
ಹೌದು ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಇಲ್ಲಿಯ ತಾಲೂಕಾ ಪಂಚಾಯಿತಿಯನ್ನು ಎಂಇಎಸ್ ಹಿಡಿತದಿಂದ ಕಿತ್ತುಕೊಳ್ಳುವ ಸಿದ್ದತೆ ಜೋರಾಗಿ ನಡೆದಿದೆ.
ತಾ.ಪಂ. ಅಧ್ಯಕ್ಷೆ ನಂದಾ ಕೊಡಚವಾಡಕರ ವಿರುದ್ಧ ಅವಿಶ್ವಾಸ ಸೂಚನೆ ಪತ್ರ ನೀಡಲಾಗಿದೆ.
ಸದ್ಯಕ್ಕೆ ಎಂಇಎಸ್ ಹಿಡಿತದಲ್ಲಿರುವ ತಾಲೂಕಾ ಪಂಚಾಯತಿ ದಿವಂಗತ ಶಾಸಕ ಪ್ರಲ್ಹಾದ ರೇಮಾನಿ ಅವರ ಶಾಸಕ ಅವಧಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು.45ವರ್ಪಗಳ ಕಾಲ ಎಂಇಎಸ್ ಹಿಡಿತದಲ್ಲಿದ್ದ ತಾಲೂಕಾ ಪಂಚಾಯತಿ ಅಧಿಕಾರ ಕಿತ್ತು ಕೊಂಡಿತ್ತು.
ಆದರೆ ಬದಲಾದ ರಾಜಕೀಯದಲ್ಲಿ ಮತ್ತೆ ಎಂಇಎಸ್ ಮೈಲುಗೈ ಸಾಧಿಸಿತ್ತು. ಈಗಾಗಲ್ಲೇ 40ತಿಂಗಳು ಅದ್ಯಕ್ಷರ ಅವಧಿ ಮುಗಿದಿದ್ದು,20ತಿಂಗಳ ಅವಧಿ ಮಾತ್ರ ಉಳಿದಿದೆ. ತಾಲೂಕಾ ಪಂಚಾಯಿತಿನ 12 ಸದಸ್ಯರು ಎಇಓ ಲಕ್ಷ್ಮಣರಾವ್ ಯಕ್ಕುಂಡಿ ಅವರರಿಗೆ ಸಹಿಮಾಡಿ ಪತ್ರ ಸಲ್ಲಿಸಿದ್ದಾರೆ.
ಇದರಿಂದ ಸೆ 27 ರಂದು ಕಾರ್ಯನಿರ್ವಾಹಕರು ಕರೆದ ತಾಲೂಕಾ ಪಂಚಾಯತಿ ವಿಶೇಷ ಸಭೆಗೆ ಮಹತ್ವ ಬಂದಿದೆ. ತಾಲೂಕಾ ಪಂಚಾಯಿತಿಯಲ್ಲಿ ಒಟ್ಟು 24 ಸದಸ್ಯರಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಎರಡು ಗುಂಪು ಸಮಬಲವಾಗಿದೆ.
ಬಿಜೆಪಿ ಸದಸ್ಯರ ನಡೆಗೆ ಕಾಂಗ್ರೆಸ್ ಕೂಡ ಬೆಂಬಲ ನೀಡಿದೆ.ಇಲ್ಲಿ ಬಿಜೆಪಿ ನಾಯಕರು ಒಗ್ಗಟ್ಟು ಕಾಯ್ದು ಕೊಳ್ಳುವರೊ ಇಲ್ಲವೋ ಎನ್ನುವುದು ನಿಗೂಢವಾಗಿದೆ. ಬಿಜೆಪಿ ಸದಸ್ಯರು ತಮ್ಮ ನಡೆ ಕುರಿತು ಯಾವುದೇ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಎಲ್ಲದಕ್ಕೂ ಕಾಯ್ದು ನೋಡೋಣ ಎನ್ನುವ ಮನೋಭಾವ ವ್ಯಕ್ತ ಪಡಿಸುತ್ತಿದ್ದಾರೆ.
ಅವಿಶ್ವಾಸ ಪತ್ರಕ್ಕೆ ಸಹಿ ಮಾಡಿದ 12 ಸದಸ್ಯರನ್ನು ಹೊರತು ಪಡಿಸಿ ಉಳಿದವರು ಎಂಇಎಸ್ ಪರವಾಗಿದ್ದಾರೆಯೋ ಇಲ್ಲ ,ವಿರೋಧವಾಗಿದ್ದಾರೋ ಎನ್ನುವದು ಸ್ಪಷ್ಟಗೊಂಡಿಲ್ಲ. ಸದ್ಯಕ್ಕೆ ಎಂಇಎಸ್ ಕೂಡಾ ಒಡೆದು ಎರಡು ಗುಂಪುಗಳಾಗಿದ್ದು. ಸಂಖ್ಯಾ ಬಲ ಉಳಿಸಿಕೊಳ್ಳಲು ಅದು ಹೆಣಗಬೇಕಿದೆ.
ಎಂಇಎಸ್ ಪರ ಇರುವ ತಾ.ಪಂ.ಸದಸ್ಯರು ತಮ್ಮ ನಾಯಕರ ಮಾತಿಗೆ ಬೆಲೆ ಕೊಡುತ್ತಾರೆಯೋ , ಇಲ್ಲ ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತಾರೆಯೋ ಎನ್ನುವುದು ಕಾಯ್ದು ನೋಡಬೇಕಾಗಿದೆ. ಎಂಇಎಸ್ ನಾಯಕರು ನಮ್ಮಲ್ಲಿ ಒಗ್ಗಟ್ಟಿಗೆ ಯಾರು ದ್ರೋಹ ಮಾಡಲ್ಲ ಎಂದು ಹೇಳುತ್ತಿದ್ದರೂ ಅವರಿಗೆ ಅಳುಕಿದೆ.
ಮಾಜಿ ಎಂಇಎಸ್ ಶಾಸಕ ಅರವಿಂದ್ ಪಾಟೀಲ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಧ್ಯಕ್ಷ ವಿರುದ್ಧ ಅವಿಶ್ವಾಸ ಸೋಲುವಂತೆ ಮಾಡಲು ಪ್ರಯತ್ನಿಸಿಸಬಹುದಾಗಿದೆ.
ಹಾಲಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಇದರಿಂದ ದೂರ ವಾಗಿದ್ದಾರೆ.ಆರಂಭದಲ್ಲೇ ಬಿಜೆಪಿಗೆ ತಾಲೂಕಾ ಪಂಚಾಯಿತಿಯಲ್ಲಿ ಅದ್ಯಕ್ಷ ಸ್ಥಾನ ಪಡೆದುಕೊಳ್ಳುವ ಅವಕಾಶವಿತ್ತು. ಆದರೆ ಬಿಜೆಪಿ ನಾಯಕರೊಬ್ಬರು ತೆರೆಮರೆಯಲ್ಲಿ ನಡೆಸಿದ ಆಟದಿಂದ ಬಿಜೆಪಿ ವಿಫಲವಾಯಿತು.
ಅದ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಶಾಸಕರಾಗಿದ್ದ ರಿಂದ ಅರವಿಂದ ಪಾಟೀಲರ ಪ್ರಭಾವ ಇತ್ತು.ಇದು ಬಿಜೆಪಿಯ ಹಿನ್ನೆಲೆಗೆ ಕಾರಣವಾಯಿತು. ಈಗ ಕ್ಷೇತ್ರದ ಶಾಸಕರು ಬದಲಾಗಿದ್ದು ರಾಜಕೀಯ ಬದಲಾವಣೆಯಾಗುವುದೊ ತಿಳಿಯುತ್ತಿಲ್ಲ. ಕಾಂಗ್ರೇಸ ಶಾಸಕರಾಗಿರುವ ಡಾಕ್ಟರ್ ಅಂಜಲಿ ನಿಂಬಾಳಕರ ಇದರಲ್ಲಿ ಭಾಗವಹಿಸಿಲ್ಲವಾದರೂ ತಮ್ಮ ಪ್ರತಿಸ್ವರ್ಧಿ ಮಾಜಿ ಶಾಸಕ ಅರವಿಂದ ಪಾಟೀರರ ನಡೆಗೆ ಪರೋಕ್ಷವಾಗಿ ವಿರೋಧಿಸುವ ಸಾದ್ಯತೆಗಳಿವೆ. ಅದ್ಯಕ್ಷರ ಅವಿಶ್ವಾಸ ಮಂಡನೆಗೆ ಬೆಂಬಲ ಸಿಗುವುದೋ ಇಲ್ಲ ವಿಫಲವಾಗುವದೋ ಎನ್ನುವುದು ಸೆಂಪ್ಟಬರ್ 27 ರಂದು ಸ್ಪಷ್ಟವಾಗಿ ತಿಳಿಯಲಿದೆ.
Leave a Comment