
ಹೊನ್ನಾವರ ಪೀಲಿಸ್ ವೃತ್ತನಿರಿಕ್ಷಕರಾದ ಚೆಲವರಾಜು ಹಾಗೂ ಪಿಎಸೈ ಸಾವಿತ್ರಿ ನಾಯಕ ಮತ್ತು ಸಿಬ್ಬಂದಿಗಳು ಪಟ್ಟಣದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರಿರಿಗೆ ಸಂಚಾರಿ ನಿಯಮ ಪಾಲಿಸಿ ಎಂದು ಮಾಹಿತಿ ಪತ್ರ ವಿತರಿಸಿದರು. ಅಲ್ಲದೆ ಹೆಲ್ಮೆಟ್ ಧರಿಸಿ ಬರುವ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಪೋತ್ಸಾಹಿಸುವ ಮೂಲಕ ಮುಂದೆಯೂ ಸಂಚಾರಿ ನಿಯಮ ಪಾಲಿಸುವಂತೆ ಸಲಹೆ ನೀಡಿದರು. ಒಟ್ಟಾರೆ ಸಂಚಾರಿ ನಿಯಮ ಪಾಲಿಸುವಂತೆ ಪೋಲಿಸ್ ಅಧಿಕಾರಿಗಳೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದರಿಂದ ಮುಂಬರುವ ದಿನದಲ್ಲಿ ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸುತ್ತೇವೆ ಎನ್ನುವ ಮಾತು ಕೇಳಿ ಬಂತು. ಪೋಲಿಸರ ಈ ಪ್ರಯತ್ನ ಒಂದು ರೀತಿಯಲ್ಲಿ ಯಶ್ವಸಿಯಾಯಿತು.
ಈ ಸಂದರ್ಭದಲ್ಲಿ ಸಿಪಿ.ಐ ಚೆಲವರಾಜು ಅಫರಾಧ ವಿಭಾಗದ ಪಿಎಸೈ ಸಾವಿತ್ರಿ ನಾಯಕ, ಎ.ಎಸೈ ನಾರಾಯಣ ಗೌಡ, ಸಿಬ್ಬಂದಿಗಳಾದ ಶಿವಾನಂದ ವಿ.ಎ, ತನೇಶ ಗಾವಡಿ, ಶಿವಾನಂದ ಚಿತ್ರಗಿ ಉಪಸ್ಥಿತರಿದ್ದರು.



Leave a Comment