
ಭೀಕರ ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶವನ್ನು ರಾಷ್ಟ್ರೀಯ ದುರಂತ ಪ್ರದೇಶವೆಂದು ಘೋಷಿಸಬೇಕು ಮತ್ತು ರಾಜ್ಯಕ್ಕೆ ಈವರೆಗೂ ಕೇಂದ್ರದಿಂದ ಯಾವುದೇ ಹಣಕಾಸಿನ ಪರಿಹಾರವನ್ನು ನೀಡದೇ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿ, ಕೇಂದ್ರ ಹಾಗೂ ರಾಜ್ಯ ಬಿ.ಜೆ.ಪಿ ಸರಕಾರದ ಧೋರಣೆಯನ್ನು ವಿರೋಧಿಸಿÉ ತಹಶೀಲ್ದಾರ ಕಾರ್ಯಾಲಯದ ಎದುರು ಮಂಕಿ ಮತ್ತು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಸಮಿತಿ ಧರಣಿ ಸತ್ಯಾಗ್ರಹ ನಡೆಸಿ ರಾಜ್ಯಪಾಲರಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ಸರಿಸುಮಾರು 2 ಗಂಟೆಗೂ ಅಧಿಕ ಕಾಲ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕರದ ವಿರುದ್ದ ಗೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ ವಿವೇಕ್ ಶೆಣ್ವಿÉ ಧರಣಿ ನಿರತ ಸ್ಥಳಕ್ಕೆ ಆಗಮಿಸಿ, ರಾಜ್ಯಪಾಲರಿಗೆ ನೀಡಲಾದ À ಮನವಿ ಸ್ವೀಕರಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ತಕ್ಷಣ ನೆರೆ ಪರಿಹಾರವನ್ನು ನೀಡದಿದ್ದಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಲಾಯಿತು

ನಂತರ ಮಾಧ್ಯಮದವರನ್ನು ಉದ್ದೇಶಿಸಿ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಮಾತನಾಡಿ ಭೀಕರ ನೆರೆ ಹಾವಳಿಯಿಂದ ರಾಜ್ಯಾದಂತ 88 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, 10 ಜನ ನಾಪತ್ತೆಯಾಗಿದ್ದಾರೆ. ಸಾವಿರಾರು ಕುಟುಂಬಗಳು ತಮ್ಮ ಆಸ್ತಿ- ಪಾಸ್ತಿಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಮನೆ-ಮಠ ಕಳೆದುಕೊಂಡ ನಾಲ್ಕೂವರೆ ಲಕ್ಷ ಸಂತ್ರಸ್ತರು 1.465 ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. 1 ಲಕ್ಷ 70 ಸಾವಿರ ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದರೆ, 2 ಲಕ್ಷ 67 ಸಾವಿರ ಮನೆಗಳು ಹಾನಿಗೊಂಡಿದೆ. ರೈತರು ಬೆಳೆದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬೆಳೆಗಳು ಕಣ್ಣಿಗೆ ಕಾಣದಂತಾಗಿದೆ. ಸಾವಿರಾರು ಸೇತುವೆಗಳು, ರಸ್ತೆಗಳು ನೀರಿನಲ್ಲಿ ಕೊಚ್ಚಿಹೋಗಿ ಮಾಯವಾಗಿದೆ. ಕರ್ನಾಟಕದಲ್ಲಿ ನೆರೆಯಿಂದ 38,000 ಕೋಟಿ ರೂಪಾಯಿ ನಾಶವಾಗಿದ್ದರೂ, ಕೇಂದ್ರದ ಬಿ.ಜೆ.ಪಿ ಸರಕಾರ ಸಂತ್ರಸ್ತರಿಗೆ ನಯಾಪೈಸೆ ಬಿಡುಗಡೆಗೊಳಿಸಿಲ್ಲಾ. ಪ್ರಧಾನಿಯಾದಿಯಾಗಿ ಕೇಂದ್ರದ ಹಣಕಾಸು, ಗೃಹ ಮಂತ್ರಿಗಳು ಬಂದು ಹೋದರೂ ಯಾವುದೇÉ ಪ್ರಯೋಜನವಾಗಿಲ್ಲಾ ಎಂದರು.

ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ, ನಮ್ಮ ಭಾಗದಲ್ಲಿ ಲಿಂಗನಮಕ್ಕಿಯಿಂದ ಬಿಟ್ಟ ಹೆಚ್ಚುವರಿ ನೀರಿನಿಂದ ಶರಾವತಿ ನದಿಯ ಎಡ-ಬಲ ದಂಡೆಯ ಸಾವಿರಾರು ಜನರು ತಮ್ಮ ಆಸ್ತಿ- ಪಾಸ್ತಿಗಳನ್ನು ಕಳೆದುಕೊಂಡಿದ್ದು, ಹಾಗೇ ಗುಂಡಬಾಳ ನದಿ ಪ್ರವಾಹದಿಂದ ಉಂಟಾದ ನೆರೆ ಸಂತ್ರಸ್ತರಿಗೆ ಬಿಡಿಗಾಸು ಸಿಗದಾಗಿದೆ. ಇವರೆಲ್ಲರಿಗೂ ಕೇಂದ್ರ , ರಾಜ್ಯದ ಬಿ.ಜೆ.ಪಿ ಸರಕಾರ ತಕ್ಷಣ ಪರಿಹಾರ ಘೋಷಿಸಬೇಕಿದೆ.
ಧರಣಿ ಸತ್ಯಾಗ್ರಹದಲ್ಲಿ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ, ಯೋಗೇಶ ರಾಯ್ಕರ್, ಬಾಲಚಂದ್ರ ನಾಯ್ಕ, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಎಮ್.ಎನ್. ಸುಬ್ರಹ್ಮಣ್ಯ, ಜಿಜಿ.ಶಂಕರ್ ಇಂಟಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಅನಂತ ನಾಯ್ಕ, ಹೆಗ್ಗಾರ, ವಾಮನ ನಾಯ್ಕ, ಲೋಕೇಶ್ ನಾಯ್ಕ, ಸುಬ್ರಾಯ ನಾಯ್ಕ, ಬಳ್ಕೂರ, ಚಂದ್ರಕಾಂತ ಕೋಚರೇಕರ್, ಕೃಷ್ಣ ಗೌಡ, ಮಾವಿನಕುರ್ವಾ, ಅಲೆಕ್ಸ್ ಪೌಲ್, ಆಲ್ಲು ಫರ್ನಾಂಡಿಸ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.



Leave a Comment