
ಜೋಯಿಡಾ ತಾಲೂಕಿನ ಯರಮುಖದಲ್ಲಿ ನಡೆದ ಕನ್ನಡ ಸಂಸ್ಕ್ರತಿ ಇಲಾಕೆ ಮತ್ತು ಪ್ರೇರಣಾ ಸಂಸ್ಥೆ ಇವರ ಸಹಯೋಗದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಮಹಾಬಲೇಶ್ವರ ದಾನಗೇರಿ ಇವರ ಸ್ಮರಣಾರ್ಥ ಕೃಷ್ಣ ಸಂಧಾನ ಎಂಬ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್,ವಿ,ಹೆಗಡೆ ಯಕ್ಷ ಕ್ಷೇತ್ರದಲ್ಲಿ ಅಧ್ಯಯನ ತುಂಬಾ ಮುಖ್ಯ , ಅಧ್ಯಯನ ಇಲ್ಲದೇ ತಾನು ದೊಡಗಡ ಯಕ್ಷಗಾನ ಪಟು ಎಂದು ಹೇಳಿಕೊಳ್ಳುವುದು ತಪ್ಪು. ಈ ದೃಷ್ಟಿಯಲ್ಲಿ ನಮ್ಮ ಊರಿನ ಹೆಮ್ಮೆಯಾದ ಯಕ್ಷಗಾನ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ ಮಾಡಿದ ದಿ,ಮಹಬಲೇಶ್ವರ ದಾನಗೇರಿ ಖ್ಯಾತ ಯಕ್ಷಗಾನ ಕಲಾವಿದರಾಗಿದ್ದರು ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದರು.
ಯಕ್ಷಗಾನ ಮತ್ತು ತಾಳಮದ್ದಳೆ ಕಲಾವಿದರು ಭಾಗವತ ಪುರಾಣ ಒದುವುದು ಅವಶ್ಯ, ಓದಿನಿಂದ ಹೆಚ್ಚಿನ ಜ್ಞಾನ ವೃದ್ದಿಯಾಗುತ್ತದೆ, ನಮ್ಮೂರಿನ ಮಹಿಳೆಯರು ವರ್ಷವೂ ತಾಳ ಮದ್ದಳೆ ಮತ್ತು ಯಕ್ಷಗಾನ ಕಾರ್ಯಕ್ರಮ ಮಾಡುತ್ತಿರುವುದು ಬಹಳ ಸಂತೋಷ ನೀಡಿದೆ, ಆದರೆ ಇಂದಿನ ಮಕ್ಕಳು ಧಾರ್ಮಿಕ ಮತ್ತು ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಮಹತ್ವ ನೀಡದೆ ಕೇವಲ ಮೋಬೈಲನ ಹಿಂದೆ ಬಿದ್ದಿದ್ದಾರೆ, ಮೋಬೈಲ್ ಎಷ್ಟು ಉತ್ತಮವೋ ಅಷ್ಟೇ ಜೀವಕ್ಕೆ ಹಾನಿ ಎಂದರು.

ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ಮಾಸ್ಕೇರಿ ನಾಯ್ಕ, ಇಂದಿನ ದಿನಗಳಲ್ಲಿ ಯಕ್ಷಗಾನ ತಾಳಮದ್ದಳೆಯಂತ ಕಾರ್ಯಕ್ರಮಗಳು ಕಣ್ಮರೆಯಾಗುತ್ತಿವೆ, ಗುಂದದಂತ ಪ್ರದೇಶದಲ್ಲಿ ವನಿತೆಯರು ಸಾಹಿತ್ಯವನ್ನು ಮತ್ತು ಸಾಂಸ್ಕ್ರತಿಕ ಕ್ಷೇತ್ರವನ್ನು ಉಳಿಸಿಕೊಮಡು ಬಂದಿದ್ದಾರೆ ಎಂದರು.
ನಂದಿಗದ್ದಾ ಗ್ರಾ,ಪಂ,ಅಧ್ಯಕ್ಷ ಅರುಣ ದೇಸಾಯಿ ಮಾತನಾಡಿ ಪ್ರೇರಣಾ ಸಂಸ್ಥೆ ಕಳೆದ 10 ವರ್ಷಗಳಿಂದ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದೆ,ಸರ್ಕಾರದಿಂದ ಬರುವ ಸಣ್ಣ ಅನುಧಾನದಲ್ಲೂ ಉತ್ತಮ ಕಾರ್ಯಕ್ರಮ ನೀಡುತ್ತಾ ನಮ್ಮೂರಿನ ಮಹಿಳೆಯರಿಗೆ ಮಾರ್ಗದರ್ಶನ ನೀಡುತ್ತಿದೆ, ಈ ಸಂಸ್ಥೆಗೆ ನಮ್ಮಿಂದಾದ ಸಹಕಾರ ನೀಡುತ್ತೇನೆ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಪ್ರೇರಣಾ ಸಂಸ್ಥೆ ಅಧ್ಯಕ್ಷೆ ಸುಕನ್ಯಾ ದೇಸಾಯಿ ಮಾತನಾಡಿದರು.
ವೇದಿಕೆಯ ಮೇಲೆ ನಂದಿಗದ್ದಾ ಗ್ರಾ,ಪಂ,ಉಪಾಧ್ಯಕ್ಷೆ ಪ್ರೀಯಾ ಸಾವರಕರ, ಮಂಜುನಾಥ ಭಾಗ್ವತ, ಗಾಯಕ ದಯಾನಂದ ದಾನಗೇರಿ, ಸಾಹಿತಿ, ಮನೋಹರ ಜನ್ನು, ಶಿಕ್ಷಕ ಜನಾರ್ಧನ ಹೆಗಡೆ,ಎಸ್,ಟಿ,ದಾನಗೇರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರೇರಣಾ ಸಂಸ್ಥೆ ಸದಸ್ಯೆ ಸೀತಾ ದಾನಗೇರಿ ನಿರೂಪಿಸಿದರು.
Leave a Comment