
ಜಿಲ್ಲಾ ಪಂಚಾಯತ ಉತ್ತರಕನ್ನಡ ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹಾಗೂ ಮಾವಿನಕುರ್ವಾ ವಲಯದ ಆಶ್ರಯದಲ್ಲಿ ತಾಲೂಕ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಕೊಳಗದ್ದೆ ಶ್ರೀ ವಿಷ್ಣು ಶಾಸ್ತ್ರಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕ್ರೀಡಾಕೂಟವನ್ನು ಕ್ರೀಡಾಧ್ವಜಾರೋಹ ಮಾಡುವ ಮೂಲಕ ತಾಲೂಕ ಪಂಚಾಯತ ಅಧ್ಯಕ್ಷರಾದ ಉಲ್ಲಾಸನಾಯ್ಕ ನೇರವೇರಿಸಿದರು. ಕ್ರೀಡಾಜ್ಯೂತಿಯನ್ನು ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಕಲಾ ಶಾಸ್ತ್ರಿ ಸ್ವೀಕರಿಸಿದ ಬಳಿಕ ವಿದ್ಯಾರ್ಥಿಗಳಿಂದ ಗಣ್ಯರು ಗೌರವವಂದನೆ ಸ್ವೀಕರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಗಾಟಿಸಿದ ಜಿಲ್ಲಾ ಪಂಚಾಯತ ಸದಸ್ಯರಾದ ಪುಷ್ಪಾ ನಾಯ್ಕ, ಮಾತನಾಡಿ ಗುರಿ ಇಟ್ಟುಕೊಂಡು ವಿದ್ಯಾರ್ಥಿಗಳು ಪರಿಶ್ರಮಪಟ್ಟರೆ ಸಾಧನೆ ಸಾಧ್ಯ. ಕ್ರೀಡೆಯಿಂದ ಪದಕ ಗೆಲ್ಲುವುದು ಮಾತ್ರ ಮುಖ್ಯವಲ್ಲ. ಜೀವನದ ಸದ್ರತೆಗೆ ಕ್ರೀಡೆ ಬಹುಮುಖ್ಯ. ಶಿಕ್ಷಣದಲ್ಲಿ ಮಾತ್ರವಲ್ಲ ಕ್ರೀಡೆಯಲ್ಲಿಯೂ ಅಂತರಾಷ್ಟೀಯ ಮಟ್ಟದಲ್ಲಿ ಸಾಧನೆ ಮಾಡಬಹುದು ಆನಿಟ್ಟಿನಲ್ಲಿ ಪ್ರಯತ್ನಿಸುವಂತೆ ಕರೆ ನೀಡಿದರು.

ಕ್ರೀಡಾಜ್ಯೋತಿ ಅನಾವರಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಇಂದು ಚಾಲನೆ ನಿಡಿದ ಜ್ಯೂತಿ ಗುರಿ ಮುಟ್ಟುವ ಜ್ವಾಲೆಯಾಗಲಿ. ಹಚ್ಚಿದ ದೀಪ ಜ್ಣಾನ ಜ್ಯೂತಿಯಾಗಲಿ. ಕ್ರೀಡಾಸ್ಪರ್ಧೆಯಲ್ಲಿ ಗೆಲವು ಸೋಲು ಇದ್ದೆ ಇದೆ. ಆದರೆ ಜೀವನದ ಸಾಧನೆಗೆ ಇದು ಪ್ರೇರಣೆ ಎಂದರು.
ತಾಲೂಕ ಪಂಚಾಯತ ಸದಸ್ಯರಾದ ಲೋಕೇಶ ನಾಯ್ಕ ಮಾತನಾಡಿ ಕ್ರೀಡಾ ಕಾರ್ಯಕ್ರಮ ಯಶ್ವಸಿಯಾಗಲು ವಿದ್ಯಾರ್ಥಿಗಳ ಭಾಗವಹಿಸುವಹಿಕೆಯಿಂದ ಇಂದು ನಡೆಯುವ ತಾಲೂಕ ಮಟ್ಟದಲ್ಲಿ ತುರುಸಿನ ಸ್ಪರ್ಧೆ ಇದೆ ಆ ಸ್ಪರ್ಧೆ ನೋಡಲು ಆತುರನಾಗಿದ್ದೇನೆ. ಇಂದು ಸೋತರೂ ನಾಳೆ ಗೆಲುವಿಗೆ ಪ್ರೇರಣೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರನ್ನು ಆದರ್ಶರಾಗಿಟ್ಟುಕೊಂಡು ನಾವು ಪ್ರಯತ್ನ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಯ್ರಕಮದ ಅಧ್ಯಕ್ಷತೆ ಉಲ್ಲಾಸ ನಾಯ್ಕ ವಹಿಸಿದ್ದರು.
ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಾದ ರಾಮಚಂದ್ರ ನಾಯ್ಕ, ಯಮುನಾ ನಾಯ್ಕ, ಭಾಸ್ಕರ ನಾಯ್ಕ, ಕೆಜಿ.ಗೌಡ, ವಿಜಯಾ ಭಟ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಪಂಚಾಯತ ಅಧ್ಯಕ್ಷರಾದ ಉಲ್ಲಾಸ ನಾಯ್ಕ ವಹಿಸಿದ್ದರು.
ವೇದಿಕೆಯಲ್ಲಿ ಖರ್ವಾ ಗ್ರಾಮ ಪಂಚಾಯತ ಅಧ್ಯಕ್ಷ ಮಾಬ್ಲ ನಾಯ್ಕ, ಮಾವಿನಕುರ್ವಾ ಪಂಚಾಯತ ಅಧ್ಯಕ್ಷ ತಿಲಕ ಗೌಡ, ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಭಜಂತ್ರಿ, ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಖಾಜಿ ಮಹ್ಮಮದ್ ಇರ್ಷಾದ್, ಸಮನ್ವಯಾಧಿಕಾರಿ ಎಸ್.ಎಂ.ಹೆಗಡೆ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಎನ್.ಎಸ್.ನಾಯ್ಕ, ಜಿ.ಎಚ್.ನಾಯ್ಕ, ಸತೀಶ ನಾಯ್ಕ, ಸೈಯದ್ ಅಲಿ ಶಿಯಾದ್ ,ಸಾಧನಾ ಬರ್ಗಿ, ಪ್ರತಿಮಾ ಹೆಗಡೆ, ಆಯ್.ಆರ್.ಭಟ್, ಪಿ.ಎಲ್.ಚೆಲವರಾಜ ಉಪಸ್ಥಿತರಿದ್ದರು. ಎಂ.ಜಿ.ನಾಯ್ಕ ಸ್ವಾಗತಿಸಿ ಸುದೇಶ ನಾಯ್ಕ ಹಾಗೂ ಉದಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

Leave a Comment