸಂತ್ರಸ್ಥರಿಗೆ ಈ ಸಹಾಯಧನವನ್ನು ವಿತರಿಸಿ ಮಾತನಾಡಿದರು.
ಕೆಂಗೇರಿ ಉಪನಗರದಲ್ಲಿ ವಾಸಿಸುತ್ತಿರುವ ಹಳಿಯಾಳಿಗರ ಸಮಾಜ ಸೇವೆ ನೀಜಕ್ಕೂ ಇತರರಿಗೆ ಆದರ್ಶವಾಗಿದೆ ಎಂದ ಅವರು ಈ ಸಂಘಟನೆಗಳ ಕಾರ್ಯದಿಂದ ಹಳಿಯಾಳದ ಕೀರ್ತಿ ಬೆಂಗಳೂರಿನಂತಹ ಮಾಹಾನಗರದಲ್ಲಿ ಬೆಳಗುತ್ತಿದೆ ಎಂದು ಶ್ಲಾಘಿಸಿದರು.

watermarked IMG 20190910 WA0071


ಪರೋಪಕಾರದಿಂದ ಮನುಷ್ಯನಲ್ಲಿಯ ಜೀಪುಣತನ, ಮೋಹ ದೂರವಾಗುತ್ತದೆ. ಮಮತೆ ಮತ್ತು ತ್ಯಾಗ ಮನೋಭಾವನೆ ಉಂಟಾಗುತ್ತದೆ ಎಂದ ಮಹಾರಾಜರು ಮನುಷ್ಯನಿಗೆ ಆಸೆ ಇರಬೇಕು ವಿನಃ ದುರಾಸೆಯಲ್ಲ. ಧರ್ಮ, ದಾನ, ಸಂಸ್ಕøತಿ, ತಪಸ್ವಿ, ಕ್ರೀಯಾಶೀಲ ಹಾಗೂ ಪರೋಪಕಾರಿಯಾಗಿರದ ಮನುಷ್ಯ ಭೂಮಿಗೆ ಯಾವತ್ತೂ ಭಾರವಾಗಿರುತ್ತಾನೆ ಎಂದರು.
ಸಮಾಜದಲ್ಲಿ ಕೆಟ್ಟವರಲ್ಲಿಯ ಒಳ್ಳೆಯ ಗುಣಗಳನ್ನು ಬೆಳಕಿಗೆ ತಂದು ಅವರನ್ನು ತಿದ್ದುವ ಪ್ರಯತ್ನ ಮಾಡೋಣ ಎಂದು ಕರೆ ನೀಡಿದ ಸ್ವಾಮೀಜಿಗಳು ಜೀವನದಲ್ಲಿ ಯಾರಿಗೂ ಕೆಡುಕನ್ನು ಬಯಸದೆ, ಪರರಿಗೆ ಪಿಡಿಸದೆ ಎಲ್ಲರಿಗೂ ಒಳಿತು ಬಯಸುತ್ತಾ ಪರೋಪಕಾರಿಯಾಗಿ ಬಾಳಿದರೇ ಜೀವನ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Banglore kengeri upanagara Haliyal nivasigalinda Haliyal nere santrastarige parihara vitarane


ಪ್ರತಿವರ್ಷ ಬರಗಾಲವೇ ಸಂಭವಿಸುತ್ತಾ 15-20 ವರ್ಷಗಳ ಕಾಲ ಮಳೆಗಾಲ ಬರದೇ ಇದ್ದರೇ ನೀರಿಗೆ ಹಾಹಾಕಾರ ಉಂಟಾದರೇ ಭೂಮಿಯ ಮೇಲೆ ಮನುಷ್ಯ ಹಾಗೂ ಪ್ರಾಣಿಗಳ ಜೀವನವೇ ಅಂತ್ಯವಾಗುತ್ತದೆ ಹೀಗಾಗಿ ಸದ್ಯ ಸಂಭವಿಸಿರುವ ನೆರೆ ಕೂಡ ಭಗವಂತನ ಲಿಲೇಯೇ ಆಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ ಸ್ವಾಮೀಜಿಗಳು ಎಲ್ಲರೂ ಸೇರಿ ನೆರೆಯಲ್ಲಿ ಸಂತ್ರಸ್ಥರಾದವರಿಗಾಗಿ ಸಹಾಯ ಮಾಡುವ ಮೂಲಕ ಬದುಕು ಕಟ್ಟಿಕೊಡಬಹುದು ಆದರೇ ಮಳೆಯೇ ಬಾರದಿದ್ದರೇ ಊಹಿಸಿಕೊಳ್ಳಲು ಸಾಧ್ಯವಿಲ್ಲವೆಂದರು.

Banglore kengeri upanagara Haliyal nivasigalinda Haliyal nere santrastarige parihara vitarane


ದೇವನೊಬ್ಬ ನಾಮ ಹಲವು ಆಗಿದ್ದು ಸರ್ವವೂ ಪರಮಾತ್ಮನದ್ದೇ ಆಗಿರುವುದರಿಂದ ಪ್ರತಿಕ್ಷಣ ದೇವರಲ್ಲಿ ಪ್ರಾರ್ಥಿಸುವಂತೆ ಹೇಳಿದ ಅವರು ಯಾವುದೇ ಸಂದರ್ಭದಲ್ಲೂ ಭಗವಂತನಲ್ಲಿ ನಿರ್ಮಲ ಮನಸ್ಸಿನಿಂದ ಪ್ರಾರ್ಥಿಸಿದರೇ ಒಳಿತು ಉಂಟಾಗುತ್ತದೆ ಹೀಗಾಗಿ ಮತ್ತೇ ಪ್ರವಾಹ ಬರದಿರುವಂತೆ ದೇವರಲ್ಲಿ ಪ್ರಾರ್ಥಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಳಿಯಾಳ ತಾಲೂಕಾ ಗೆಳೆಯರ ಬಳಗದ ಪ್ರಮುಖರಾದ ಶೀವಾಜಿ ಮಾಳ್ವಿ, ವಿಜಯ ಟೋಸುರ, ಪರಶುರಾಮ ಮಾಳ್ವಿ, ಗಣಪತಿ ದೇವರಮನೆ, ವಾಸುದೇವ ಪಾಟೀಲ್, ನಾರಾಯಣ ಬೆಳಗಾವಕರ, ರವೀ ಗೌಡಾ, ಮಾರುತಿ ಚವ್ವಾಣ, ಸಂದೀಪ ನಿಂಬಾಳಕರ ಮೊದಲಾದವರು ಇದ್ದರು.

Banglore kengeri upanagara Haliyal nivasigalinda Haliyal nere santrastarige parihara vitarane
watermarked IMG 20190910 WA0069
watermarked IMG 20190910 WA0072
watermarked IMG 20190910 WA0065
watermarked IMG 20190910 WA0066

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಕೆಂಗೇರಿ ಉಪನಗರ ನಿವಾಸಿಗಳಿಂದ, ಛತ್ರಪತಿ ಶಿವಾಜಿ, ಜಗದ್ಗುರುಗಳಾದ, ಮರಾಠಾ ಜಗದ್ಗುರು, ವೇದಾಂತಾಚಾರ್ಯ, ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜರು, ಶ್ರೀ ಭಗತಸಿಂಗ ಸೇವಾ ಸಂಘ, ಶ್ರೀ ಮಂಜುನಾಥ ಮಹಾರಾಜ ಉಪಸ್ಥಿತಿ, ಹಳಿಯಾಳದ ನೆರೆ ಸಂತ್ರಸ್ಥರಿಗೆ 2.5ಲಕ್ಷ ಪರಿಹಾರ ವಿತರಣೆ, ಹಳಿಯಾಳಿಗರ ಸಮಾಜ ಸೇವೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Comments

  1. Vishnu Nachnekar says

    September 10, 2019 at 6:42 pm

    ಸಹಾಯ ಮನೋಭಾವದ ಈ ದೀಪಗಳ ದರ್ಶನ ದೇದಿಪ್ಯಮಾನವಾಗಿದೆ. ಧನ್ಯವಾದಗಳು ಧನಿಕರೇ…

    Reply

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...